ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ತಗ್ಗಿದ ಕಡಲ್ಕೊರೆತ: ಸುರಕ್ಷಿತ ಸ್ಥಳಕ್ಕೆ 20 ಕುಟುಂಬ ಸ್ಥಳಾಂತರ

|
Google Oneindia Kannada News

ಮಂಗಳೂರು, ಜುಲೈ 19: ಕರಾವಳಿಯಲ್ಲಿ ಮಳೆರಾಯನ ಅಬ್ಬರ ಕೊಂಚ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ರಾಜನ ಆರ್ಭಟ ತಗ್ಗಿದೆ. ಕಳೆದ 5 ದಿನಗಳಿಂದ ಕರಾವಳಿಯ ಉದ್ದಕ್ಕೂ ಕಡಲಿನ ಅಲೆಗಳ ಹೊಡೆತ ಜೋರಾಗಿತ್ತು. ಈ ಪರಿಣಾಮ ಕರಾವಳಿಯಲ್ಲಿ ವ್ಯಾಪಕವಾಗಿ ಕಡಲ್ಕೊರೆತ ಆರಂಭವಾಗಿತ್ತು.

ಆದರೆ ಕಳೆದ ರಾತ್ರಿಯಿಂದ ಮಂಗಳೂರು ಹೊರವಲಯದ ಉಳ್ಳಾಲ ಹಾಗೂ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಪ್ರಮಾಣ ಕಡಿಮೆಯಾಗಿದೆ. ಕಡಲ ಅಲೆಗಳ ಅಬ್ಬರ ಕೊಂಚ ತಗ್ಗಿದೆ. ಈ ಹಿನ್ನಲೆಯಲ್ಲಿ ಉಳ್ಳಾಲ ಪ್ರದೇಶದ ಕೈಕೊ, ಕಿಲೇರಿಯಾ ನಗರ , ಮಕ್ಕಚೇರಿ ಯಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತಣ್ಣಗಾಗದ ಕಡಲ ಭೋರ್ಗರೆತ: ಉಳ್ಳಾಲದಲ್ಲಿ ಮತ್ತೆ 8 ಮನೆಗಳಿಗೆ ಹಾನಿತಣ್ಣಗಾಗದ ಕಡಲ ಭೋರ್ಗರೆತ: ಉಳ್ಳಾಲದಲ್ಲಿ ಮತ್ತೆ 8 ಮನೆಗಳಿಗೆ ಹಾನಿ

ಈ ಪ್ರದೇಶದಲ್ಲಿ ಅಪಾಯದಲ್ಲಿದ್ದ 41 ಮನೆಗಳನ್ನು ಉಳ್ಳಾಲ ನಗರಸಭೆ ಗುರುತಿಸಿದ್ದು, 20 ಕುಟುಂಬಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದವರು ರಾತ್ರಿ ವೇಳೆ ಸಂಬಂಧಿಕರ ಮನೆಗಳಿಗೆ ತೆರಳಿದ್ದರು. ಸೋಮೇಶ್ವರ ಉಚ್ಚಿಲದಲ್ಲಿ ಬಟ್ಟಪ್ಪಾಡಿಯಲ್ಲಿ ಹಾಕಲಾಗಿದ್ದ ತಾತ್ಕಾಲಿಕ ತಡೆಗೋಡೆಯ ಬೃಹತ್ ಗಾತ್ರದ ಕಲ್ಲುಗಳು ಸಮುದ್ರಪಾಲಾಗುತ್ತಿವೆ.

Sea erosion Ullala , another 20 families shifted safe place

ಈ ಪ್ರದೇಶದಲ್ಲಿ 10 ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು, ಮತ್ತೇ ಕಡಲ್ಕೊರೆತ ಹೆಚ್ಚಾದರೆ ಈ ಮನೆಗಳು ಕಡಲ ಒಡಲು ಸೇರುವ ಆತಂಕವಿದೆ. ಈ ಕುರಿತು ಈಗಾಗಲೇ ಉಳ್ಳಾಲ ನಗರ ಸಭೆಯ ಅಧಿಕಾರಿಗಳ ಗಮನಕ್ಕೆ ತಂದರು ಇತ್ತ ಹಮನಹರಿಸುತ್ತಿಲ್ಲ ಎಂದು ಬಟ್ಟಪ್ಪಾಡಿ ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಲ್ಕೊರೆತಕ್ಕೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಿನ್ನೆ 8 ಮನೆಗಳು ಧ್ವಂಸಗೊಂಡಿದ್ದವು . ಕಡಲ ಭೋರ್ಗರೆತ ಹೆಚ್ಚಾಗಿದ್ದ ಕಾರಣ ಸ್ಥಳೀಯ ನಿವಾಸಿಗಳಲ್ಲಿ ಯಾವಾಗ ಏನಾಗುತ್ತೋ ಅನ್ನೋ ಜೀವ ಭಯ ಮನೆ ಮಾಡಿತ್ತು.

English summary
Monsoon 2018 in Karnataka: Sea erosion in Ullala, Someshwara, Uchila area. Another 20 families shifted to safe place officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X