ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳವಾರದ ಬದಲು ಭಾನುವಾರ ಸೆಲೂನ್‌ಗೆ ರಜೆ

|
Google Oneindia Kannada News

ಮಂಗಳೂರು, ಜೂನ್ 01 : ಲಾಕ್ ಡೌನ್ ಘೋಷಣೆಯಾದ ಬಳಿಕ ಬಾಗಿಲು ಹಾಕಿದ್ದ ಸಲೂನ್‌ಗಳನ್ನು ಕೆಲವು ಷರತ್ತುಗಳೊಂದಿಗೆ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಇನ್ನು ಮುಂದೆ ಭಾನುವಾರ ಸಲೂನ್‌ಗಳಿಗೆ ರಜೆ ಇರುತ್ತದೆ ಎಂದು ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಸವಿತ ಸಮಾಜ ಈ ಕುರಿತು ಹೇಳಿಕೆ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಂಗಳವಾರದ ಬದಲು ಭಾನುವಾರ ಸಲೂನ್‌ಗಳಿಗೆ ರಜೆ ಇರುತ್ತದೆ. ವಾರದ ರಜೆಯ ದಿನವನ್ನು ಬದಲಾವಣೆ ಮಾಡಲಾಗಿದೆ.

ಕೆಲಸ ಆರಂಭ: ಸಲೂನ್, ಪಾರ್ಲರ್‌ಗಳು ಪಾಲಿಸಬೇಕಾದ ನಿಯಮಗಳುಕೆಲಸ ಆರಂಭ: ಸಲೂನ್, ಪಾರ್ಲರ್‌ಗಳು ಪಾಲಿಸಬೇಕಾದ ನಿಯಮಗಳು

ಲಾಕ್ ಡೌನ್ ವೇಳೆ ಸಲೂನ್‌ಗಳನ್ನು ಬಂದ್ ಮಾಡಲಾಗಿತ್ತು. ರವಿವಾರ ಲಾಕ್ ಡೌನ್ ಇಲ್ಲದೇ ಇದ್ದರೂ ಶೇ 80ರಷ್ಟು ಸಲೂನ್ ಬಂದ್ ಆಗಿದ್ದವು. ಆದ್ದರಿಂದ, ಇನ್ನು ಮುಂದೆ ಮಂಗಳವಾರದ ಬದಲು ರವಿವಾರ ರಜೆ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಗಳೂರು ವಿಮಾನ ದುರಂತದ ಕಹಿ ನೆನಪಿಗೆ 10 ವರ್ಷಮಂಗಳೂರು ವಿಮಾನ ದುರಂತದ ಕಹಿ ನೆನಪಿಗೆ 10 ವರ್ಷ

Salon To Close Sunday In Udupi And Dakshina Kannada

"ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಂಗಳವಾರದ ಬದಲು ರವಿವಾರ ವಾರದ ರಜೆ ಇರುತ್ತದೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ ಕರ್ನಾಟಕದಲ್ಲಿ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ

ಮಂಗಳವಾರದ ಬದಲು ರವಿವಾರ ರಜೆ ನೀಡುವ ತೀರ್ಮಾನ ಎರಡು ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ವಾರದ ರಜೆ ಬದಲಾವಣೆ ಮಾಡುವ ಕುರಿತು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ.

ಕೋವಿಡ್ -19 ಹರಡದಂತೆ ತಡೆಯಲು ಸಲೂನ್‌ಗಳನ್ನು ಮುಚ್ಚಲಾಗಿತ್ತು. ಈಗ ಹಲವು ಷರತ್ತುಗಳೊಂದಿಗೆ ಸಲೂನ್ ತೆರೆಯಲು ಅವಕಾಶ ನೀಡಲಾಗಿದೆ. ಪ್ರತಿಯೊಬ್ಬ ಗ್ರಾಹಕನಿಗೂ ಬಳಸಿ ಎಸೆಯಬಹುದಾದ ಟವೆಲ್/ಪೇಪರ್ ಶೀಟ್ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ.

ಜ್ವರ, ಶೀತ, ಕೆಮ್ಮು, ಗಂಟಲು ನೋವು ಇರುವ ಮತ್ತು ಮಾಸ್ಕ್ ಧರಿಸದ ವ್ಯಕ್ತಿಗೆ ಪ್ರವೇಶ ನೀಡುವಂತಿಲ್ಲ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಲಭ್ಯವಿರಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ಕೊಡಲಾಗಿದೆ.

English summary
Dakshina Kannada savitha samaja said that salon will close on every Sunday instead of Tuesday in Dakshina Kannada and Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X