ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ.ಕ.ಬಿಜೆಪಿ ಪಾಳಯದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸತ್ಯಜಿತ್ ಸುರತ್ಕಲ್ ಫ್ಲೆಕ್ಸ್

|
Google Oneindia Kannada News

ಮಂಗಳೂರು, ಫೆಬ್ರವರಿ 13:ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳಿಂದ ಚುನಾವಣಾ ಚಟುವಟಿಕೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆಯ ಮಟ್ಟಿಗೆ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಮೂಡಿಸುವ ಫಲಕಗಳು ಜಿಲ್ಲೆಯಲ್ಲಿ ರಾರಾಜಿಸತೊಡಗಿವೆ.

ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾದ ಅಧ್ಯಕ್ಷರಾಗಿರುವ ಸತ್ಯಜಿತ್ ಸುರತ್ಕಲ್ ಅವರ ಲೋಕಸಭಾ ಚುನಾವಣೆಯ ನಮ್ಮ ಮುಂದಿನ ಆಯ್ಕೆ ಎಂಬ ಫಲಕಗಳು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಣಿಸತೊಡಗಿವೆ. ಇದು ಬಿಜೆಪಿ ಮುಖಂಡರಲ್ಲಿ ಗೊಂದಲ ಸೃಷ್ಟಿಸಿದೆ.

ದಕ್ಷಿಣ ಕನ್ನಡದಲ್ಲಿ ಬೆಳೆಯುತ್ತಲಿದೆ ಬಿಜೆಪಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿದಕ್ಷಿಣ ಕನ್ನಡದಲ್ಲಿ ಬೆಳೆಯುತ್ತಲಿದೆ ಬಿಜೆಪಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಬಹುತೇಕ ನಿಶ್ಚಯವಾಗಿದೆ. ಆದರೆ ಈ ನಡುವೆ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಪಕ್ಷ ಟಿಕೆಟ್ ನೀಡಬಾರದೆಂಬ ಕೂಗು ಕೇಳಿ ಬರತೊಡಗಿದೆ. ಮುಂದೆ ಓದಿ...

ಪಕ್ಷದಲ್ಲಿ ಭಾರೀ ಪೈಪೋಟಿ

ಪಕ್ಷದಲ್ಲಿ ಭಾರೀ ಪೈಪೋಟಿ

ಕಳೆದ ವಿಧಾನ ಸಭಾ ಚುನಾವಣೆಯಲ್ಲೂ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿತ್ತು. ಹಾಗಾಗಿ ಈ ಬಾರಿಯ ಈ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭದ ತುತ್ತು ಎಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ ಪಕ್ಷದಲ್ಲಿ ಆಂತರಿಕವಾಗಿ ಆರಂಭವಾಗಿದೆ.

 ಲೋಕಸಭೆ ಚುನಾವಣೆ: ಮಾರ್ಚ್ 5ರಂದು ಅಧಿಸೂಚನೆ, ರಾಜ್ಯದಲ್ಲಿ ಏ.11ರಂದು ಮತದಾನ? ಲೋಕಸಭೆ ಚುನಾವಣೆ: ಮಾರ್ಚ್ 5ರಂದು ಅಧಿಸೂಚನೆ, ರಾಜ್ಯದಲ್ಲಿ ಏ.11ರಂದು ಮತದಾನ?

ಟಿಕೆಟ್ ನೀಡಬೇಡಿ

ಟಿಕೆಟ್ ನೀಡಬೇಡಿ

ಏತನ್ಮಧ್ಯೆ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಬಾರದು ಎಂಬ ಕೂಗು ಬಿಜೆಪಿಯ ಒಂದು ಬಣದಿಂದ ಕೇಳಿ ಬರುತ್ತಿದೆ. ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ , ಅಡ್ಡಹೊಳೆಯಿಂದ ಬಿ.ಸಿ. ರೋಡ್ ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಅಪೂರ್ಣ ನಳಿನ್ ಅವರ ವಿಫಲತೆಗೆ ಸಾಕ್ಷಿ ಎಂದು ಹೇಳಲಾಗುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರಿಗೆ ಅಧಿಕಾರಿಗಳಿಂದ ಕೆಲಸ ತೆಗೆಯುವ ಚಾಕಚಕ್ಯತೆ ಇಲ್ಲ. ಭಾಷಾ ಪ್ರವೀಣತೆ ಅವರಲ್ಲಿ ಇಲ್ಲ ಎಂದು ದೂರಲಾಗುತ್ತಿದೆ. ಕೇಂದ್ರ ಸರಕಾರ ಕೊಡ ಮಾಡಿದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿಯೂ ಅವರು ಹಿಂದೆ ಬಿದ್ದಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಳಿನ್ ಬದಲು ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬ ಕುಗೂ ನಳಿನ್ ವಿರೋಧಿ ಬಣದಿಂದ ಕೇಳಿ ಬರುತ್ತಿದೆ.

 ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು? ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು?

ಇದೀಗ ಫ್ಲೆಕ್ಸ್ ಸಮರ

ಇದೀಗ ಫ್ಲೆಕ್ಸ್ ಸಮರ

ಮೊದ ಮೊದಲು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತಿದ್ದ ಕೂಗು ಇದೀಗ ಫ್ಲೆಕ್ಸ್ ಸಮರಕ್ಕೂ ಮುಂದಾಗಿದೆ. ಮೋದಿ ಕನಸನ್ನು ನನಸು ಮಾಡಲು , ಸ್ಮಾರ್ಟ್ ಇಂಡಿಯಾದ ಪ್ರಧಾನಿಗೆ ಬಿಜೆಪಿ ಹಾಗೂ ಸಮಸ್ತ ಹಿಂದೂ ಸಂಘಟನೆಯ ಕಾರ್ಯಕರ್ತರ ಆಯ್ಕೆ ಸತ್ಯಜೀತ್ ಸುರತ್ಕಲ್ ಎಂಬ ಒಕ್ಕಣೆಯುಳ್ಳ ಫ್ಲೆಕ್ಸ್ ಜಿಲ್ಲೆಯಲ್ಲಿ ಅಲ್ಲಲ್ಲಿ ಕಾಣತೊಡಗಿದೆ.

ಸತ್ಯಜಿತ್ ಸುರತ್ಕಲ್

ಸತ್ಯಜಿತ್ ಸುರತ್ಕಲ್

ಕಳೆದ ಬಾರಿ ವಿಧಾನಸಭಾ ಚುನಾವಣಾ ಸಂದರ್ಭ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಅಕಾಂಕ್ಷಿ ಎಂದೇ ಗುರುತಿಸಿಕೊಂಡಿದ್ದ ಸತ್ಯ ಜೀತ್ ಸುರತ್ಕಲ್ ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಆದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸತ್ಯಜೀತ್ ಸುರತ್ಕಲ್ ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಪ್ರಖರ ಹಿಂದುತ್ವವಾದಿ ಎಂದೇ ಗುರುತಿಸಿಕೊಂಡಿರುವ ಸತ್ಯಜೀತ್ ಸುರತ್ಕಲ್ ಹಲವು ಹಿಂದೂ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.

English summary
MP Nalin Kumar Kateel facing problem in Dakshina kannada.BJP Leader Sathyajith Surathkal aspirant of Lokasabha ticket from Dakshina kannada Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X