ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಲಂಕಾ ಪ್ರಧಾನಿ ರನಿಲ್ ಮಂಗಳೂರಿಗೆ ಭೇಟಿ

|
Google Oneindia Kannada News

ಮಂಗಳೂರು, ನವೆಂಬರ್ 21: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ಮಂಗಳವಾರ (ನ.೨೧)ರಂದು ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರಿನ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶ್ರೀಲಂಕಾ ಪ್ರಧಾನಿ ನಂತರ ರಸ್ತೆ ಮೂಲಕ ಬುಲೆಟ್ ಪ್ರೂಫ್ ಅಂಬಾಸಿಡರ್ ಕಾರಿನಲ್ಲಿ ಮಂಗಳೂರು ನಗರಕ್ಕೆ ಆಗಮಿಸಿದರು.

ಕೊಲ್ಲೂರಿಗೆ ಗಣ್ಯರ ಭೇಟಿ, ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧಕೊಲ್ಲೂರಿಗೆ ಗಣ್ಯರ ಭೇಟಿ, ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಗೇಟ್ ವೇ ಹೊಟೇಲ್ ಗೆ ಆಗಮಿಸಿದ ಅವರು ಅಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿದರು. ಶ್ರೀಲಂಕಾ ಭದ್ರತಾ ಪಡೆ ಪೂರ್ತಿಯಾಗಿ ಹೋಟೆಲ್ ಆವರಣದಲ್ಲಿ ಸುತ್ತುವರಿದಿತ್ತು.

ಪ್ರತಿಕೂಲ ಹವಮಾನ, ಶ್ರೀಲಂಕಾ ಪ್ರಧಾನಿ ಕೊಲ್ಲೂರು ಭೇಟಿ ರದ್ದುಪ್ರತಿಕೂಲ ಹವಮಾನ, ಶ್ರೀಲಂಕಾ ಪ್ರಧಾನಿ ಕೊಲ್ಲೂರು ಭೇಟಿ ರದ್ದು

Shrilanka Prime Minister in Mangaluru

ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೂ ಹೊಟೇಲ್ ಪ್ರವೇಶ ಇರಲಿಲ್ಲ. ಸಾರ್ವಜನಿಕರಿಗೂ ಹೊಟೇಲ್ ಪ್ರವೇಶ ನಿರ್ಬಂಧಿಸಲಾಗಿದೆ. ಉಪಾಹಾರದ ಬಳಿಕ ಮಂಗಳೂರಿನಿಂದ ಕೊಲ್ಲೂರಿಗೆ ಹೆಲಿಕಾಪ್ಟರ್ ಮೂಲಕ ಶ್ರೀಲಂಕಾ ಪ್ರಧಾನಿ ತೆರಳಲಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿದ ರನಿಲ್ ವಿಕ್ರಮ ಸಿಂಘೆ ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಭೇಟಿ ನೀಡಿ ಚಂಡಿಕಾ ಹೋಮ, ಪೈಜೆ ಸಲ್ಲಿಸಲಿದ್ದಾರೆ.
English summary
Shrilanka Prime Minister Ranil Vikram Singhe is visiting Kollur temple today. He just arrived in Mangaluru by flight.He is having the breakfast at Gateway Hotel. He will go to Kolluru by Helicopter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X