ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಏರ್ಪೋರ್ಟಲ್ಲಿ ಅಕ್ರಮ ಚಿನ್ನಸಾಗಾಟ, ಓರ್ವನ ಬಂಧನ

|
Google Oneindia Kannada News

ಮಂಗಳೂರು, ಅಕ್ಟೋಬರ್ 23: ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿನಿಮೀಯ ಶೈಲಿಯ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದಾರೆ.

ಸುಮಾರು 1 ಕೆ.ಜಿ ತೂಕದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದು ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡು ನಿವಾಸಿ ರಫೀಕ್ ಮೊಯಿದೀನ್ (36) ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಅಕ್ರಮ ಚಿನ್ನ ಸಾಗಾಣಿಕೆದಾರನಾಗಿದ್ದಾನೆ.

Smuggling of Gold in film style at Mangaluru Airport, one arrested

ಈತ ತನ್ನ ಎರಡೂ ಕಾಲಿನ ಉದ್ದಕ್ಕೂ ಚಿನ್ನದ ಪುಡಿ ತುಂಬಿದ ಪ್ಲಾಸ್ಟಿಕ್ ಕವರನ್ನು ಗಮ್ ಮೂಲಕ ಅಂಟಿಸಿಕೊಂಡಿದ್ದ. ಯಾರಿಗೂ ಅನುಮಾನವೇ ಬಾರದ ರೀತಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಚಿನ್ನ ಸಾಗಿಸುವ ಪ್ರಯತ್ನ ಈತ ನಡೆಸಿದ್ದ ಎಂದು ಹೇಳಲಾಗಿದೆ.

ಆದರೆ ವಿಮಾನ ನಿಲ್ದಾಣದಲ್ಲಿರಫೀಕ್ ಮೊಯಿದ್ದೀನ್ ನಡವಳಿಕೆ ಕಸ್ಟಮ್ಸ್ ಅಧಿಕಾರಿಗಳಲ್ಲಿ ಅನುಮಾನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ರಫೀಕ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ತನಿಖೆಗೆ ಒಳಪಡಿಸಿದರು.

ಈ ಸಂದರ್ಭದಲ್ಲಿ ಅಕ್ರಮ ಚಿನ್ನ ಸಾಗಾಟದ ಈತನ ತಂತ್ರ ಬಯಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ 31,31,689 ರೂಪಾಯಿ ಮೌಲ್ಯದ 1.58 ಕಿಲೋ ಗ್ರಾಂ ತೂಕದ ಚಿನ್ನ ವಶಪಡಿಸಿಕೊಂಡಿದ್ದಾರೆ.

English summary
Gold Smuggler arrested in Mangaluru International Airport by Custom officials. The arrested is identified as Rafiq (36).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X