ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಜಾನ್ ಉಪವಾಸದ ನಂತರ ಹೊಟ್ಟೆ ತುಂಬಿಸುವ ಸಮೋಸ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 11 : ರಂಜಾನ್ ಉಪವಾಸ ಸಂದರ್ಭ ಖರ್ಜೂರ ಸಹಿತ ಹಣ್ಣು ಹಂಪಲುಗಳಿಗೆ ಎಷ್ಟು ಬೇಡಿಕೆಯಿದೆಯೋ, ಅದಕ್ಕಿಂತಲೂ ದುಪ್ಪಟ್ಟು ಬೇಡಿಕೆ ತಿನ್ನುವವರ ಹೊಟ್ಟೆಗೆ ಮೋಸ ಮಾಡದ ಸಮೋಸಕ್ಕಿದೆ. ಸಮೋಸಾ ಸಮೋಸಾ... ಗರಮಾಗರಂ ಸಮೋಸಾ!

ಸಂಜೆ ವೇಳೆ ಉಪವಾಸ ಬಿಡುವ ಸಂದರ್ಭ ಪಾನೀಯದ ಜತೆಗೆ ಸಮೋಸ ತಿನ್ನುವುದು ಮುಸ್ಲಿಂ ಬಂಧುಗಳಲ್ಲಿ ವಾಡಿಕೆ. ಮಂಗಳೂರಿನಲ್ಲಿ ಹಲವಾರು ಸಮೋಸ ಮಾರಾಟದ ಅಂಗಡಿಗಳಲ್ಲಿ ಬಿರುಸಿನ ವ್ಯಾಪಾರ ನಡೆಯುತ್ತಿದೆ. ಹೊರಗೆ ಮಳೆ ಸುರಿಯುತ್ತಿದ್ದರೆ ಒಳಗೆ ಗರಮಾಗರಂ ಸಮೋಸವನ್ನು ಟೊಮೆಟೋ ಸಾಸಿನಲ್ಲಿ ಅದ್ದಿ ಸವಿಯುತ್ತಿದ್ದರೆ... [ಈ ಅಡುಗೆ ಗಂಡಸರೇ ಮಾಡಬೇಕು, ಹೆಂಡತಿ ಇಲ್ಲದಾಗ!]

Samosa hot favourite during Ramzan after fasting

ಇದಲ್ಲದೆ ರಸ್ತೆ ಬದಿ ಕೂಡಾ ಸಮೋಸ ಮಾರಾಟ ಭರದಿಂದ ಸಾಗುತ್ತಿದೆ. ದೊಡ್ಡ ಹೋಟೆಲು, ಬೇಕರಿ, ತಿಂಡಿ ತಿನಿಸುಗಳ ಮಾರಾಟ ಮಳಿಗೆ ಮುಂಭಾಗದಲ್ಲಿ ಸಂಜೆ ವೇಳೆ ಪೆಂಡಾಲು ಹಾಕಿ ವಿಶೇಷ ಮಾರಾಟ ಕೌಂಟರ್ ಗಳನ್ನು ತೆರೆದು ಸಮೋಸ ಮಾರಾಟ ಮಾಡಲಾಗುತ್ತಿದೆ ಅಂದ್ರೆ ಲೆಕ್ಕ ಹಾಕಿ.

ಮನೆಯಲ್ಲಿಯೇ ಸಮೋಸ ತಯಾರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಈಗ ಸಮೋಸ ಪಟ್ಟಿ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಇದರಿಂದ ಮನೆಯಲ್ಲಿಯೇ ಸುಲಭವಾಗಿ ಸಮೋಸ ತಯಾರಿಸಬಹುದು. ದರ ದುಬಾರಿಯಾದರೂ ವ್ಯಾಪಾರಕ್ಕೆ ಮಾತ್ರ ತೊಂದರೆ ಇಲ್ಲ. ತಟ್ಟೆ ತುಂಬ ರಾಶಿ ರಾಶಿ ಸಮೋಸಗಳಿದ್ದರೂ, ಸಂಜೆಯೊಳಗೆ ಎಲ್ಲಾ ಖಾಲಿಯಾಗಿರುತ್ತದೆ. [ಒಣಹಣ್ಣುಗಳ ಸರದಾರ ರಸಲ್ ಮಾರ್ಕೆಟ್ ಮಹಮ್ಮದ್]

Samosa hot favourite during Ramzan after fasting

ಘಮ್ಮಂತ ವಾಸನೆ ಮೂಗಿಗೆ ರಾಚುತ್ತಿದ್ದರೆ, ಹನ್ನೆರಡನೇ ಶತಮಾನದಲ್ಲಿ ಇರಾನಿನಿಂದ ಭಾರತಕ್ಕೆ ವಲಸೆ ಬಂದ ಸಮೋಸಾವನ್ನು ತಿನ್ನದೆ ಹೋದರೆ ಹೊಟ್ಟೆಗೆ ಮಾತ್ರವಲ್ಲ ಸಮೋಸಾಕ್ಕೂ ಮೋಸ ಮಾಡಿದಂತೆ!
English summary
Samosas are the hot favourites among muslims in Mangaluru during Ramzan. Samosas are being sold like hot cakes on the streets and in shops. They are in more demand than dry fruits. Utensils are available in the market to prepare Samosa at home also. Try it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X