ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲ್ಡ್ ಈಸ್ ಗೋಲ್ಡ್ : ಖರ್ದುಂಗಾ ಲಾ ಏರಿದ ಲ್ಯಾಂಬಿ ಸ್ಕೂಟರ್

By ಗುರುರಾಜ ಕೆ.
|
Google Oneindia Kannada News

ಮಂಗಳೂರು, ಜುಲೈ.22: ಟ್ರೆಕಿಂಗ್ ಗೋಸ್ಕರ ದ್ವಿಚಕ್ರ ವಾಹನಗಳು ಸಿಗುವ ಇಂದಿನ ಕಾಲದಲ್ಲಿ ಹಳೆಯ ಲ್ಯಾಂಬಿ ಸ್ಕೂಟರ್ ನಲ್ಲಿ ಯಶಸ್ವಿ ಕಾಶ್ಮೀರ ಯಾತ್ರೆ ನಡೆಸಿ, ಸೈ ಎನಿಸಿಕೊಂಡಿದ್ದಾರೆ ಮಂಗಳೂರಿನ ಸ್ಕೂಟರ್ ಯಾನಿಗಳಾದ ಸೂರಜ್ ಹೆನ್ರಿ ಹಾಗೂ ಗಿರೀಶ್ ವೆಂಕಟರಾಮನ್.

ಈಗ ಎನಿದ್ದರೂ ಬುಲೆಟ್ ಬೈಕ್ ಗಳ ಜಮಾನ. ಅಂತಹುದರಲ್ಲಿ ಹಳೆಯ ದ್ವಿಚಕ್ರ ವಾಹನಗಳನ್ನು ಕೆಳುವವರೇ ಇಲ್ಲ. ಅದರಲ್ಲೂ ಟ್ರೆಕ್ಕಿಂಗ್ ಗೆ ಹೋಗಬೇಕಾದರೆ ಗಡುಸಾದ ವಾಹನಗಳೇ ಬೇಕು. ಪರಿಸ್ಥಿತಿ ಹೀಗಿರುವಾಗ ಹಳೆಯ ಲ್ಯಾಂಬ್ರೆಟ್ಟಾ ಸ್ಕೂಟರ್ ಬಳಸಿ ಮಂಗಳೂರಿನ ಯುವಕರು ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದ ಶಿಖರವನ್ನೇರಿ ಯಶಸ್ವಿಯಾಗಿದ್ದಾರೆ.

 ಲ್ಯಾಂಬಿ ಸ್ಕೂಟರ್ ನಲ್ಲಿ ಯಾನ

ಲ್ಯಾಂಬಿ ಸ್ಕೂಟರ್ ನಲ್ಲಿ ಯಾನ

ಹಳೆಯ ವಾಹನಗಳಾದ ಲ್ಯಾಂಬ್ರೆಟ್ಟಾ ವಾಹನ ಕೂಡ ಪರ್ವತವನ್ನು ಏರಬಲ್ಲದು ಎನ್ನುವುದು ತೋರಿಸಿದ್ದಾರೆ. ಮಂಗಳೂರಿನ ನಿವಾಸಿಗಳಾದ ಗಿರೀಶ್ ವೆಂಕಟರಾಮನ್ ಮತ್ತು ಸೂರಜ್ ಹೆನ್ರಿ.

ಜೂನ್‌ 28ರಂದು ಸೂರಜ್ ಹಾಗೂ ಗಿರೀಶ್ ವೆಂಕಟರಾಮನ್‌ ಅವರು ಕನ್ಯಾಕುಮಾರಿಯಿಂದ ಖರ್ದುಂಗ್ ಲಾ ಪ್ರದೇಶಕ್ಕೆ 68 ವರ್ಷ ಹಳೆಯ ಲ್ಯಾಂಬ್ರೆಟ್ಟಾ ಹಾಗೂ 36 ವರ್ಷ ಹಳೆಯ ಲ್ಯಾಂಬಿ ಸ್ಕೂಟರ್ ನಲ್ಲಿ ಯಾನ ಆರಂಭಿಸಿದ್ದರು.

ಗಂಟೆಗೆ 30 ಕಿಮೀ. ನಂತೆ ದಿನಕ್ಕೆ 300 ಕಿಮೀ. ಕ್ರಮಿಸುವುದು ಅವರ ಗುರಿಯಾಗಿತ್ತು. ಅದರಂತೆ ಹಳೆ ಸ್ಕೂಟರ್ ನಲ್ಲಿ 20 ದಿನಗಳ ಯಾನ ನಡೆಸಿ, ಸೋಮವಾರ ಜುಲೈ 16 ಖರ್ದುಂಗ್ ಲಾ ತಲುಪಿದ್ದಾರೆ.

 ಟ್ರೆಕ್ಕಿಂಗ್ ಗೆ ಬೇಕಾದಂತೆ ವಿನ್ಯಾಸ

ಟ್ರೆಕ್ಕಿಂಗ್ ಗೆ ಬೇಕಾದಂತೆ ವಿನ್ಯಾಸ

ಗಿರೀಶ್ ಅವರಲ್ಲಿ 1982ರ ಮಾಡೆಲ್ ನ ಲ್ಯಾಂಬಿ ಸ್ಕೂಟರ್ ಹಾಗೂ ಸೂರಜ್ ಅವರು 1968 ರ ಲ್ಯಾಂಬ್ರೆಟ್ಟಾ ಸ್ಕೂಟರ್ ನ್ನು ಟ್ರೆಕ್ಕಿಂಗ್ ಗೆ ಬೇಕಾದಂತೆ ಮಂಗಳೂರಿನಲ್ಲಿ ವಿನ್ಯಾಸಗೊಳಿಸಿದ್ದರು. ದಾರಿ ಮಧ್ಯೆ ತೊಂದರೆಯಾಗದಂತೆ ಅಗತ್ಯ ಉಪಕರಣಗಳನ್ನು ಕೊಂಡೊಯ್ಯಲಾಗಿತ್ತು.

ಮಂಗಳೂರಿನಿಂದ ಸಿದ್ದಪಡಿಸಿದ್ದ ಈ ಎರಡೂ ಸ್ಕೂಟರ್ ಗಳನ್ನು ರೈಲಿನ ಮೂಲಕ ಕನ್ಯಾಕುಮಾರಿಗೆ ಸಾಗಿಸಿ ಅಲ್ಲಿಂದ ಈ ಸಂಚಾರ ಆರಂಭಿಸಿದ್ದರು. ನಂತರ ಟ್ರೆಕ್ಕಿಂಗ್ ಪೂರೈಸಿದ ನಂತರ ಬಳಿಕ ಸ್ಕೂಟರ್ ನ್ನು ಕಾಶ್ಮೀರದಿಂದ ಮಂಗಳೂರಿಗೆ ಟ್ರಕ್ ನಲ್ಲಿ ಕಳುಹಿಸಲಾಗಿದೆ.

ಸೈನಿಕರನ್ನು ಭೇಟಿಯಾಗಲು ಸಿಯಾಚಿನ್ ಗೆ ಹೊರಟ ಹರಪನಹಳ್ಳಿ ಯುವಕಸೈನಿಕರನ್ನು ಭೇಟಿಯಾಗಲು ಸಿಯಾಚಿನ್ ಗೆ ಹೊರಟ ಹರಪನಹಳ್ಳಿ ಯುವಕ

 ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಸಂಚಾರ

ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಸಂಚಾರ

ನಿತ್ಯ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ 250 ರಿಂದ 400 ಕಿಲೋ ಮೀಟರ್ ವರೆಗೆ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದರು. ರಾತ್ರಿ ವಸತಿ ಗೃಹ ಅಥವಾ ವಸತಿ ಗೃಹ ಸಿಗದೇ ಇರುವಲ್ಲಿ ಕಟ್ಟಡಗಳ ವರಾಂಡಗಳಲ್ಲಿ ವಿಶ್ರಾಂತಿ ಪಡೆದಿದ್ದರು. ಜುಲೈ 15ರಂದು ಸೂರಜ್ ಹಾಗೂ ಗಿರಿಶ್ ವೆಂಕಟರಾಮನ್‌ ಜೋಡಿ ಲೇಹ್ ತಲುಪಿದ್ದರು.

ಅಂದು ರಾತ್ರಿ ಅಲ್ಲೇ ತಂಗಿದ್ದರು ಜತೆಗೆ ತಮ್ಮ ಸಂಗಾತಿಯಾದ ಸ್ಕೂಟರಿಗೂ ವಿಶ್ರಾಂತಿ ನೀಡಿದ್ದರು. ಮರುದಿನ ಸೋಮವಾರ ಬೆಳಗ್ಗೆ 10.45ಕ್ಕೆ ಸ್ಥಳೀಯಾಡಳಿತದಿಂದ 'ಇನ್ನರ್‌ ಲೈನ್‌ ಪರ್ಮಿಟ್' ಪಡೆದು ಖರ್ದುಂಗ್ ಲಾದತ್ತ ಸವಾರಿ ಹೊರಟರು.

 ದಾಖಲೆ ನಿರ್ಮಾಣ

ದಾಖಲೆ ನಿರ್ಮಾಣ

ಸುಂದರವಾದ ಬೆಟ್ಟದ ನಡುವೆ ಹಾವಿನಂತೆ ಹರಿದಾಡಿದ ಕಡಿದಾದ ರಸ್ತೆಯ ಮೂಲಕ ನಿಧಾನವಾಗಿ ನಾವು ಲ್ಯಾಂಬಿ ಸ್ಕೂಟರ್ ನಲ್ಲಿ ಪ್ರಯಾಣಸಿದ್ದರು. 24 ಕಿಮೀ. ಕ್ರಮಿಸುತ್ತಿದ್ದಂತೆ ಸೌತ್‌ ಪುಲ್ಲು ಪ್ರದೇಶವನ್ನು ತಲುಪಿ ಸ್ಕೂಟರ್ ನಲ್ಲಿ ಸವಾರಿ ಮಾಡುತ್ತಿದ್ದಂತೆ ಅಕ್ಕಪಕ್ಕದ ಬೆಟ್ಟಗಳ ಸೌಂದರ್ಯವನ್ನು ಕಣ್ಣು ತುಂಬಿಸಿಕೊಂಡು, ಅಂತಿಮವಾಗಿ ಮಧ್ಯಾಹ್ನ 3.30ಕ್ಕೆ ಖರ್ದುಂಗ್ ಲಾ ತುತ್ತ ತುದಿಗೆ ತಲುಪಿದ್ದಾರೆ.

ಕೊನೆಗೂ ಆ ಹಳೆಯ ಎರಡು ಲ್ಯಾಂಬಿ ಸ್ಕೂಟರ್ ಗಳು ದಾಖಲೆಯನ್ನೇ ನಿರ್ಮಿಸಿ ಬಿಟ್ಟಿವೆ. ಕನ್ಯಾಕುಮಾರಿಯಿಂದ ಲೇಹ್ ಪ್ರಾಂತ್ಯದಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಪ್ರದೇಶವಾದ ಖರ್ದುಂಗ್ ಲಾವನ್ನು ಅವುಗಳು 20 ದಿನಗಳಲ್ಲಿ 4672 ಕಿಮೀ. ಕ್ರಮಿಸುವ ಮೂಲಕ ದಾಖಲೆ ನಿರ್ಮಿಸಿ ಓಲ್ಡ್ ಈಸ್ ಗೋಲ್ಡ್ ಎನ್ನುವುದನ್ನು ಸಾಬೀತು ಪಡಿಸಿವೆ.

English summary
Scooter riders of Mangalore did successful Kashmiri yatra in the Lambi Scooter. Vehicle riders are Girish Venkataraman and Suraj Henry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X