ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂತ ಆಗ್ನೆಸ್ ಕಾಲೇಜ್ ಗೆ ನ್ಯಾಕ್ ನಿಂದ ಎ+ ಮಾನ್ಯತೆ

ದಕ್ಷಿಣ ಭಾರತದಲ್ಲಿ ಮಹಿಳಾ ಉನ್ನತ ಶಿಕ್ಷಣಕ್ಕೆ ಹೆಸರಾಗಿರುವ ಸಂತ ಆಗ್ನೆಸ್ ಕಾಲೇಜು ನ್ಯಾಕ್ ಸಂಸ್ಥೆಯಿಂದ ಎ+ ಗ್ರೇಡ್ ಮಾನ್ಯತೆ ಪಡೆದು ಸಾಧನೆ ಮಾಡಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 1: ನಗರದ ಸಂತ ಆಗ್ನೆಸ್ ಕಾಲೇಜು ಇತ್ತೀಚೆಗಷ್ಟೇ ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ ಕಾಲೇಜ್ ಆಫ್ ಎಕ್ಸಲೆನ್ಸ್ ಮಾನ್ಯತೆಯನ್ನು ಪಡೆದಿತ್ತು. ಜೊತೆಗೆ ಇದೀಗ ನ್ಯಾಕ್ ಸಂಸ್ಥೆಯಿಂದ ಎ ಪ್ಲಸ್ ಗ್ರೇಡ್ ಮಾನ್ಯತೆಯನ್ನು ಕೂಡ ತನ್ನದಾಗಿಸಿಕೊಂಡಿದೆ.

ದಕ್ಷಿಣ ಭಾರತದಲ್ಲಿ ಮಹಿಳಾ ಉನ್ನತ ಶಿಕ್ಷಣಕ್ಕೆ ಹೆಸರಾಗಿರುವ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) 1921ರಲ್ಲಿ ಅಪೋಸ್ತೊಲಿಕ್ ಕಾರ್ಮೆಲ್ ಭಗಿನಿ ಮದರ್ ಅಲೋಶಿಯಾರವರ ಮುಂದಾಳತ್ವದಲ್ಲಿ ಮಂಗಳೂರಿನಲ್ಲಿ ಆರಂಭಗೊಂಡಿತ್ತು. ಆರಂಭದಿಂದಲೂ ಇಲ್ಲಿ ಎಲ್ಲಾ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ.[ಇಂದಿನಿಂದ ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ನಡಾವಳಿ ಉತ್ಸವ]

Saint Agnes get A+ grade from NAAC

2020-21ನೆ ಸಾಲಿನಲ್ಲಿ ಶತಮಾನೋತ್ಸವವನ್ನು ಆಚರಿಸುವ ಕಾಲೇಜು ನಾಲ್ಕು ಅಂಕಗಳ ಸಿಜಿಪಿಎಯಲ್ಲಿ 3.65 ಗರಿಷ್ಠ ಅಂಕಗಳೊಂದಿಗೆ ಪ್ರಸಕ್ತ ಸಾಲಿನಲ್ಲಿ ಈ ಮಾನ್ಯತೆ ಪಡೆದಿದೆ.[ಎಸ್ಎಸ್ಎಲ್ಸಿ ಪರೀಕ್ಷೆ: ದ.ಕ ಜಿಲ್ಲೆ 33518 ವಿದ್ಯಾರ್ಥಿಗಳು, 91 ಕೇಂದ್ರಗಳು]

1999ರಲ್ಲಿ ಈ ಕಾಲೇಜು ಪ್ರಥಮ ಬಾರಿಗೆ ತನ್ನ ಗುಣಮಟ್ಟವನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಯತ್ನಿಸಿದ್ದು, ನ್ಯಾಕ್ ಸಂಸ್ಥೆಯಿಂದ 1999ರಲ್ಲಿ 'ಫೈವ್ ಸ್ಟಾರ್‌' ಸ್ಥಾನಮಾನವನ್ನು ಪಡೆದಿದೆ. 2005ರಲ್ಲಿ ಎ ಗ್ರೇಡ್ ಹಾಗೂ ಹಾಗೂ 2012ರಲ್ಲಿ ಸಿಜಿಪಿಎ 3.53 ಅಂಕಗಳೊಂದಿಗೆ ಎ ಗ್ರೇಡ್ ಮಾನ್ಯತೆಯನ್ನು ಕಾಲೇಜು ಪಡೆದಿತ್ತು ಎಂದು ಪ್ರಾಂಶುಪಾಲರಾದ ಡಾ. ಸಿ. ಜೆಸ್ವೀನಾ ತಿಳಿಸಿದ್ದಾರೆ.

English summary
Saint Agnes College of Mangalore, which recently get College of excellence credit, is now getting A+ grade from NAAC(Natonal Assessment and Accreditation Concil)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X