ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಮಂಕಾದ ಖಾಕಿ, ಕಿಡಿಗೇಡಿಗಳಿಗೆ ಇಲ್ಲ ಲಗಾಮು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 20; ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಎನ್ನುವುದು ನೀರ ಮೇಲಿನ ಗುಳ್ಳೆ ತರ ಎಂಬ ಮಾತು ಅಧಿಕಾರಿಗಳ ವಲಯದಲ್ಲಿದೆ. ಯಾಕೆಂದರೆ ಜಿಲ್ಲೆಯಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು. ಅಷ್ಟರಮಟ್ಟಿಗೆ ಜಿಲ್ಲೆ ಸೂಕ್ಷ್ಮ ಪ್ರದೇಶ ಅನ್ನೋದು ಜಿಲ್ಲೆಯಲ್ಲಿ ಕೆಲಸ ಮಾಡಿ ಹೋದ ಅಧಿಕಾರಿಗಳ ಮಾತಾಗಿದೆ.

ಆದರೆ ಕಳೆದ ಕೆಲ ತಿಂಗಳಿನಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ‌‌. ಅದರಲ್ಲೂ ಮಂಗಳೂರು ಪೊಲೀಸ್ ಕಮೀಷನೇಟರ್ ವ್ಯಾಪ್ತಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಸಾಲು ಸಾಲು ಪ್ರಕರಣಗಳು ನಡೆಯುತ್ತಿದ್ದು, ಪೊಲೀಸ್ ವೈಫಲ್ಯದ ಬಗ್ಗೆ ಚರ್ಚೆಗಳು ಆರಂಭಗೊಂಡಿದೆ.

 ಮಂಗಳೂರು: ರಿವಾಲ್ವರ್ ಗುರಿ ಕೆಲಸದಾಳುವಿಗೆ; ಸಿಡಿದ ಗುಂಡು ಹೊಕ್ಕಿದ್ದು ಮಗನ ತಲೆಗೆ! ಮಂಗಳೂರು: ರಿವಾಲ್ವರ್ ಗುರಿ ಕೆಲಸದಾಳುವಿಗೆ; ಸಿಡಿದ ಗುಂಡು ಹೊಕ್ಕಿದ್ದು ಮಗನ ತಲೆಗೆ!

ಸದ್ಯ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಎನ್. ಶಶಿಕುಮಾರ್ ಅಧಿಕಾರ ವಹಿಸಿಕೊಂಡು 10 ತಿಂಗಳುಗಳು ಕಳೆದಿವೆ. ಈ ಸಂಧರ್ಭದಲ್ಲಿ ಹಲವು ತಿಂಗಳುಗಳು ಲಾಕ್ ಡೌನ್ ಆಗಿಯೇ ಕಳೆದಿವೆ. ಕೊರೊನಾ ಅನ್ ಲಾಕ್ ಆದ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪೊಲೀಸರ ಕೈ ತಪ್ಪಿದ್ದು ಕೇವಲ ಮೂರು ತಿಂಗಳಲ್ಲಿ 50 ಅಧಿಕ ಕಳವು, ಸುಲಿಗೆ ಪ್ರಕರಣಗಳು ಕೇವಲ ಕಮೀಷನೇಟರ್ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರು; ಹೆದ್ದಾರಿಗೆ ಭೂಸ್ವಾಧೀನ, ರೈತರು ಕೋರ್ಟ್‌ಗೆ ಮಂಗಳೂರು; ಹೆದ್ದಾರಿಗೆ ಭೂಸ್ವಾಧೀನ, ರೈತರು ಕೋರ್ಟ್‌ಗೆ

 Series Of Crime Incident At Mangaluru Commissionerate Limits

ಜಿಲ್ಲೆಯಲ್ಲಿ ಪ್ರತಿದಿನ ಕಳವು, ದರೋಡೆ, ಚೂರಿ ಇರಿತ, ಹಲ್ಲೆ ಪ್ರಕರಣಗಳು ದಾಖಲಾಗುತ್ತಿದೆ. ಹಾಡುಹಗಲೇ ನಡು ರಸ್ತೆಯಲ್ಲೇ ಚೂರಿ ಹಿಡಿದ ತಂಡ ಕೊಲೆ ಬೆದರಿಕೆ ಹಾಕಿದಂತಹ ಗಂಭೀರ ಪ್ರಕರಣಗಳೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರು; ಆಸ್ಪತ್ರೆ ಯಡವಟ್ಟು, ಮಗು ಬದಲಾವಣೆ, ದೂರು ಮಂಗಳೂರು; ಆಸ್ಪತ್ರೆ ಯಡವಟ್ಟು, ಮಗು ಬದಲಾವಣೆ, ದೂರು

ಪ್ರಕರಣಗಳ ಸಂಖ್ಯೆ; ಜುಲೈ ತಿಂಗಳಿನಲ್ಲಿ 14 ಗಂಭೀರ ಪ್ರಕರಣಗಳು, ಆಗಸ್ಟ್‌ನಲ್ಲಿ 19 ಗಂಭೀರ ಪ್ರಕರಣಗಳು, ಸಪ್ಟೆಂಬರ್‌ನಲ್ಲಿ 24 ಗಂಭೀರ ಪ್ರಕರಣಗಳು ಮಂಗಳೂರು ಕಮೀಷನೇಟರ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.

ಸುಮಾರು15 ದಿನಗಳಲ್ಲಿ 6 ಕೊಲೆ ಯತ್ನ ಪ್ರಕರಣಗಳು ನಡೆದಿದೆ. ಒಂದು ಕೊಲೆ ಪ್ರಕರಣವೂ ನಡೆದಿದೆ. ನಿರಂತರವಾಗಿ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ವೈಫಲ್ಯವನ್ನು ಕಂಡಿದೆ.

 Series Of Crime Incident At Mangaluru Commissionerate Limits

ಈ ರೀತಿಯ ಸಾಲು ಸಾಲು ಪ್ರಕರಣಗಳು ಈ ಹಿಂದೆಯೂ ಗಲಭೆಗಳಿಗೆ ಪ್ರೇರಣೆ ನೀಡಿದೆ. ಈ ರೀತಿಯ ಘಟನೆಗಳು ಮರುಕಳಿಸಿದ ಸಂಧರ್ಭದಲ್ಲಿ ಆಗಿನ ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿದ್ದ ಸಂದೀಪ್ ಪಾಟೀಲ್ ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದರು.

ನಾನು ಸಚಿವನಾಗಿದ್ದಾಗ ರೌಡಿಗಳಿಗೆ ಭಯ ಇತ್ತು; ಯು. ಟಿ. ಖಾದರ್ ನಾನು ಸಚಿವನಾಗಿದ್ದಾಗ ರೌಡಿಗಳಿಗೆ ಭಯ ಇತ್ತು; ಯು. ಟಿ. ಖಾದರ್

ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿ ಮತ್ತೆ ಪಾತಕ ಲೋಕಕ್ಕೆ ಇಳಿಯದಂತೆ ತನ್ನ ಸ್ಟೈಲ್‌ನಲ್ಲೇ ಸೂಚನೆ ನೀಡಿದ್ದರು. ಅದಕ್ಕೂ ಮುನ್ನ ಕಮೀಷನರ್ ಆಗಿದ್ದಂತಹ ಚಂದ್ರಶೇಖರ್ ಕೂಡಾ ಖಡಕ್ ನಿರ್ಧಾರಗಳಿಂದ ಆರೋಪಿಗಳನ್ನು ಪತರುಗುಟ್ಟುವಂತೆ ಮಾಡಿದ್ದರು. ಈ ಅಧಿಕಾರಿಗಳ ಕಾರ್ಯ ಕ್ಷಮತೆಗೆ ಸಾರ್ವಜನಿಕರು, ಜನಪ್ರತಿನಿಧಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಯು. ಟಿ. ಖಾದರ್ ಕೂಡಾ ಸದ್ಯ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಹಿತರಕ ಘಟನೆಗಳನ್ನು ತಪ್ಪಿಸಲು ಸಂದೀಪ್ ಪಾಟೀಲ್ ಶೈಲಿಯನ್ನು ಪೊಲೀಸರು ಅನುಸರಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಸದ್ಯ ಅಧಿಕಾರದಲ್ಲಿರುವ ಆಯುಕ್ತ ಎನ್. ಶಶಿಕುಮಾರ್ ಕಿಡಿಗೇಡಿಗಳಿಗೆ ಖಡಕ್ ಸಂದೇಶ ಕಳುಹಿಸದ ಕಾರಣ, ದುಷ್ಕರ್ಮಿಗಳು ಲಗಾಮಿಲ್ಲದೇ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರಲಾಂಭಿಸಿದೆ.

ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ಅಧಿಕಾರಿಗಳ ನಡುವಿನ ಸಣ್ಣ ಮನಸ್ತಾಪವೂ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣ ಅಂತಾ ಹೇಳಲಾಗುತ್ತಿದೆ. ಸದ್ಯ ಅಧಿಕಾರದಲ್ಲಿರುವ ಮೇಲ್ ಸ್ಥರದ ಅಧಿಕಾರಿಗಳ ನಡುವೆ ಮನಸ್ತಾಪ, ಹೊಂದಾಣಿಕೆ ಕೊರತೆಯಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನೋದು ಪೊಲೀಸ್ ಮೂಲಗಳ ಮಾಹಿತಿಯಾಗಿದೆ.

ಒಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತಷ್ಟು ಅಲರ್ಟ್ ಆಗುವ ಅನಿವಾರ್ಯತೆ ಸೃಷ್ಠಿಯಾಗಿದೆ. ಪೊಲೀಸರ ವೈಫಲ್ಯತೆಯ ಲಾಭವನ್ನು ಕಿಡಿಗೇಡಿಗಳು ಪಡೆಯುವ ಮುನ್ನ ಖಾಕಿ ಪವರ್ ತೋರಿಸಬೇಕಾಗಿದೆ‌‌‌.

English summary
From past Three months series of crime incident reporting at Mangaluru Commissionerate limits. City police commissioner N. Shashikumar should take action to control crime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X