ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ರೇಷ್ಮೆಇಲಾಖೆ ಸಿಬ್ಬಂದಿಗಳಿಗೆ 7 ತಿಂಗಳಿಂದ ಸಂಬಳವಿಲ್ಲ

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಡಿಸೆಂಬರ್. 21 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 7 ತಿಂಗಳಿಂದ ಸಂಬಳ ನೀಡಿಲ್ಲ .

ಇದರಿಂದ ಸರಕಾರಿ ಕೆಲಸವಿದ್ದರೂ ಕುಟುಂಬ ನಿರ್ವಹಣೆಗೆ ಸಾಲ ಮಾಡಬೇಕಾದ ಸ್ಥಿತಿ ಇಲಾಖೆಯ ಸಿಬ್ಬಂದಿಗಳಿಗೆ ಎದುರಾಗಿದೆ. ರೇಷ್ಮೆ ಇಲಾಖೆ ಉಪನಿರ್ದೇಶಕರ ಹುದ್ದೆಯನ್ನು ಮಂಗಳೂರಿನಿಂದ ಎತ್ತಂಗಡಿ ಮಾಡಿರುವುದು ಇದಕ್ಕೆ ಕರಣ ಎಂಬುದು ತಿಳಿದು ಬಂದಿದೆ. ಇಲಾಖೆಗೆ ಬಂದ ಅನುದಾನವನ್ನು ಖರ್ಚು ಮಾಡಲಾಗದ ಸಿಬ್ಬಂದಿಗೆ ಸರ್ಕಾರ ಉಪವಾಸ ಭಾಗ್ಯ ಕರುಣಿಸಿದಂತಾಗಿದೆ.

ಮಂಗಳೂರಿನಲ್ಲಿದ್ದ ಉಪನಿರ್ದೇಶಕರ ಕಚೇರಿಗೆ ರೇಷ್ಮೆ ಉಪನಿರ್ದೇಶಕ ಹುದ್ದೆ ಇತ್ತು. ಆದರೆ, ಇದೀಗ ಆ ಹುದ್ದೆ ಉನ್ನತೀಕರಣ ಗೊಂಡು ಬೆಂಗಳೂರು ಕಚೇರಿಗೆ ವರ್ಗಾವಣೆಯಾಗಿದೆ. ಇನ್ನು ನಿರ್ದೇಶಕರಿಲ್ಲದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 12 ಮಂದಿ ಸಿಬ್ಬಂದಿಗಳಿಗೆ ಏಳು ತಿಂಗಳಿನಿಂದ ಸಂಬಳವೇ ಆಗಿಲ್ಲ.

Silk authority employees in Dakshina Kannada have no salary from past 7 months

ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ರೇಷ್ಮೆ ಕೃಷಿ ಕ್ಷೇತ್ರ, ಬೆಳ್ತಂಗಡಿ ರೇಷ್ಮೆ ಕಚೇರಿ, ಕೊಲ್ಯ ಕಚೇರಿ ಹಾಗು ಸುಳ್ಯ ಕಚಾರಿಯಲ್ಲಿ ತಲಾ ಇಬ್ಬರು ಸಿಬ್ಬಂದಿ ಇದ್ದಾರೆ.

ಈ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 10 ಮಂದಿ ಮುಂದಿನ 2 ವರ್ಷದಲ್ಲಿ ವಿವೃತ್ತರಾಗಲಿದ್ದು, ಇಲಾಖೆಯಲ್ಲಿರುವ ಏಕೈಕ ಪ್ರಥಮ ದರ್ಜಿ ಸಹಾಯಕರನ್ನು ಜಿಪಂಗೆ ನಿಯೋಜನೆ ಮಾಡಲಾಗಿದೆ.

ನಿವೃತ್ತಿ ಅಂಚಿನಲ್ಲಿರುವವರು ಸಹಜವಾಗಿಯೇ ವಯಸ್ಸಿನ ಸಮಸ್ಯೆಗಳು, ಸರಕಾರಿ ಕೆಲಸವಿದ್ದರೂ ಕುಟುಂಬ ನಿರ್ವಹಣೆಗೆ ಸಾಲ ಮಾಡಬೇಕಾದ ಸ್ಥಿತಿ ಇಲಾಖೆಯ ಸಿಬ್ಬಂದಿಗಳಿಗೆ ಎದುರಾಗಿದೆ.

ಬಂಟ್ವಾಳದಲ್ಲಿರುವ ರೇಷೆ ಸಹಾಯಕ ನಿರ್ದೇಶಕ ಸಿದ್ದರಾಜು ಅವರು ರಾಜ್ಯ ವಲಯದಲ್ಲಿ ಕೆಲಸ ಮಾಡುವ ಕಾರಣದಿಂದ ಅವರಿಗೆ ಮಾತ್ರ ಪ್ರತೀ ತಿಂಗಳು ಸಂಬಳ ಬರುತ್ತಿದೆ.

English summary
Silk authority employees in Dakshina Kannada have no salary from past 7 months. Though the board has been receiving grants from the government yet the authorities have no salary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X