ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಸಾಧಕರ ಕೊರಳಿಗೆ ಚಿನ್ನದ ಪದಕದ ಗರಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 18:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿ.ಟಿ.ಯು) ಫಲಿತಾಂಶಗಳು ಹೊರಬಿದ್ದಿದ್ದು, ಅದರಲ್ಲಿ ಸಹ್ಯಾದ್ರಿ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ರಾಂಕ್ ಗಳನ್ನು ಪಡೆದಿದ್ದಾರೆ.

2019 ರ ಮಾರ್ಚ್ 18 ರಂದು ನಡೆಯಲಿರುವ ವಿ.ಟಿ.ಯು ಪದವಿ ಪ್ರದಾನ ಸಮಾರಂಭವು ವೆಂಕಯ್ಯ ನಾಯ್ಡು ಮತ್ತು ವಾಜುಭಾಯ್ ಆರ್. ವಾಲಾ ಮತ್ತು ವಿ.ಟಿ.ಯು. ಚಾನ್ಸೆಲರ್ ಇವರ ಸಮ್ಮುಖದಲ್ಲಿ ಜರುಗಲಿದೆ.

ಯುಪಿಎಸ್ ಸಿಯಲ್ಲಿ 115ನೇ ರಾಂಕ್ ಪಡೆದ ಕೀರ್ತಿಕುಮಾರ್ ಪೂಜಾರ್ ಸಂದರ್ಶನಯುಪಿಎಸ್ ಸಿಯಲ್ಲಿ 115ನೇ ರಾಂಕ್ ಪಡೆದ ಕೀರ್ತಿಕುಮಾರ್ ಪೂಜಾರ್ ಸಂದರ್ಶನ

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿ ಪವಿತ್ರೀ ಬಿ. ಶೆಟ್ಟಿ (ಬಿಇ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ) ಪ್ರಥಮ ರಾಂಕ್ ಗಳಿಸಿದ್ದಾರೆ ಮತ್ತು ಇವರು ಹೊರಹೋಗುವ 2017-18ರ ವಿ.ಟಿ.ಯು. ಬ್ಯಾಚ್ ಗೆ 15,919 ಎಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ನಾಲ್ಕು ಚಿನ್ನದ ಪದಕಗಳನ್ನೂ ಪಡೆದಿದ್ದಾರೆ.

Sahyadri bags VTU First Rank in BE Computer Science with Four Gold Medals

ಪವಿತ್ರೀ ಇವರು ನಾಲ್ಕು ಅತ್ಯಂತ ಪ್ರತಿಷ್ಠಿತ ಚಿನ್ನದ ಪದಕಗಳಾದ "ಪೆಸೆಟ್ ಗೋಲ್ಡ್ ಮೆಡಲ್", "ಆರ್.ಎನ್. ಶೆಟ್ಟಿ ಚಿನ್ನದ ಪದಕ ","ಜ್ಯೋತಿ ಚಿನ್ನದ ಪದಕ "ಮತ್ತು" ವಿಟಿಯು ಗೋಲ್ಡ್ ಮೆಡಲ್ " ತನ್ನದಾಗಿಸಿಕೊಂಡಿದ್ದಾರೆ.

ಜೊತೆಗೆ ಮಿಸ್. ಸ್ತುತಿ ಕೆ.ಎ. ಬಿಇ (ಸಿವಿಲ್ ಇಂಜಿನಿಯರಿಂಗ್) ಇವರಿಗೆ "ಕಾಂಕ್ರೀಟ್ ಟೆಕ್ನಾಲಜಿ" ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿರುವುದಕ್ಕೆ "ಅಲ್ಟ್ರಾಟೆಕ್ ಗೋಲ್ಡ್ ಮೆಡಲ್" ನೀಡಲಾಗುವುದು.

 ಚಿನ್ನದ ಪದಕ ನೀಡುವುದಾಗಿ ಹೇಳಿ 500 ರೂ ಕೊಟ್ಟರು! ಚಿನ್ನದ ಪದಕ ನೀಡುವುದಾಗಿ ಹೇಳಿ 500 ರೂ ಕೊಟ್ಟರು!

ಸಹ್ಯಾದ್ರಿಯ ಇತರ ನಾಲ್ಕು ರಾಂಕ್ ಗಳು
* ಶ್ರೀ. ಮಣಿಕಂಠ ಪಿ.ವಿ 3 ನೇ ರಾಂಕ್ ಮತ್ತು ಮಿಸ್ ಅನುಶಾ ಕೆ., 6 ನೇ ರಾಂಕ್ ಸಿ.ವಿ. ಇಂಜಿನಿಯರಿಂಗ್ ಇಲಾಖೆಯ ಎಂ.ಟೆಕ್ ಸಿವಿಲ್-ಡಿಸಿಪ್ಲೀನ್ ಆಫ್ ಕಂಪ್ಯೂಟರ್ ಎಡೆಡೆಡ್ ಡಿಸೈನ್ ಆಫ್ ಸ್ಟ್ರಕ್ಚರ್ಸ್ (CADS)
* ಮಿಸ್ ಅಥ್ಮೀಯ ಎಚ್.ಪಿ., 5 ನೇ ರಾಂಕ್ ಮತ್ತು ಶ್ರೀ ವರುಣ್ ಕೆ., 10 ನೇ ರಾಂಕ್; ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಇಲಾಖೆಯಿಂದ (MBA).

English summary
Mangaluru: VTU results are out and it is indeed a joyous and a proud moment for Sahyadri to announce that its students have bagged gold medals and ranks!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X