ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಣ್ಣಗಾಗದ ಕಡಲ ಭೋರ್ಗರೆತ: ಉಳ್ಳಾಲದಲ್ಲಿ ಮತ್ತೆ 8 ಮನೆಗಳಿಗೆ ಹಾನಿ

|
Google Oneindia Kannada News

ಮಂಗಳೂರು, ಜುಲೈ 18: ಕರಾವಳಿಯಲ್ಲಿ ಮಳೆರಾಯ ಕೊಂಚ ವಿರಾಮ ಪಡೆದಿದ್ದಾನೆ. ಆದರೆ ಸಮುದ್ರ ರಾಜ ಅಬ್ಬರಿಸೋಕೆ ಪ್ರಾರಂಭಿಸಿದ್ದಾನೆ. ಕರಾವಳಿಯ ಉದ್ದಕೂ ಆಳೆತ್ತರದ ಕಡಲಿನ ಅಲೆಗಳ ಹೊಡೆತ ಜೋರಾಗಿದೆ . ಈ ಹಿನ್ನೆಲೆಯಲ್ಲಿ ಕಡಲ್ಕೊರೆತ ಹಚ್ಚಾಗುತ್ತಿದೆ.

ಕಡಲ್ಕೊರೆತಕ್ಕೆ ಮಂಗಳೂರು ಹೊರವಲಯದ ಉಳ್ಳಾಲದ 8 ಮನೆಗಳಿಗೆ ಮತ್ತೆ ಹಾನಿ ಉಂಟಾಗಿದೆ. ಈ ಪ್ರದೇಶದಲ್ಲಿ ಕಡಲ ಭೋರ್ಗರೆತ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳಂತೂ ಯಾವಾಗ ಏನಾಗುತ್ತೋ ಅನ್ನೋ ಜೀವ ಭಯದಿಂದಲೇ ದಿನದೂಡುವಂತಹ ಪರಿಸ್ಥಿತಿ ಸೃಷ್ಠಿಯಾಗಿದೆ.

ಮಂಗಳೂರು: ತೀವ್ರಗೊಂಡ ಕಡಲ್ಕೊರೆತಕ್ಕೆ 14 ಮನೆಗಳು ಧ್ವಂಸಮಂಗಳೂರು: ತೀವ್ರಗೊಂಡ ಕಡಲ್ಕೊರೆತಕ್ಕೆ 14 ಮನೆಗಳು ಧ್ವಂಸ

ಮಂಗಳೂರು ಹೊರವಲಯದಲ್ಲಿ ಕಡಲ್ಕೊರೆತ ಭಾರೀ ತೀವ್ರಗೊಂಡಿದ್ದು, ಜನರು ಆತಂಕದೊಂದಿಗೆ ದಿನದೂಡುವಂತಾಗಿದೆ. ಮಂಗಳೂರು ಉಳ್ಳಾಲದ ಕೈಕೋ,‌ ಕಿಲೆರಿಯಾ ನಗರ, ಮುಕ್ಕಚ್ಚೇರಿ ಪ್ರದೇಶಗಳಲ್ಲಿ ಸಮುದ್ರ ರಾಜ ಆರ್ಭಟ ಜೋರಾಗಿದೆ. ಕಳೆದ 15 ದಿನಗಳಿಂದ ಸಮುದ್ರದ ರೌದ್ರ ನರ್ತನ ಆರಂಭಿಸಿದೆ.

Sea erosion: 8 houses damage in Ulalla

ಈ ಪರಿಣಾಮ ಭಾರೀ ಕಡಲ್ಕೊರೆತ ಉಂಟಾಗಿದೆ. 4 ದಿನಗಳ ಹಿಂದೆ ಸೋಮೇಶ್ವರ -ಉಚ್ಚಿಲ ಪ್ರದೇಶದ ಜನರಲ್ಲಿ ಭೀತಿ ಹುಟ್ಟಿಸಿದ್ದ ಸಮುದ್ರದ ಆಳೆತ್ತರದ ಅಲೆಗಳು ಕಳೆರಡು ದಿನಗಳಿಂದ ಉಳ್ಳಾಲ ಪ್ರದೇಶಕ್ಕೂ ವ್ಯಾಪಿಸಿದೆ. ಕಡಲ ತಡಿಯ ಸುಮಾರು 8 ಮನೆಗಳು ಕಡಲಾಳ ಸೇರಿವೆ.

ಇನ್ನೂ 30ಕ್ಕೂ ಹೆಚ್ಚು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ದಿನ ಕಳೆಯುತ್ತಿದ್ದಂತೆ ಸಮುದ್ರ ತನ್ನ ಭೀಕರತೆಯನ್ನು ಪ್ರದರ್ಶಿಸುತ್ತಿದ್ದು, ಸುಮಾರು 10 ಅಡಿಗಳಷ್ಟು ಎತ್ತರ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ .

ಈ ವ್ಯಾಪ್ತಿಯಲ್ಲಿ ಕಡಲ್ಕೊರೆತ ತಡೆಯಲು ಜಿಲ್ಲಾಡಳಿತದ ವತಿಯಿಂದ ಭಾರೀ ಕಲ್ಲುಗಳನ್ನು ಹಾಸಲಾಗಿದ್ದರೂ, ಅಲೆಗಳ ಆರ್ಭಟಕ್ಕೆ ಭಾರೀ ಗಾತ್ರದ ಕಲ್ಲುಗಳು ಕಡಲ ಒಡಲು ಸೇರುತ್ತಿವೆ.
ಕಡಲ ಕೊರೆತದಿಂದ ಇಷ್ಟೆಲ್ಲಾ ಸಂಕಷ್ಟ ಜನರು ಎದುರಿಸಿದರೂ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ತನ್ನ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಸ್ಥಳಿಗಳಿಗೆ ಭೇಟಿಯೇ ನೀಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sea erosion: 8 houses damage in Ulalla

ಕಡಲ್ಕೊರೆತದಿಂದ ಶಾಶ್ವತ ಪರಿಹಾರಕ್ಕೆ ಈ ಭಾಗದ‌ ಜನರು ಸಾಕಷ್ಟು ಬಾರಿ ಮನವಿ ನೀಡಿದರೂ ಪರಿಹಾರ ಮಾತ್ರ ಇಲ್ಲಿಯವರೆಗೆ ದೊರಕಿಲ್ಲ. ಇದರಿಂದಾಗಿ ಸಚಿವ ಯು. ಟಿ ಖಾದರ್ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
Monsoon 2018 in Karnataka : Sea erosion aggravated at Ullala, Someshwara, Kaiko, Kileriya nagar, Sasihithlu areas another 8 houses, coconut tress have washed away by the surging waves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X