ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಗೆಲುವು ನಮ್ಮದೇ ಎಂದ ಎಸ್ ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ

|
Google Oneindia Kannada News

ಮಂಗಳೂರು, ಏಪ್ರಿಲ್ 09: ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ. ಕಾಂಗ್ರೆಸ್ ಒಂದು ನಕಲಿ ಜಾತ್ಯಾತೀತ ಪಕ್ಷವಾಗಿದೆ ಎಂದು ಎಸ್ ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ಆರೋಪಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪುತ್ತೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ನಕಲಿ ಜಾತ್ಯಾತೀತದ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಬಿಜೆಪಿ ಹಿಂದುತ್ವದ ಮೂಲಕ ಕೋಮುವಾದವನ್ನು ಬಿತ್ತುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಕಿಡಿಕಾರಿದರು.

 ದ.ಕ. ಲೋಕಸಭಾ ಕ್ಷೇತ್ರ:ಎಸ್​ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್​​ ತುಂಬೆ ಆಯ್ಕೆ ದ.ಕ. ಲೋಕಸಭಾ ಕ್ಷೇತ್ರ:ಎಸ್​ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್​​ ತುಂಬೆ ಆಯ್ಕೆ

ಕಾಂಗ್ರೆಸ್ ಜಿಲ್ಲೆಯಲ್ಲಿ ರೌಡಿಯೊಬ್ಬನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಕೇಸರಿ ಶಾಲು ಹಾಗೂ ಗೋ ಪೂಜೆ ಮಾಡುವ ಮೂಲಕ ಆತ ಒಂದು ವರ್ಗವನ್ನು ಓಲೈಸುವ ಯತ್ನದಲ್ಲಿ ನಿರತನಾಗಿದ್ದಾನೆ ಎಂದು ಇಲ್ಯಾಸ್ ತುಂಬೆ ದೂರಿದರು.

SDPI candidate Ilyas Thumbe slams Congress

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್.ಡಿ.ಪಿ.ಐ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಯಿದ್ದು, ಈ ಬಾರಿ ಗೆಲವು ನಮ್ಮದೇ ಎಂದು ಇಲ್ಯಾಸ್ ತುಂಬೆ ವಿಶ್ವಾಸ ವ್ಯಕ್ತಪಡಿಸಿದರು.

English summary
Lok Sabha Elections 2019:Speaking to media persons in Putturu SDPI candidate Ilyas Thumbe slammed Congress and BJP leaders.He said these leaders cheating people by their fake secular face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X