ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಬುರ್ಖಾ ಧರಿಸಿದ ಫೋಟೋ ವೈರಲ್

|
Google Oneindia Kannada News

ಮಂಗಳೂರು, ನವೆಂಬರ್. 29: ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಕುಂತಲಾ ಶೆಟ್ಟಿ ಅವರು ಬುರ್ಖಾ ಧರಿಸಿದ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಫೋಟೋದಲ್ಲಿ ಶಕುಂತಲಾ ಶೆಟ್ಟಿ ಸೇರಿದಂತೆ ಪುತ್ತೂರಿನ ಇತರ ಕಾಂಗ್ರೆಸ್ ಪದಾಧಿಕಾರಿಗಳೂ ಇದ್ದಾರೆ.

Shakunthala Shettys Burka photo viral in social media

ಅಂಬರೀಶ್- ಸುಮಲತಾ ಜೀವನಪ್ರೀತಿ ತೋರಿಸುವ ಈ ವಿಡಿಯೋ ನೋಡಿದ್ದೀರಾ?ಅಂಬರೀಶ್- ಸುಮಲತಾ ಜೀವನಪ್ರೀತಿ ತೋರಿಸುವ ಈ ವಿಡಿಯೋ ನೋಡಿದ್ದೀರಾ?

ದುಬೈನಲ್ಲಿ ಇತ್ತೀಚೆಗೆ ನಡೆದ ವಿಶ್ವ ತುಳು ಸಮ್ಮೇಳನಕ್ಕೆ ತೆರಳಿದ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ ಎಂದು ಹೇಳಲಾಗಿದೆ. ಗಲ್ಫ್ ರಾಷ್ಟ್ರಗಳ ಕೆಲವು ಪ್ರದೇಶಗಳಲ್ಲಿ ಬುರ್ಖಾ ಹಾಕುವುದು ಕಡ್ಡಾಯವಾಗಿದ್ದು, ಶಕುಂತಲಾ ಶೆಟ್ಟಿ‌ ಕೂಡ ಅಲ್ಲಿನ ಕಾನೂನು ಪ್ರಕಾರ ಬುರ್ಖಾ ತೊಟ್ಟಿದ್ದಾರೆ ಎನ್ನುವ ಸ್ಪಷ್ಟನೆಯನ್ನು ಈಗಾಗಲೇ ಪುತ್ತೂರಿನ ಕಾಂಗ್ರೆಸ್ ಮುಖಂಡರು ನೀಡಿದ್ದಾರೆ.

Shakunthala Shettys Burka photo viral in social media

 ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ: ವಿಡಿಯೋ ವೈರಲ್ ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ: ವಿಡಿಯೋ ವೈರಲ್

ಆದರೆ ಇದೇ ಫೋಟೋವನ್ನು ಇದೀಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ 'ಶಕುಂತಲಾ ಶೆಟ್ಟಿ ಬುರ್ಖಾದಲ್ಲಿ ಎನ್ನುವ ಶೀರ್ಷಿಕೆ'ಯನ್ನೂ ನೀಡಲಾಗುತ್ತಿದೆ. ಜೊತೆಗೆ ಬುರ್ಖಾ ಧರಿಸಿದ ಶಕುಂತಲಾ ಶೆಟ್ಟಿ‌ ಬಗ್ಗೆ ಪರ-ವಿರೋಧದ ಚರ್ಚೆ ಆರಂಭವಾಗಿದೆ.

English summary
Puttur former mla Shakunthala Shetty's wearing Burka photo viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X