ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರ ಗುಂಡಿನ ದಾಳಿ

|
Google Oneindia Kannada News

ಮಂಗಳೂರು, ಜುಲೈ 9: ಮಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಗೋ ರಕ್ಷಣೆ ನೆಪದಲ್ಲಿ, ಮಾವಿನ ಹಣ್ಣು ಸಾಗಿಸುತ್ತಿದ್ದ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ರೌಡಿ ಶೀಟರ್ ಭವಿತ್ ರಾಜ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

 ಮಂಗಳೂರಿನ ರೌಡಿ ಶೀಟರ್ ಉಮರ್ ಫಾರುಕ್‌ಗೆ ಪೊಲೀಸರ ಗುಂಡೇಟು ಮಂಗಳೂರಿನ ರೌಡಿ ಶೀಟರ್ ಉಮರ್ ಫಾರುಕ್‌ಗೆ ಪೊಲೀಸರ ಗುಂಡೇಟು

ಜುಲೈ 7ರ ತಡರಾತ್ರಿ ಮಂಗಳೂರು ಹೊರವಲಯದ ಕುಲಶೇಖರ ಸಿಲ್ವರ್‌ಗೇಟ್ ಬಳಿ ಲಾರಿ ಚಾಲಕ ಉಳಾಯಿಬೆಟ್ಟು ನಿವಾಸಿ ಉಮರ್ ಫಾರೂಕ್ (32) ಮೇಲೆ ಹಲ್ಲೆ ನಡೆಸಲಾಗಿತ್ತು. ಟೆಂಪೋ ಗೂಡ್ಸ್ ವಾಹನದಲ್ಲಿ ಮಾವಿನಹಣ್ಣನ್ನು ಲೋಡ್ ಮಾಡಿಕೊಂಡು ಮಂಗಳೂರಿನ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತಿದ್ದ ಸಂದರ್ಭ ಕುಲಶೇಖರ ಸಿಲ್ವರ್‌ಗೇಟ್ ಸಮೀಪಿಸುತ್ತಿದ್ದಂತೆ ಬೈಕ್ ಗಳಲ್ಲಿ ಬಂದ ಮೂವರು ದುಷ್ಕರ್ಮಿಗಳು ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಲಾರಿ ಚಾಲಕ ಉಮರ್ ಫಾರೂಕ್ ಗಂಭೀರವಾಗಿ ಗಾಯಗೊಂಡಿದ್ದರು. ಲಾರಿಯಲ್ಲಿ ಗೋಸಾಗಾಟದ ಸಂಶಯದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಕುರಿತು ಕಂಕನಾಡಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.

rowdy sheeter shoot out in Mangaluru

ತನಿಖೆ ನಡೆಸಿದ ಪೊಲೀಸರು, ಈ ಪ್ರಕರಣದಲ್ಲಿ ಭವಿತ್ ರಾಜ್ ನೇರವಾಗಿ ಭಾಗಿಯಾಗಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರ ತಂಡ ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿಗೆ ಭವಿತ್ ರಾಜ್ ಬಂಧಿಸಲು ತೆರಳಿತ್ತು. ಈ ಸಂದರ್ಭ ಭವಿತ್ ರಾಜ್ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ.

ಪುತ್ತೂರು: ಸಹಾಯ ಮಾಡುವಂತೆ ಕೋರಿ ಅತ್ಯಾಚಾರ ಎಸಗಿದಪುತ್ತೂರು: ಸಹಾಯ ಮಾಡುವಂತೆ ಕೋರಿ ಅತ್ಯಾಚಾರ ಎಸಗಿದ

ಬಂಧಿಸಲು ಬಂದ ಪೊಲೀಸರ ಮೇಲೆ ಭವಿತ್ ದಾಳಿ ನಡೆಸಿದ ಪರಿಣಾಮ ಆತ್ಮರಕ್ಷಣೆಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಭವಿತ್ ರಾಜ್ ಗಂಭೀರವಾಗಿ ಗಾಯಗೊಂಡಿದ್ದು, ಪೊಲೀಸರು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

English summary
Regarding the case of assault on goods luggage driver in mangaluru, police officers opened fire on a rowdy sheeter Bhavith raj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X