ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಕಡಲು ಪ್ರಕ್ಷುಬ್ದ: ಮನೆಗಳಿಗೆ ನುಗ್ಗುತ್ತಿರುವ ದೈತ್ಯ ಅಲೆಗಳು

|
Google Oneindia Kannada News

Recommended Video

ತಿತ್ಲಿ ಚಂಡಮಾರುತದ ಎಫೆಕ್ಟ್ ಮಂಗಳೂರಿಗೂ ಅಪ್ಪಳಿಸಿತಾ? | Oneindia Kannada

ಮಂಗಳೂರು, ಅಕ್ಟೋಬರ್. 12: ಒಡಿಸ್ಸಾ, ಆಂಧ್ರ ಪ್ರದೇಶದಲ್ಲಿ ಅವಾಂತರ ಸೃಷ್ಟಿಸಿರುವ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿಗೂ ತಟ್ಟಿದೆಯಾ? ಹೀಗೊಂದು ಅನುಮಾನ ಕಾಡಲಾರಂಭಿಸಿದೆ . ಕಳೆದ 2 ದಿನಗಳಿಂದ ಮಂಗಳೂರಿನಲ್ಲಿ ಕಡಲು ಏಕಾಏಕಿ ಭೋರ್ಗರೆಯುತ್ತಿದ್ದು, ಕಡಲತಡಿಯ ಮನೆಗಳಿಗೆ ಸಮುದ್ರದ ಅಲೆ ಅಪ್ಪಳಿಸುತ್ತಿದೆ.

ಮಂಗಳೂರಿನ ಹೊರವಲಯದ ಸಮುದ್ರ ಒಂದು ಕಿಲೋಮೀಟರ್ ಭೂ ಪ್ರದೇಶವನ್ನು ಆಪೋಶನ ತೆಗೆದುಕೊಂಡಿದ್ದು, ಸಮುದ್ರ ಬದಿ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಬಿರುಬಿಸಿಲಿನಲ್ಲಿ ಕೂಲ್ ಆಗಿರಬೇಕಾದ ಅರಬ್ಬೀ ಸಮುದ್ರ ಒಮ್ಮೆಲೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮಂಗಳೂರಿನ ಕಡಲ ಕಿನಾರೆ ಪ್ರಕ್ಷುಬ್ಧವಾಗಿದ್ದು, ಚಂಡಮಾರುತದ ಎಫೆಕ್ಟ್ ನಿಂದ ಸಮುದ್ರರಾಜ ರೌದ್ರಾವತಾರ ತಾಳಿದ್ದಾನೆ.

ಮಂಗಳೂರಿನಲ್ಲಿ ಏಕಾಏಕಿ ಪ್ರಕ್ಷುಬ್ಧಗೊಂಡ ಕಡಲು: ತಿತ್ಲಿ ಪ್ರಭಾವ?ಮಂಗಳೂರಿನಲ್ಲಿ ಏಕಾಏಕಿ ಪ್ರಕ್ಷುಬ್ಧಗೊಂಡ ಕಡಲು: ತಿತ್ಲಿ ಪ್ರಭಾವ?

ಈ ಹಿನ್ನೆಲೆಯಲ್ಲಿ ಮಂಗಳೂರು ಹೊರವಲಯದ ಉಳ್ಳಾಲ , ಸೋಮೇಶ್ವರ ,ಉಚ್ಚಿಲ , ಕೈಕೊ ಕಡಲಕಿನಾರೆ ಜನ ಆತಂಕಿತರಾಗಿದ್ದಾರೆ. ಚಂಡಮಾರುತ ನೇರ ಎಫೆಕ್ಟ್ ಮಂಗಳೂರಿನ ಕಡಲಿನಲ್ಲಾಗುತ್ತಿದೆ. ಆದರೆ ಯಾವ ಚಂಡಮಾರುತದ ಎಫೆಕ್ಟ್ ಎಂಬುದು ತಿಳಿದು ಬಂದಿಲ್ಲ. ಈ ಕುರಿತ ಕೆಲ ಮಾಹಿತಿಗಳು ಇಲ್ಲಿವೆ...

 ಸಮುದ್ರ ಪಾಲು

ಸಮುದ್ರ ಪಾಲು

ಮಂಗಳೂರಿನ ಕಡಲತೀರದ ಪ್ರದೇಶವಾದ ಉಳ್ಳಾಲದ ಕೈಕೋ, ಮುಕ್ಕಚ್ಚೇರಿ, ಸೋಮೇಶ್ವರದ ಉಚ್ಚಿಲ ಪೆರಿಬೈಲ್ ಪ್ರದೇಶದಲ್ಲಿ ಸಮುದ್ರ ಪ್ರಕ್ಷುಬ್ದವಾಗಿದ್ದು, ಒಂದು ಕಿಲೋಮೀಟರ್ ನಷ್ಟು ಭೂ ಪ್ರದೇಶ ಸಮುದ್ರ ಪಾಲಾಗಿದೆ.

 ವಿಡಿಯೋ: 'ತಿತ್ಲಿ' ಚಂಡಮಾರುತದ ಉಗ್ರರೂಪ ನೋಡಿ ವಿಡಿಯೋ: 'ತಿತ್ಲಿ' ಚಂಡಮಾರುತದ ಉಗ್ರರೂಪ ನೋಡಿ

 ಆತಂಕಗೊಂಡ ಸ್ಥಳೀಯರು

ಆತಂಕಗೊಂಡ ಸ್ಥಳೀಯರು

ಬುಧವಾರದಿಂದ ಸಮುದ್ರ ಪ್ರಕ್ಷುಬ್ಧವಾಗಿದ್ದು, ಕಡಲತೀರದ 20ಕ್ಕೂ ಹೆಚ್ಚು ಮನೆಗಳ ಒಳಗೆ ಸಮುದ್ರದ ರಕ್ಕಸ ಅಲೆಗಳು ನುಗ್ಗಿವೆ. ಹಲವಾರು ಮನೆಗಳು ಅಪಾಯದ ಸ್ಥಿತಿಯಲ್ಲಿವೆ.

ಸಮುದ್ರ ಒಮ್ಮಿಂದೊಮ್ಮೆಲೇ ಪ್ರಕ್ಷುಬ್ಧವಾಗಿದ್ದು, ಸ್ಥಳೀಯರನ್ನು ಆತಂಕಿತರನ್ನಾಗಿ ಮಾಡಿದೆ.

ಅತ್ಯುಗ್ರ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಬಲಿಅತ್ಯುಗ್ರ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಬಲಿ

 ಬಾವಿಗಳ ನೀರು ಉಪ್ಪು

ಬಾವಿಗಳ ನೀರು ಉಪ್ಪು

ರಾತ್ರಿ ವೇಳೆ ಸಮುದ್ರ ಅಬ್ಬರ ಜಾಸ್ತಿಯಾಗುತ್ತಿದ್ದು, ಅಲೆಗಳು ನುಗ್ಗಿ ರಸ್ತೆಗೆ ಅಪ್ಪಳಿಸುತ್ತಿದೆ. ಸೋಮೇಶ್ವರ- ಕೆಸಿ ರೋಡ್ ಸಂಪರ್ಕಿಸುವ ರಸ್ತೆಯಲ್ಲಿ ಸಮುದ್ರದಿಂದ ತೇಲಿ ಬರುವ ವಸ್ತುಗಳು ಅಲೆಗಳ ಅಬ್ಬರಕ್ಕೆ ಸಾಕ್ಷಿಯಾಗಿವೆ. ಸಮುದ್ರದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಪ್ರದೇಶದ ಹಲವಾರು ಬಾವಿಗಳ ನೀರು ಉಪ್ಪಾಗಿದೆ.

 ಅಂದು ಕಡಲು ಪ್ರಕ್ಷುಬ್ದಗೊಂಡಿತ್ತು

ಅಂದು ಕಡಲು ಪ್ರಕ್ಷುಬ್ದಗೊಂಡಿತ್ತು

ಏಕಾಏಕಿ ಕಡಲು ಪ್ರಕ್ಷುಬ್ದಗೊಂಡು ಸಮುದ್ರದ ಅಲೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ಮಂಗಳೂರಿನಲ್ಲಿ ಬುಧವಾರ(ಅ.10) ಸಂಭವಿಸಿತ್ತು.

ನಗರ ಹೊರವಲಯದ ಸೋಮೇಶ್ವರ, ಉಳ್ಳಾಲ, ಉಚ್ಚಿಲ ಪ್ರದೇಶಗಳಲ್ಲಿ ಈ ಘಟನೆ ನಡೆದಿದ್ದು, ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಆಂಧ್ರ ಮತ್ತು ಒಡಿಶಾದಲ್ಲಿ ಕಾಣಿಸಿಕೊಂಡ ತಿತ್ಲಿ ಚಂಡಮಾರುತದ ಪ್ರಭಾವದಿಂದ ಹೀಗಾಗಿರಬಹುದು ಎಂದು ಹೇಳಲಾಗಿತ್ತು.

English summary
Sea water rushed in to inhabited areas of Ullala, Someshwara, Uchilla of Managluru. It is said that this is because of Titli cyclone effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X