ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಕಲಾವಿದರಿಗೆ ತರಬೇತಿ ಶಿಬಿರ ಆರಂಭ

|
Google Oneindia Kannada News

ಮಂಗಳೂರು, ಮೇ 12 : ಎಲ್ಲಾ ಕಲಾವಿದರಲ್ಲೂ ಅಭಿಯನ ರಕ್ತಗತವಾಗಿರುತ್ತದೆ. ಆದರೆ, ಅನುಕರಣೆ ಮತ್ತು ಅಭಿನಯ ಪಕ್ವಗಾಗಬೇಕಾದರೆ, ಕಲಾವಿದರಿಗೆ ತರಬೇರಿ ಅಗತ್ಯ ಎಂದು ಹಿರಿಯ ರಂಗ ನಿರ್ದೇಶಕ ಸದಾನಂದ ಸುವರ್ಣ ಹೇಳಿದ್ದಾರೆ. ಕಲಾವಿದರು ಅಗತ್ಯ ತರಬೇತಿಯನ್ನು ಪಡೆದುಕೊಂಡಾಗ ಸಫಲತೆಯನ್ನು ಕಾಣಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಲ್ಲಾಳ್ ಬಾಗ್‍ನ ಸನಾತನ ನಾಟ್ಯಾಲಯದಲ್ಲಿ ಸೋಮವಾರ ಆಪ್-ಆಕ್ಟಿಂಗ್ ಮತ್ತು ಫರ್ಫಾರ್ಮಿಂಗ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಟಿವಿ-ಸಿನಿಮಾ ಅಭಿನಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸದಾನಂದ ಸುವರ್ಣ, ಮಂಗಳೂರಿನಲ್ಲಿ ಬಹಳಷ್ಟು ಮಂದಿ ಕಲಾವಿದರಿದ್ದಾರೆ. ಆದರೆ ಅಭಿನಯ ತರಬೇತಿಯನ್ನು ಪಡೆದವರಿಲ್ಲ ಎಂದು ಹೇಳಿದರು. [ನಾಟ್ಯ ಚಿಂತನ ಶಿಬಿರಕ್ಕೆ ತೆರೆ]

mangalore

ಜಿಲ್ಲೆಯ ಕಲಾವಿದರಿಗೆ ತರಬೇತಿ ಪಡೆಯಲು ಉತ್ತಮ ಅವಕಾಶವಿದೆ. ಅಭಿನಯದ ಬಗ್ಗೆ ಆಸಕ್ತಿ ಇರುವ ಯುವ ಕಲಾವಿದರಿಗೆ, ಪ್ರತಿಭಾವಂತರಿಗೆ ಈ ತರಬೇತಿ ಶಿಬಿರ ಒಂದು ಸುರ್ವಣಾವಕಾಶವಾಗಿದ್ದು, ಎಲ್ಲರೂ ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಹಿಂದಿನ ಯಶಸ್ವಿ ನಾಟಕಗಳನ್ನು ಈಗಿನ ಕಾಲಕ್ಕೆ ಯಶಸ್ವಿ ಎನ್ನಲು ಸಾಧ್ಯವಿಲ್ಲ. ರಂಗಭೂಮಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಪ್ರೇಕ್ಷಕರೂ ಬದಲಾಗಿದ್ದಾರೆ. ಆದ್ದರಿಂದ ಪ್ರೇಕ್ಷಕರ ನಾಡಿಮಿಡಿತವನ್ನು ನಾವು ಅರಿಯಬೇಕು. ರಂಗಭೂಮಿಯಲ್ಲಿಯೂ ಬದಲಾವಣೆಯ ಆವಿಷ್ಕಾರ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಬೆಂಗಳೂರಿನ ಆಪ್-ಆಕ್ಟಿಂಗ್ ಮತ್ತು ಫರ್ಫಾರ್ಮಿಂಗ್ ಸಂಸ್ಥೆಯ ನಿರ್ದೇಶಕಿ ಉಷಾ ಭಂಡಾರಿ ಅವರ ಸಹಯೋಗದೊಂದಿಗೆ ಒಂದು ತಿಂಗಳ ಕಾಲದ ಟಿವಿ ಮತ್ತು ಸಿನಿಮಾ ಅಭಿನಯ ತರಬೇತಿ ಶಿಬಿರವನ್ನು ಬಲ್ಲಾಳ್ ಬಾಗ್‍ನ ಸನಾತನ ನಾಟ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿಬಿರ ಇಂದು ಉದ್ಘಾಟನೆಯಾಗಿದೆ.

ಇಂದು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಶಿವಶರಣ್ ಶೆಟ್ಟಿ, ರಾಘವ ಬಿ.ವಿ. ಯಶವಂತ ಕೂಚಬಾಳ, ಚಂದ್ರಶೇಖರ ಶೆಟ್ಟಿ, ಆಪ್ ನಿರ್ದೇಶಕಿ ಉಷಾ ಭಂಡಾರಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಭಾಗವಹಿಸುಲು ಇಚ್ಛಿಸುವವರು ಉಷಾ ಭಂಡಾರಿಯವರನ್ನು 9845008282 ನಂಬರ್ ನಲ್ಲಿ ಸಂಪರ್ಕಿಸಬಹುದಾಗಿದೆ.

English summary
Youth talents have plenty of opportunities in drama and film industries. However, they need proper training to utilize their talents in the field said, Sadananda Suvarna theater artist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X