ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಸಿಸ್ ಉಗ್ರರ ಭೀತಿ: ಕರಾವಳಿಯಲ್ಲಿ ಭಾರಿ ಕಟ್ಟೆಚ್ಚರ

|
Google Oneindia Kannada News

ಮಂಗಳೂರು, ಮೇ 27: ಐಸಿಸ್ ಉಗ್ರರು ಕರಾವಳಿ ಪ್ರದೇಶಕ್ಕೆ ನುಸುಳುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಶ್ರೀಲಂಕಾದಿಂದ ಐನಿಸ್ ಉಗ್ರರು ಹೊರಟಿದ್ದಾರೆ ಎಂಬ ಬೇಹು ಮಾಹಿತಿಯ ಹಿನ್ನೆಲೆಯಲ್ಲಿ ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಉಗ್ರರರಿಂದ ಆತಂಕ, ಕರಾವಳಿ ಕಾವಲು ಪಡೆಗೆ ಸನ್ನದ್ಧರಾಗುವಂತೆ ಸೂಚನೆಉಗ್ರರರಿಂದ ಆತಂಕ, ಕರಾವಳಿ ಕಾವಲು ಪಡೆಗೆ ಸನ್ನದ್ಧರಾಗುವಂತೆ ಸೂಚನೆ

ಐಸಿಸ್ ಉಗ್ರರು ಸಮುದ್ರ ಮಾರ್ಗದ ಮೂಲಕ ಕರಾವಳಿ ಪ್ರವೇಶಿಸುವ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಕೇರಳ- ಕರಾವಳಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸಮುದ್ರದಲ್ಲಿ ಉಗ್ರರು ಕರ್ನಾಟಕಕ್ಕೆ ನುಸುಳಬಹುದೇ ಎಂಬ ಗುಮಾನಿಯ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.

ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ : ಮಂಗಳೂರಿನಲ್ಲಿ ಹೈ ಅಲರ್ಟ್ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ : ಮಂಗಳೂರಿನಲ್ಲಿ ಹೈ ಅಲರ್ಟ್

ಕರಾವಳಿ ಉದ್ದಕ್ಕೂ ಪೊಲೀಸರು, ಕೋಸ್ಟ್‌ಲ್ ಗಾರ್ಡ್‌, ನೌಕಾ ಪಡೆಯನ್ನು ಅಲರ್ಟ್ ನಲ್ಲಿ ಕಣ್ಗಾವಲು ಇರಿಸಿದ್ದಾರೆ. ರಾಜ್ಯದ ಕರಾವಳಿ ಕಾವಲು ಪಡೆ ಪೊಲೀಸರು ಮಂಗಳೂರು ಸೇರಿದಂತೆ ಕರಾವಳಿಯ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ತೀರದಲ್ಲಿ ಕಣ್ಗಾವಲು ಇರಿಸಿದ್ದಾರೆ. ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ, ತಟ ರಕ್ಷಣಾ ಪಡೆ ಹಾಗು ನೌಕಾ ಪಡೆ ಹದ್ದಿನ ಕಣ್ಣಿರಿಸಿದೆ. ಸಮುದ್ರದಲ್ಲಿ ಸಂಚರಿಸುವ ಸಂಶಯಾಸ್ಪದ ಬೋಟುಗಳು ಕಂಡುಬಂದರೆ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

security alerted in coastal districts ISIS threat

ಕೇರಳಕ್ಕೆ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಪೊಲೀಸರು ಅಲರ್ಟ್ ಆಗಿದ್ದಾರೆ. ಕರ್ನಾಟಕ -ಕೇರಳ ಗಡಿಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ನಗರದ ಎಲ್ಲಾ ಆಯಕಟ್ಟಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ನಗರದಲ್ಲಿ ಪೊಲೀಸರು ಭಿಗಿ ಬಂದೋಬಸ್ತ್ ನಡೆಸಿದ್ದಾರೆ. ಆದರೆ ಭದ್ರತೆ ಹೆಚ್ಚಳಕ್ಕೆ ಕಾರಣವನ್ನು ಪೊಲೀಸರು ಗುಪ್ತವಾಗಿರಿಸಿದ್ದಾರೆ. ಜಿಲ್ಲೆ ಪ್ರವೇಶಿಸುವ ಪ್ರತೀ ವ್ಯಕ್ತಿ, ವಾಹನಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಸಮುದ್ರದಲ್ಲಿ ಪ್ರತೀ 1 ಕಿ.ಮೀ.ವ್ಯಾಪ್ತಿಯಲ್ಲಿ ಬೋಟ್ ಸಂಚಾರದ ಮೇಲೆ ಕರಾವಳಿ ಕಾವಲು ಪಡೆ ಹದ್ದಿನ ಕಣ್ಣಿರಿಸಿದೆ.

English summary
On the basis of intelligence input that ISIS terrorists may enter Kerala or Karnataka coastal districts, high alert has been sounded in Karnataka coast,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X