ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಡಿ ಘಾಟ್‌ನಲ್ಲಿ ಮತ್ತೆ ವಾಹನ ಸಂಚಾರ ಆರಂಭ: ಆದರೆ ನಿಯಮಗಳು ಅನ್ವಯ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 16: ಕಳೆದ ಒಂದು ತಿಂಗಳಿನಿಂದ ವಾಹನ ಸಂಚಾರ ಸ್ಥಗಿತವಾಗಿದ್ದ ಶಿರಾಡಿ ಘಾಟ್‌ನಲ್ಲಿ ಮತ್ತೆ ವಾಹನ ಸಂಚಾರ ಆರಂಭವಾಗಿದೆ. ಜುಲೈನಲ್ಲಿ ಸುರಿದ ಭಾರೀ ಮಳೆಗೆ ಶಿರಾಡಿ ಘಾಟ್‌ನ ದೋಣಿಗಲ್ ಎಂಬಲ್ಲಿ ಹೆದ್ದಾರಿ ಕುಸಿತವಾಗಿದ್ದು, ಎಲ್ಲಾ ರೀತಿಯ ವಾಹನ ಸಂಚಾರ ನಿರ್ಬಂಧವಾಗಿತ್ತು. ಇದೀಗ ಹೆದ್ದಾರಿ ದುರಸ್ಥಿ ಕಾರ್ಯ ನಡೆದಿದ್ದು, ಕೆಲ ನಿಯಮಗಳ ಅನುಸಾರವಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಆಗಸ್ಟ್ 16ರಿಂದ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರಮುಖವಾಗಿ ‌ಕಾರು, ಜೀಪು, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು, ಆ್ಯಂಬುಲೆನ್ಸ್ ಮತ್ತು ಬಸ್‌ಗಳು ಮತ್ತು 20 ಟನ್ ಸಾಮರ್ಥ್ಯದ ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಬೃಹತ್ ವಾಹನ ಸಂಚಾರಕ್ಕೆ ಅವಕಾಶವಿಲ್ಲ

ಬೃಹತ್ ವಾಹನ ಸಂಚಾರಕ್ಕೆ ಅವಕಾಶವಿಲ್ಲ

ಆದರೆ ಬುಲೆಟ್ ಟ್ಯಾಂಕರ್, ಕಂಟೇನರ್ ಲಾರಿ ಸೇರಿದಂತೆ ಬೃಹತ್ ವಾಹನಗಳಿಗೆ ಸಂಚಾರಕ್ಕೆ ಇನ್ನೂ ಅವಕಾಶವನ್ನು ನೀಡಿಲ್ಲ. ರಸ್ತೆ ಸಂಚಾರ ಆರಂಭಕ್ಕೂ ಮುನ್ನ ಶಾಸಕರು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಪ್ರತೀಕ್ ಬಯಾಲ್, ಜಿಲ್ಲಾಧಿಕಾರಿ ಆರ್. ಗಿರೀಶ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು..

ಶಿರಾಡಿ ಘಾಟ್ ಮತ್ತೆ ಓಪನ್; ಬೃಹತ್ ವಾಹನ‌ ಸಂಚಾರಕ್ಕೆ ನಿಷೇಧಶಿರಾಡಿ ಘಾಟ್ ಮತ್ತೆ ಓಪನ್; ಬೃಹತ್ ವಾಹನ‌ ಸಂಚಾರಕ್ಕೆ ನಿಷೇಧ

ದೋಣಿಗಲ್ ಬಳಿ ವಾಹನ ಸಂಚಾರ ದಟ್ಟಣೆ

ದೋಣಿಗಲ್ ಬಳಿ ವಾಹನ ಸಂಚಾರ ದಟ್ಟಣೆ

ಅಧಿಕಾರಿಗಳ ಪರಿಶೀಲನೆ ಬಳಿಕ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ರಾತ್ರಿಯೇ ಆಗಸ್ಟ್ 16 ಬೆಳಗ್ಗಿನಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಆರಂಭ ಅಂತಾ ಸುದ್ದಿ ಹಬ್ಬಿದ್ದರಿಂದ ಬೆಳಗ್ಗಿನಿಂದಲೇ ದೋಣಿಗಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಟ್ರಾಫಿಕ್ ಜಾಮ್ ಉಂಟಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಒಂದು ತಿಂಗಳಿನಿಂದ ರಸ್ತೆಯಲ್ಲೆ ಮಲಗಿದ್ದೇವೆ

ಒಂದು ತಿಂಗಳಿನಿಂದ ರಸ್ತೆಯಲ್ಲೆ ಮಲಗಿದ್ದೇವೆ

ಕಳೆದ ಒಂದು ತಿಂಗಳಿನಿಂದ ವಾಹನ ಸಂಚಾರ ಬಂದ್ ಆಗಿದ್ದ ಹಿನ್ನಲೆಯಲ್ಲಿ ಶಿರಾಡಿ ಘಾಟ್ ಆರಂಭದ ಗುಂಡ್ಯ ಗಡಿಯಲ್ಲಿ ನೂರಾರು ಲಾರಿಗಳು ಬಾಕಿಯಾಗಿದ್ದವು. ಇದೀಗ ವಾಹನ ಸಂಚಾರಕ್ಕೆ ಅವಕಾಶ ಮಾಡಿದ ಹಿನ್ನಲೆಯಲ್ಲಿ ಲಾರಿ ಚಾಲಕರೂ ಖುಷಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಲಾರಿ ಚಾಲಕ, ಉತ್ತರ ಕರ್ನಾಟಕ ಮೂಲದ ಬಸಪ್ಪ, ಒಂದು ತಿಂಗಳಿನಿಂದ ರಸ್ತೆಯಲ್ಲೆ ಮಲಗಿದ್ದೇವೆ, ಲಾರಿಯಲ್ಲೇ ಮಲಗಿ ದಿನ ದೂಡಿದ್ದೇವೆ, ಮನೆಗೆ ಹೋಗಬೇಕು. ಮನೆಯವರ ಜೊತೆ ಮಾತನಾಡಬೇಕೆಂದು ತುಂಬಾ ಸಲ ಅನಿಸಿದರೂ ರಸ್ತೆ ಕುಸಿದಿದ್ದರಿಂದ ಹೋಗೋಕೆ ಸಾಧ್ಯವಾಗಿರಲಿಲ್ಲ. ಆದರೆ ಈಗ ರಸ್ತೆ ಸಂಚಾರ ಆರಂಭವಾಗಿರುವುದರಿಂದ ಖುಷಿಯಾಗಿದೆ ಅಂತಾ ಹರ್ಷ ವ್ಯಕ್ತಪಡಿಸಿದ್ದಾರೆ.‌

ಹೆದ್ದಾರಿ ಸಂಪೂರ್ಣ ಕುಸಿತ

ಹೆದ್ದಾರಿ ಸಂಪೂರ್ಣ ಕುಸಿತ

ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಶಿರಾಡಿ ಘಾಟ್‌ನ ದೋಣಿಗಲ್ ಎಂಬಲ್ಲಿ ಹೆದ್ದಾರಿ ಸಂಪೂರ್ಣ ಕುಸಿತವಾಗಿತ್ತು.‌ ಇದರಿಂದ ಮಂಗಳೂರು- ಬೆಂಗಳೂರಿಗೆ ಸಂಪರ್ಕಕ್ಕೆ ಅಡಚಣೆ ಉಂಟಾಗಿತ್ತು. ಬದಲಿ ಮಾರ್ಗವಾಗಿ ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್, ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗಗಳನ್ನು ಸೂಚಿಸಲಾಗಿತ್ತು.

ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್ ಆದ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಭಾರೀ ವಾಹನ ಸಂಚಾರ ಆಗಿದ್ದರಿಂದ ಚಾರ್ಮಾಡಿ ಘಾಟ್ ಕೂಡಾ ಕುಸಿತವಾಗುವ ಆತಂಕ ಎದುರಾಗಿತ್ತು. ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಿಂದ ಹೊರ ಜಿಲ್ಲೆಗಳಿಗೆ ಪ್ರಯಾಣ ತ್ರಾಸದಾಯಕವಾಗಿತ್ತು.

English summary
Vehicle Movement has started again in Shiradi Ghat with rules, where traffic has been stopped for the past one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X