ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳ; ಕಡವೆಗೆ ವಾಹನ ಡಿಕ್ಕಿ, ಸ್ಥಳೀಯರಿಂದ ರಕ್ಷಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 17; ಆಹಾರ ಅರಸಿ ನಾಡಿಗೆ ಬಂದ ಕಡವೆಗೆ ವಾಹನ‌ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ನಡೆದಿದೆ.

ನೇತ್ರಾವತಿ ನದಿ ಸ್ನಾನ ಘಟ್ಟ ಸಮೀಪದಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ಹೆಣ್ಣು ಕಡವೆಗೆ ವಾಹನ ಡಿಕ್ಕಿಯಾಗಿದೆ‌‌. ಕಡವೆಗೆ ಡಿಕ್ಕಿ ಯಾದರೂ ವಾಹನವನ್ನು ನಿಲ್ಲಿಸದೇ ತೆರಳಿದ್ದಾರೆ.

ಕೊಗ್ರೆಯಲ್ಲಿ ಬಾವಿಗೆ ಬಿದ್ದ ಭಾರೀ ಗಾತ್ರದ ಕಡವೆ ರಕ್ಷಣೆಕೊಗ್ರೆಯಲ್ಲಿ ಬಾವಿಗೆ ಬಿದ್ದ ಭಾರೀ ಗಾತ್ರದ ಕಡವೆ ರಕ್ಷಣೆ

ಅಫಘಾತದ ತೀವ್ರತೆಗೆ ಕಡವೆಯ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಸ್ಥಳದಲ್ಲೇ ಸುಮಾರು ಹೊತ್ತು ನರಳಾಡಿದೆ. ಸ್ಥಳೀಯರ ಮಾಹಿತಿಯ ಹಿನ್ನಲೆಯಲ್ಲಿ ಉರಗ ರಕ್ಷಕ ಸ್ನೇಕ್ ಪ್ರಕಾಶ್ ಕಡವೆಯ ಆರೈಕೆ ಮಾಡಿದ್ದಾರೆ.

ಮೇವುಣಿಸಿದವರ ದನಿ ಕೇಳಿ ಓಡೋಡಿ ಬಂದ ಕಡವೆ 'ರಾಜು'! ಮೇವುಣಿಸಿದವರ ದನಿ ಕೇಳಿ ಓಡೋಡಿ ಬಂದ ಕಡವೆ 'ರಾಜು'!

Sambar Deer Rescued After Road Accident At Dharmasthala

ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ರವಾನಿಸಲಾಗಿದೆ‌. ‌ಉಜಿರೆಯ ಇಚ್ಚಿಲ ಪಶು ಚಿಕಿತ್ಸಾಲಯದಲ್ಲಿ ಕಡವೆಗೆ ಚಿಕಿತ್ಸೆ ನೀಡಲಾಗಿದ್ದು, ಸ್ಥಳೀಯರ ನೆರವಿನಿಂದ ಕಡವೆ ಬದುಕುಳಿದಿದೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ: 3 ತಿಂಗಳು ಸಜೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ: 3 ತಿಂಗಳು ಸಜೆ

ಬೆಳ್ತಂಗಡಿಯ ಮೀಸಲು ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತು ಪ್ರಾಣಿ ಬೇಟೆ ನಡೆಯುತ್ತಿದ್ದು, ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸುಮ್ಮನಿದ್ದಾರೆ ಎಂದು ಆರೋಪಿಸಲಾಗಿದೆ.

Sambar Deer Rescued After Road Accident At Dharmasthala

ಬೇಟೆಯ ಸಂಧರ್ಭದಲ್ಲಿ ಭಯದಿಂದ ಗುಂಪಿನಲ್ಲಿದ್ದ ಕಡವೆ ಈಗ ಪ್ರತ್ಯೇಕವಾಗಿ ರಸ್ತೆಯ ಬದಿಗೆ ಬಂದಿದೆ. ಸಾಮಾನ್ಯವಾಗಿ ಗುಂಪಿನಲ್ಲಿರುವ ಕಡವೆಗಳು, ಒಂಟಿಯಾಗಿರಲು ಸಾಧ್ಯವಿಲ್ಲ. ಬೇಟೆಗಾರರ ಭಯದಿಂದ ಓಡಿ ಬಂದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.

English summary
A wild sambar deer was injured in road accident at Dharmasthala, Dakshina Kannada district. Local people rescued sambar deer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X