ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಂಡತಿ, ತಾಯಿ ಪೂಜಾ ಫಲದಿಂದ ಸಿದ್ದರಾಮಯ್ಯ ಬದುಕಿದ್ದಾರೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 20; 'ಕಾಶ್ಮೀರ ಫೈಲ್ಸ್' ಚಿತ್ರದಂತೆಯೇ ಗೋದ್ರಾ ಹತ್ಯಾಕಾಂಡದ ಕುರಿತು ಚಲನಚಿತ್ರ ಮಾಡುವಂತೆ ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್‌ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿ ಕಾರಿದ್ದಾರೆ.

"ಗುಜರಾತ್ ಹತ್ಯಾಕಾಂಡದ ಸಿನಿಮಾ ಮಾಡಿದರೆ ಸಿದ್ದರಾಮಯ್ಯ ನೋಡಬೇಕು. ಅಲ್ಲಿ ಮುಸಲ್ಮಾನರು ಮಾಡಿದ ಅತ್ಯಾಚಾರವನ್ನು ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಿಜಾಬ್ ಪ್ರಕರಣದಲ್ಲಿ ಇವರಿಗೆ ಹಿಜಾಬ್ ದೊಡ್ಡ ವಿಷಯ ಆಗಿಲ್ಲ. ಹುಡುಗರು ಕೇಸರಿ ಶಾಲು ಹಾಕಿರೋದು ದೊಡ್ಡ ವಿಷಯ ಆಗಿದೆ. ನಮ್ಮ‌ ಬದುಕಿಗಾಗಿ ನಾವು ಹೋರಾಟ ಮಾಡುತ್ತೇವೆ" ಎಂದರು.

ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಷಯದಲ್ಲಿ ಆರ್‌ಎಸ್‌ಎಸ್‌ ಹಸ್ತಕ್ಷೇಪವಿಲ್ಲ: ಕಲ್ಲಡ್ಕ ಪ್ರಭಾಕರ್ ಭಟ್ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಷಯದಲ್ಲಿ ಆರ್‌ಎಸ್‌ಎಸ್‌ ಹಸ್ತಕ್ಷೇಪವಿಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

"ಇವತ್ತಿನವರಿಗೆ ಹಿಂದೂ ಅವನಾಗೆ ಪ್ರತಿಕ್ರಿಯೆ ಮಾಡಿದ್ದು ಇಲ್ಲ. ಕೆಲವು ಕಡೆಗಳಲ್ಲಿ ಪ್ರತಿಕ್ರಿಯೆ ಮಾತ್ರ ಮಾಡಿದ್ದಾನೆ. ನೀವು ಪ್ರೇರೆಪಿಸುವುದು ನಿಲ್ಲಿಸಿ ಪ್ರತಿಕ್ರಿಯೆ ತನ್ನಿಂತಾನೇ ನಿಲ್ಲುತ್ತದೆ. ಸಿದ್ದರಾಮಯ್ಯ ಬೇಕಾದರೆ ಒಂದು ಸಲ ಹೋಗಿ ಬರಲಿ. 56 ಜನರನ್ನು ರೈಲಿನಲ್ಲಿ ಬೆಂಕಿ ಹಾಕಿ ಕೊಂದರಲ್ವಾ?. ಅವರ ಮನೆಗೆ ಹೋಗಿ ಕುಟುಂಬದ ದುಃಖ ಏನು? ಎಂದು ಕೇಳಿದಾಗ ಗೊತ್ತಾಗುತ್ತದೆ" ಎಂದು ಪ್ರಭಾಕರ್ ಭಟ್ ಹೇಳಿದರು.

ಕಾಶ್ಮೀರ್ ಫೈಲ್ಸ್‌ನಂತೆ ಗೋಧ್ರಾ ಹತ್ಯಾಕಾಂಡ ಬಗ್ಗೆಯೂ ಸಿನಿಮಾ ಮಾಡಲಿ; ಸಿದ್ದರಾಮಯ್ಯಕಾಶ್ಮೀರ್ ಫೈಲ್ಸ್‌ನಂತೆ ಗೋಧ್ರಾ ಹತ್ಯಾಕಾಂಡ ಬಗ್ಗೆಯೂ ಸಿನಿಮಾ ಮಾಡಲಿ; ಸಿದ್ದರಾಮಯ್ಯ

Siddaramaiah Alive Due To Prayers Of His Mother And Wife Says Kalladka Prabhakar Bhat

"ಹಿಜಾಬ್‌ನ ಬಗ್ಗೆ ಇವರಿಗೆ ಮಾತನಾಡಲು ಧೈರ್ಯವಿಲ್ಲ. ಆ ಕಡೆ ಮಾತನಾಡಿದರೆ ಓಟು ಹೋಗುತ್ತದೆ. ಈ ಕಡೆ ಮಾತನಾಡಿದರೆ ಓಟು ಹೋಗುತ್ತದೆ. ಸಿದ್ದರಾಮಯ್ಯ ಬಗ್ಗೆ ಗೌರವವಿದೆ ಆದರೆ ಹುಚ್ಚುಚ್ಚು ಮಾತನಾಡಬಾರದು. ದಾರಿ ಮಧ್ಯೆ ದನದ ಮಾಂಸ ತಿನ್ನುತ್ತೇನೆ ಅಂದರು. ಆದರೆ ಬೆಳಗ್ಗಿನಿಂದ ರಾತ್ರಿವರೆಗೆ ಅವರ ತಾಯಿ, ಹೆಂಡತಿ ದೇವರನ್ನು ಪೂಜೆ ಮಾಡುತ್ತಾರೆ. ಹೀಗೆಂದು ಹೆಂಡ್ತಿ ತಾಯಿಯನ್ನು ಮನೆಯಿಂದ ಹೊರಗೆ ಹಾಕುತ್ತಾರೆಯೇ? ಇವರು" ಎಂದು ಪ್ರಭಾಕರ್ ಭಟ್ ಪ್ರಶ್ನೆ ಮಾಡಿದರು.

ಕಾಂಗ್ರೆಸ್ ದೇಶ ಮುನ್ನಡೆಸುವ ಪ್ರಬಲ ಶಕ್ತಿಯಾಗಲಿದೆ; ಸಿದ್ದರಾಮಯ್ಯ ಕಾಂಗ್ರೆಸ್ ದೇಶ ಮುನ್ನಡೆಸುವ ಪ್ರಬಲ ಶಕ್ತಿಯಾಗಲಿದೆ; ಸಿದ್ದರಾಮಯ್ಯ

"ಹೆಂಡತಿ, ತಾಯಿಯವ ಪುಣ್ಯದ ಫಲದಿಂದ ಸಿದ್ದರಾಮಯ್ಯ ಬದುಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿರಬೇಕು. ಹಿಂದೂ ಸಮಾಜವನ್ನು ಹೀಯಾಳಿಸುವ ಕೆಲಸ ಮಾಡಬಾರದು" ಎಂದು ಮಂಗಳೂರಿನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಮಂಗಳೂರು ಹೊರವಲಯದ ಕುತ್ತಾರು ಬಳಿಯ ಕೊರಗಜ್ಜ ದೈವದ ಆದಿ ಕ್ಷೇತ್ರದಲ್ಲಿ ನಡೆದ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಕರಾವಳಿಯ ಕಾರ್ನಿಕ ದೈವ ಕೊರಗಜ್ಜ ಕ್ಷೇತ್ರದ ಕಡೆ ಭಕ್ತರ ನಡಿಗೆ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ್ ಭಟ್ ಮಾತನಾಡಿದರು.

ಭಾನುವಾರ ಮಂಗಳೂರಿನ ಕದ್ರಿ ದೇವಸ್ಥಾನದಿಂದ ಕುತ್ತಾರಿನ ಕೊರಗಜ್ಜ ದೇವಸ್ಥಾನದಲ್ಲಿ ಸಂಪನ್ನವಾಗಿದೆ. ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಸಾವಿರಾರು ಭಕ್ತರು ಸುಮಾರು 15 ಕಿ. ಮೀ. ದೂರದ ಆದಿ ಕ್ಷೇತ್ರವನ್ನು ಪಾದಯಾತ್ರೆ ಮೂಲಕ ಕ್ರಮಿಸಿದ್ದಾರೆ. ಬಳಿಕ‌ ನಡೆದ ಧಾರ್ಮಿಕ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಿಂದೂ ಮುಖಂಡರು ಭಾಗಿಯಾಗಿದ್ದರು.

ಕುತ್ತಾರಿ‌ನ ಕೊರಗಜ್ಜ ದೈವದ ಆದಿಸ್ಥಳದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಪ್ರಭಾಕರ್ ಭಟ್, "ಈ ನಡೆ ಎರಡು ಕಾರಣದಿಂದ ನಡೆಯುತ್ತಿದೆ, ಬೆಳಿಗ್ಗೆಯೇ ಸಾವಿರಾರು ಮಂದಿ ಹೊರಟು ತಲುಪಿದ್ದಾರೆ. ನಮ್ಮ ದೈವ ದೇವರ ಬಗ್ಗೆ ಅವಹೇಳನ, ಕಾಣಿಕೆ ಡಬ್ಬಿಗೆ ಅಸಹ್ಯದ ವಸ್ತು ಹಾಕಿದ ಕಾರ್ಯ ಆಗಿದೆ. ಹೀಗಾಗಿ ಹಿಂದೂ ಸಮಾಜ ಜೀವಂತವಾಗಿದೆ ಅಂತ ತೋರಿಸೋಕೆ ಈ ನಡಿಗೆಯಾಗಿದೆ" ಎಂದರು.

"ಆಕ್ರಮಣ ಆದಾಗ ಪ್ರತಿರೋಧ ತೋರಿಸೋದು ಆಗಿದೆ. ನಮ್ಮ ಶಾಂತಿ, ಸಾಮರಸ್ಯದ ಜೀವನ ದೌರ್ಬಲ್ಯ ಅಂದುಕೊಂಡರೆ ಹೆಚ್ಚು ದಿನ ನಡೆಯಲ್ಲ. ಹಿಜಾಬ್ ಹೆಸರಲ್ಲಿ ಕೋರ್ಟಿಗೆ ಹೋದರು. ಆದರೆ ತೀರ್ಪನ್ನು ಒಪ್ಪಲಿಲ್ಲ. ಅದು ಬಿಟ್ಟು ಪ್ರತಿಭಟನೆ ಮತ್ತು ನ್ಯಾಯಾಂಗ ನಿಂದನೆ ಮಾಡಿದರು. ನಮ್ಮ ದೋಸ್ತಿ ಅಂತ ತಿಳಿದವ ಮೆಡಿಕಲ್ ಕೂಡ ಬಂದ್ ಮಾಡಿದ. ಅವರಿಗೆ ಯಾವ ದೋಸ್ತಿಯೂ ಇಲ್ಲ, ಮುಸಲ್ಮಾನ ಸಾಮ್ರಾಜ್ಯ ನಿರ್ಮಾಣ ಒಂದೇ ಅವರ ಗುರಿ. ಹೀಗಾಗಿ ಹಿಂದೂ ಸಮಾಜ ಒಗ್ಗಟ್ಟಾಗಲು ಈ ನಡಿಗೆ. ಅಬ್ದುಲ್ ಕಲಾಂ, ಜಡ್ಜ್ ಅಬ್ದುಲ್ ನಝೀರ್ ಹೀಗೆ ಕೆಲವರು ಶ್ರೇಷ್ಠರಿದ್ದಾರೆ. ಆದರೆ ನಾಲ್ಕನೇಯ ಒಳ್ಳೆಯವ ಯಾರು? ಅಂತ ಭೂತ ಕನ್ನಡಿ ಹಿಡಿದು ಹುಡುಕಬೇಕಿದೆ" ಎಂದು ಪ್ರಭಾಕರ್ ಭಟ್ ಹೇಳಿದರು.

"ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು. ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು. ಇದು ಯಾಕೆ ಅಂತ ನಾನು ಈ ಬಗ್ಗೆ ಸ್ಪಷ್ಟೀಕರಣ ಕೊಡುತ್ತೇನೆ. ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು. ಮೊದಲು ಬ್ರಿಟಿಷರ ಧ್ಬಜ ಇತ್ತು, ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು. ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್‌ನಲ್ಲಿ ಮೂರನೆಯವರ ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು" ಎಂದರು.

"ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ. ಹೀಗೆಯೇ ಮುಂದುವರೆದರೆ ಹಿಂದೂ ಸಮಾಜ ಒಟ್ಟಾಗುತ್ತೆ. ಇವತ್ತು ಕಾಶ್ಮೀರ ಫೈಲ್ಸ್‌ನಲ್ಲಿ ನೀವು ನೋಡೋದು ಸಣ್ಣ ತುಂಡಷ್ಟೇ. ದೇಶದಲ್ಲಿ ಧರ್ಮದ ಹತ್ಯೆ ಆದಾಗಲೂ ಕಾಂಗ್ರೆಸ್ ಒಪ್ಪಿಕೊಂಡಿತು. ಇವತ್ತು‌ ಅದೇ ರೀತಿ ಹಿಜಾಬ್ ಬಂದಿದೆ, ಕಿತಾಬ್ ಬೇಡ. ಎಲ್ಲಾ ವ್ಯವಸ್ಥೆ ಕೊಟ್ಟರೂ ನಾವು ಪ್ರತ್ಯೇಕವಾದಿ ಅನ್ನೋ ಮನೋಭಾವ ಇದೆ. ಇದು ಈ ದೇಶವನ್ನು ಮುಂದೆ ತುಂಡು ಮಾಡುವ ಪ್ರಯತ್ನ" ಎಂದರು.

English summary
Former chief minister Siddaramaiah till alive due to prayers of his mother and wife said veteran RSS leader Kalladka Prabhakar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X