ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ

|
Google Oneindia Kannada News

ಉಡುಪಿ, ಮಾರ್ಚ್ 22: ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಪರ್ವ ಆರಂಭವಾಗಿದೆ. ರಾಜ್ಯದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಸದೆ ಶೋಭಾ ಕರದ್ಲಾಜೆ ಇಂದು ಶುಕ್ರವಾರ ಸಾಂಕೇತಿಕ ನಾಮಪತ್ರ ಸಲ್ಲಿದ್ದಾರೆ.

ಜ್ಯೋತಿಷಿಗಳ ಸಲಹೆ ಪಡೆದ ಶೋಭಾ ಕರಂದ್ಲಾಜೆ ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾಂಕೇತಿಕ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಶುಭ ಶುಕ್ರವಾರ. ಶುಕ್ರವಾರ ಮಹಾಕಾಳಿ ದುರ್ಗೆಯ ದಿನ, ಈ ಹಿನ್ನೆಲೆಯಲ್ಲಿ ನಾಮ ಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು.

ಶೋಭಾ ಕರಂದ್ಲಾಜೆಗೆ ಟಿಕೆಟ್:ಪಕ್ಷೀಯರಿಂದಲೇ ನೋಟಾ ಅಭಿಯಾನ!ಶೋಭಾ ಕರಂದ್ಲಾಜೆಗೆ ಟಿಕೆಟ್:ಪಕ್ಷೀಯರಿಂದಲೇ ನೋಟಾ ಅಭಿಯಾನ!

ಈ ಹಿಂದೆ ನಿರ್ಧರಿಸಿದಂತೆ ಸಾರ್ವಜನಿಕವಾಗಿ 26ಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಮಂಗಳವಾರ ಕೂಡ ದೇವಿಯ ಪವಿತ್ರ ದಿನ. ಆ ದಿನ ಕೇಂದ್ರ ರಕ್ಷಾ ಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿಗೆ ಆಗಮಿಸಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.

Shobha Karandlaje filled nomination in udupi

 ಶೋಭಾಗೆ ಉಡುಪಿ ಟಿಕೆಟ್: ಎಲ್ಲಾ ಅಡೆತಡೆಯನ್ನು ಮೆಟ್ಟಿನಿಂತ ಯಡಿಯೂರಪ್ಪ ಶೋಭಾಗೆ ಉಡುಪಿ ಟಿಕೆಟ್: ಎಲ್ಲಾ ಅಡೆತಡೆಯನ್ನು ಮೆಟ್ಟಿನಿಂತ ಯಡಿಯೂರಪ್ಪ

ನಿರ್ಮಲಾ ಸೀತಾರಾಮನ್ ಕೃಷ್ಣಮಠಕ್ಕೆ ಭೇಟಿ ನೀಡಿ ಪರ್ಯಾಯ ಶ್ರೀಗಳ ಜೊತೆ ಮಾತುಕತೆ ಮಾಡುತ್ತಾರೆ ಎಂದು ಹೇಳಿದ ಅವರು ಮಾರ್ಚ್ 26 ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 12 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ ಎಂದರು. ಉಡುಪಿ ಭೇಟಿ ಸಂದರ್ಭದಲ್ಲಿ ಮೀನುಗಾರರ ಜೊತೆ ನಿರ್ಮಲಾ ಸೀತಾರಾಮನ್ ಚರ್ಚೆ ನಡೆಸುತ್ತಾರೆ

English summary
BJP candidate MP Shobha Karandlaje filled nomination in Udupi -Chikkamagaluru Loksabha constituency over astrologers advice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X