ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್‌ಗಳು ಸೀಲ್‌ಡೌನ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 14: ರಾಜ್ಯದ ಹಲವು ಜಿಲ್ಲೆಗಳು ಸೋಮವಾರದಿಂದ ಅನ್‌ಲಾಕ್ ಮಾಡುತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್‌ಗಳು ಸೀಲ್‌ಡೌನ್ ಆಗಲಿದೆ. 50ಕ್ಕಿಂತ ಹೆಚ್ಚು ಕೊರೊನಾ ಸೋಂಕು ಪ್ರಕರಣವಿರುವ ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ ಜಿಲ್ಲಾಡಳಿತ ಆದೇಶ ನೀಡಿದೆ.

ಮಂಗಳೂರು ತಾಲ್ಲೂಕಿನ 2 ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲೂಕಿನ 8 ಗ್ರಾಮ ಪಂಚಾಯತ್‌ಗಳು, ಸುಳ್ಯ ತಾಲ್ಲೂಕಿನ 5 ಗ್ರಾಮ ಪಂಚಾಯತ್‌ಗಳು, ಕಡಬ ತಾಲೂಕಿನ 2 ಗ್ರಾಮ ಪಂಚಾಯತ್‌ಗಳು ಸೋಮವಾರದಿಂದ ಸೀಲ್‌ಡೌನ್ ಆಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 20ರವರೆಗೆ ಲಾಕ್‌ಡೌನ್ ವಿಸ್ತರಣೆದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 20ರವರೆಗೆ ಲಾಕ್‌ಡೌನ್ ವಿಸ್ತರಣೆ

ಗ್ರಾಮದೊಳಗೆ ಪ್ರವೇಶ ಹಾಗೂ ನಿರ್ಗಮನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಜೂನ್ 14ರಿಂದ ಜೂನ್ 21ರ ಬೆಳಗ್ಗೆ 9 ಗಂಟೆಯವರೆಗೆ ಗ್ರಾಮಗಳು ಸಂಪೂರ್ಣ ಸೀಲ್‌ಡೌನ್ ಆಗಲಿದೆ. ಆದರೆ ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂ, ಕ್ಲಿನಿಕ್ ಸೇರಿದಂತೆ ಹಾಲಿನ ಬೂತ್, ಹಾಲು ಉತ್ಪಾದನಾ ಡೈರಿ, ಪೆಟ್ರೋಲ್ ಬಂಕ್, ಬ್ಯಾಂಕ್, ತುರ್ತು ವೈದ್ಯಕೀಯ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

Mangaluru: Sealdown Of 17 Gram Panchayats In Dakshina Kannada District Due To Rise In Covid-19 Cases

ಮಂಗಳೂರು ತಾಲೂಕಿನ ನೀರುಮಾರ್ಗ, ಕೋಣಾಜೆ ಗ್ರಾಮ ಪಂಚಾಯತ್‌ಗಳು, ಬೆಳ್ತಂಗಡಿ ತಾಲ್ಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ, ಚಾರ್ಮಾಡಿ ಗ್ರಾಮ ಪಂಚಾಯತ್‌ಗಳು, ಸುಳ್ಯ ತಾಲೂಕಿನ‌ ಐವರ್ನಾಡು, ಅಮರ ಮುಡ್ಕೂರು, ಕೊಲ್ಲ ಮೊಗರು, ಗುತ್ತಿಗಾರು, ಅರಂತೋಡು ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಸವಣೂರು ಗ್ರಾಮ ಪಂಚಾಯತ್‌ಗಳು ಸೀಲ್‌ಡೌನ್ ಆಗಲಿದೆ.

Mangaluru: Sealdown Of 17 Gram Panchayats In Dakshina Kannada District Due To Covid-19 Cases

ಸಂಬಂಧಿಸಿದ ತಹಶೀಲ್ದಾರಗಳು ಸೀಲ್‌ಡೌನ್ ಆದ ಗ್ರಾಮ ಪಂಚಾಯತ್‌ಗಳ ಸಂಪೂರ್ಣ ನೇತೃತ್ವವನ್ನು ವಹಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ನೀಡಿದ್ದಾರೆ.

English summary
The 17 Gram Panchayats of Dakshina Kannada district will be sealdown from June 14 to June 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X