ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೀತ ಸಾಧಕ ಹರಿಹರನ್ ಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

|
Google Oneindia Kannada News

ಮಂಗಳೂರು, ಡಿಸೆಂಬರ್ 20 : ಆಳ್ವಾಸ್ ವಿರಾಸತ್ 2019 ಪ್ರಶಸ್ತಿಗೆ ಖ್ಯಾತ ಗಾಯಕ ಹಾಗೂ ಫ್ಯೂಶನ್ ಸಂಗೀತ ಸಾಧಕ ಹರಿಹರನ್ ಅವರನ್ನು ಆಯ್ಕೆ ಮಾಡಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರತಿವರ್ಷ ಆಯೋಜಿಸುವ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವದಲ್ಲಿ ಹರಿಹರನ್ ಅವರು ಈ ಪ್ರಶಸ್ತಿ ಪಡೆಯಲಿದ್ದಾರೆ.

ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ಈ ಬಾರಿ ಖ್ಯಾತ ಹಿನ್ನೆಲೆ ಗಾಯಕ, ಫ್ಯೂಶನ್ ಸಂಗೀತ ಸಾಧಕ ಹರಿಹರನ್ ಅವರಿಗೆ "ಆಳ್ವಾಸ್ ವಿರಾಸತ್-2019"ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಬೆನಡ್ರಿಲ್ ಬಿಗ್ ಗೋಲ್ಡನ್ ವಾಯಿಸ್ ಸ್ಪರ್ಧೆಗೆ ಸೋನು ಜಡ್ಜ್ಬೆನಡ್ರಿಲ್ ಬಿಗ್ ಗೋಲ್ಡನ್ ವಾಯಿಸ್ ಸ್ಪರ್ಧೆಗೆ ಸೋನು ಜಡ್ಜ್

ಮೂಡಬಿದ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು , ಇದೇ ಬರುವ ಜನವರಿ 4 ರಿಂದ 6ರವರೆಗೆ ಮೂಡುಬಿದಿರೆಯ ಪುತ್ತಿಗೆಯಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿದೆ. ಈ ಬಾರಿ ಸಂಸ್ಕೃತಿ ಪ್ರಿಯರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಸದೌತಣ ನೀಡಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು.

Singer Hariharan have been selected for Alvas Virastha 2019 award

ಜನಪದ ಸಾರ ಸೂಸುವ ಸೋಜುಗದ ಸೂಜು ಮಲ್ಲಿಗೆ, ತಪ್ಪದೇ ಪಾಲ್ಗೊಳ್ಳಿಜನಪದ ಸಾರ ಸೂಸುವ ಸೋಜುಗದ ಸೂಜು ಮಲ್ಲಿಗೆ, ತಪ್ಪದೇ ಪಾಲ್ಗೊಳ್ಳಿ

ಆಳ್ವಾಸ್ ವಿರಾಸತ್ ನಲ್ಲಿ ಕಾರ್ಯಕ್ರಮ ಕಳೆದ 25 ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಈ ಬಾರಿ ಮಹೋನ್ನತ ಸಾಂಸ್ಕೃತಿಕ ಪ್ರತಿಭೆಯೊಂದನ್ನು ಗುರುತಿಸಿ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 1ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ ಎಂದು ಮೋಹನ ಆಳ್ವ ತಿಳಿಸಿದರು.

English summary
Famous playback and ghazal singer Hariharan have been selected for Alvas Virastha 2019 award .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X