ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಎಮ್ಮೆಕೆರೆ, ಹೊಯಿಗೆ ಬಜಾರ್ ಗ್ಯಾಂಗ್‌ವಾರ್‌ಗೆ ರಾಹುಲ್ ಬಲಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ.10: ಮಂಗಳೂರು ಪಾತಕ ಲೋಕದ ಗ್ಯಾಂಗ್ ವಾರ್ ಅಧ್ಯಾಯಕ್ಕೆ ಸೇರ್ಪಡೆಯಾದ ರೌಡಿ ಶೀಟರ್ ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಏಪ್ರಿಲ್ 28 ರಂದು ರಾಹುಲ್ ಕೊಲೆ ನಡೆದಿತ್ತು.

ಬಂಧಿತ ಆರೋಪಿಗಳನ್ನು ಮಹೇಂದ್ರ ಶೆಟ್ಟಿ, ಅಬುದಾಬಿಯಿಂದ ವಾಪಾಸ್ ಆಗಿದ್ದ ಅಕ್ಷಯ್ ಕುಮಾರ್, ಸುಶಿತ್, ದಿಲ್ಲೇಶ್ ಬಂಗೇರಾ, ಶುಭಂ, ವಿಷ್ಣು ಪಿ. ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 3 ತಲ್ವಾರ್, 4 ಕತ್ತಿ, 3 ಚೂರಿ, 2 ಸ್ಕೂಟರ್ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ರಾಹುಲ್ ಭಯದಿಂದ ಮಂಗಳೂರು ಬಿಟ್ಟು ವಿದೇಶಕ್ಕೆ ಹೋಗಿದ್ದ ಮಹೇಂದ್ರ ಶೆಟ್ಟಿ ಅಂಡ್ ಗ್ಯಾಂಗ್ ಮತ್ತೆ ಮಂಗಳೂರಿಗೆ ಬಂದು ಜೀವನ ನಡೆಸಲು ತೀರ್ಮಾನಿಸಿತ್ತು. ಆದರೆ ರಾಹುಲ್ ಬದುಕಿರುವವರೆಗೂ ಅದು ಸಾಧ್ಯವಿಲ್ಲ ಎಂದುಕೊಂಡು ರಾಹುಲ್ ಕೊಲೆ ಮಾಡಲಾಗಿತ್ತು ಎಂಬು ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.

Rowdy Sheeter Rahul Murder Case Accused Arrested

ರಾಹುಲ್ ಕೊಲೆ ಪ್ರಕರಣ; ಆರೋಪಿಗಳ ಪೈಕಿ ಪ್ರಧಾನ ಆರೋಪಿ ಮಹೇಂದ್ರ ಶೆಟ್ಟಿ ಮತ್ತು ರಾಹುಲ್‌ ನಡುವೆ 2016 ರಲ್ಲಿ ದ್ವೇಷ ಆರಂಭವಾಗಿತ್ತು. ಎಮ್ಮೆಕೆರ ಮೈದಾನದಲ್ಲಿ ನಡೆದ ಪಂದ್ಯದ ಕೂಟದಲ್ಲಿ ಎರಡು ಗ್ಯಾಂಗ್ ನಡುವೆ ವೈಷಮ್ಯ ಸೃಷ್ಠಿಯಾಗಿತ್ತು. ಇದರ ಮುಂದುವರಿದ ಭಾಗವಾಗಿ 2019ರಲ್ಲಿ ರಾಹುಲ್ ಮಹೇಂದ್ರನ ಮೇಲೆ ದಾಳಿ ಮಾಡಿದ್ದ, ರಾಹುಲ್ ಮೇಲೆ ಪೊಲೀಸರಿಗೆ ಮಹೇಂದ್ರ ದೂರು ನೀಡಿದ್ದ. ದೂರು ನೀಡಿದ ಬಳಿಕ ತಾನು ಇಲ್ಲೇ ಇದ್ದರೆ ಜೀವಕ್ಕೆ ಕುತ್ತು ಅಂತಾ ಮಹೇಂದ್ರ ಶೆಟ್ಟಿ ದುಬೈಗೆ ಹಾರಿದ್ದ.

ಕಳೆದ ಮಾರ್ಚ್ ನಲ್ಲಿ ದುಬೈನಿಂದ ವಾಪಾಸ್ ಆಗಿದ್ದ ಮಹೇಂದ್ರ ಶೆಟ್ಟಿ ಮಂಗಳೂರಿನಲ್ಲಿ ಬ್ಯುಸೆನೆಸ್ ಮಾಡಿಕೊಂಡು ಮಂಗಳೂರಿನಲ್ಲೇ ಇರಲು ಯೋಚಿಸಿದ್ದ. ಆದರೆ ಮಹೇಂದ್ರ ಶೆಟ್ಟಿ ವಿದೇಶದಿಂದ ಬಂದರೆ ಕೊಲ್ಲುವುದಾಗಿ ಹೇಳಿಕೊಂಡಿದ್ದ ರಾಹುಲ್ ಮಾತುಗಳು ಮಹೇಂದ್ರನ ಕಿವಿಗೆ ಬಿದ್ದಿತ್ತು.

Rowdy Sheeter Rahul Murder Case Accused Arrested

ತಾನು ಬದುಕಬೇಕಾದರೆ ರಾಹುಲ್‌ ನನ್ನು ಕೊಲೆ ಮಾಡಲೇಬೇಕು ಎಂದು ಪ್ರಕರಣದ ಪ್ರಮುಖ ಆರೋಪಿ ರೌಡಿ ಶೀಟರ್ ರಾಹುಲ್ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಕೋಳಿ ಅಂಕ ನೋಡಲು ಬಂದಾಗ ಕೊಲೆ; ಏಪ್ರಿಲ್ 28 ರಂದು ರೌಡಿಶೀಟರ್ ರಾಹುಲ್ ಮಾರಿ ಹಬ್ಬದ ಹಿನ್ನಲೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕ ನೋಡಲು ಸ್ನೇಹಿತನೊಂದಿಗೆ ಹೋಗಿದ್ದ. ಆಗ ತಲ್ವಾರ್, ಚಾಕು, ಚೂರಿಗಳನ್ನು ಬಳಸಿಕೊಂಡು ರಾಹುಲ್ ಮೇಲೆ ದಾಳಿ ಮಾಡಲಾಗಿತ್ತು. ಪ್ರಕರಣ ನಡೆದ ಎರಡು ವಾರಗಳ ನಂತರ ಮಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಕೊಲೆ ಪ್ರಕರಣದಲ್ಲಿ ಕಾರ್ತಿಕ್ ಶೆಟ್ಟಿ ಸಹ ಕೈ ಜೋಡಿಸಿದ್ದಾನೆ. ಮಹೇಂದ್ರ ಶೆಟ್ಟಿ ಜೊತೆಗೆ ರಾಹುಲ್ ದ್ವೇಷ ಇಟ್ಟುಕೊಂಡಿದ್ದ. ಆದ್ದರಿಂದ ಈ ಕೊಲೆಗೆ ಆತ ಕೈ ಜೋಡಿಸಿದ್ದ. ಇವರಿಬ್ಬರ ಗ್ಯಾಂಗ್ ಸೇರಿ ರಾಹುಲ್ ಹತ್ಯೆ ಮಾಡಿದೆ.
ಅಸಲಿಗೆ ಈ ಗ್ಯಾಂಗ್ ವಾರ್ ನಟ ನಿರ್ದೇಶಕ ರಾಜ್ ಬಿ. ಶೆಟ್ಟಿಯ 'ಗರುಡ ಗಮನ ವೃಷಭ ವಾಹನ' ಚಿತ್ರದ ಕಥೆಯನ್ನೇ ಹೋಲುತ್ತದೆ.

ಚಲನಚಿತ್ರ ದಲ್ಲಿ ಬರುವ ಗ್ಯಾಂಗ್ ವಾರ್, ಎಮ್ಮೆಕರೆ ಮೈದಾನದಲ್ಲಿ ನಡೆದ ಶೂಟಿಂಗ್ ಎಲ್ಲವೂ ಈ ಕೊಲೆ ಪ್ರಕರಣದಲ್ಲಿ ಮರುಕಳಿಸಿದೆ. ಎಮ್ಮೆಕೆರೆ ಮತ್ತು ಹೊಯಿಗೆ ಬಝಾರ್ ಗ್ಯಾಂಗ್‌ಗಳ ನಡುವಿನ ಕದನದಲ್ಲಿ ಹೊಯಿಗೆ ಬಝಾರ್‌ನ ಗ್ಯಾಂಗ್ ಲೀಡರ್ ರಾಹುಲ್ ಬಲಿಯಾಗಿದ್ದಾನೆ.

ರಾಹುಲ್ ಪಾಂಡೇಶ್ವರ ಠಾಣೆಯ ರೌಡಿ ಶೀಟರ್ ಆಗಿದ್ದು, ವಿಶ್ವಹಿಂದೂ ಪರಿಷತ್ ಹೊಯಿಗೆ ಬಜಾರ್ ಘಟಕದ ಗೋರಕ್ಷಾ ಪ್ರಮುಖ್ ಆಗಿದ್ದ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಹೊಯಿಗೆ ಬಜಾರ್ ತಂಡದ ಪ್ರಮುಖ ಹುಲಿವೇಷ ಪಾತ್ರಧಾರಿಯಾಗಿಯೂ ಗುರುತಿಸಿಕೊಂಡಿದ್ದ.

ಎಮ್ಮೆಕೆರೆ ಮತ್ತು ಹೊಯಿಗೆ ಬಜಾರ್ ತಂಡದ ನಡುವಿನ ಸಂಘರ್ಷದ ಇತಿಹಾಸ ನಿನ್ನೆ ಮೊನ್ನೆಯದಲ್ಲ. ಎರಡೂ ಹುಲಿವೇಷ ತಂಡಗಳ ಮಧ್ಯೆ ಆಗಾಗ್ಗೆ ಹುಟ್ಟಿಕೊಳ್ತಾ ಇದ್ದ ಸಣ್ಣಪುಟ್ಟ ಗಲಾಟೆಗಳೇ ಸದ್ಯ ರಾಹುಲ್ ಹತ್ಯೆ ಮೂಲಕ ಮತ್ತೆ ಮಂಗಳಾದೇವಿ ಭಾಗದ ರಕ್ತಸಿಕ್ತ ರೌಡಿಸಂಗೆ ಮುನ್ನುಡಿಯಿಟ್ಟಿದೆ.

Rowdy Sheeter Rahul Murder Case Accused Arrested

ಸದ್ಯ ಮೂರು ವರ್ಷದ ಹಿಂದೆ ಎಮ್ಮೆಕೆರೆ ತಂಡದ ಜೊತೆ ಗಲಾಟೆ ಮಾಡಿ ಚೂರಿ ಇರಿದಿದ್ದ ರಾಹುಲ್ ಅದೇ ಎಮ್ಮೆಕೆರೆ ಟೀಂನ ಹುಡುಗರ ಕೈಯಿಂದ ಹೆಣವಾಗಿದ್ದಾನೆ. ಮೂರು ವರ್ಷದ ಹಿಂದೆ ಎಮ್ಮೆಕೆರೆ ಟೀಂ ಹುಡುಗರ ಕೊಲೆಗೆ ಯತ್ನಿಸಿದ್ದ ರಾಹುಲ್ ಜೀವಕ್ಕೆ ಆ ಬಳಿಕ ಬೆದರಿಕೆ ಇತ್ತು. ಯಾವುದೇ ಕ್ಷಣ ರಾಹುಲ್ ಪ್ರತೀಕಾರ ಆಗುತ್ತೆ ಅಂತಾನೂ ಹೇಳಲಾಗಿತ್ತು. ಇದೇ ಕಾರಣಕ್ಕೆ ರಾಹುಲ್ ಎಮ್ಮೆಕೆರೆ ಭಾಗಕ್ಕೆ ಹೋಗುತ್ತಲೇ ಇರಲಿಲ್ಲ.

ಗೆಳೆಯರ ಸೂಚನೆಯಂತೆ ಅಲರ್ಟ್ ಆಗಿಯೇ ಇರುತ್ತಿದ್ದ. ಆದರೆ ಕೋಳಿ ಅಂಕದ ಹುಚ್ಚನಾಗಿದ್ದ ರಾಹುಲ್ ಎಲ್ಲೇ ಕೋಳಿ ಅಂಕ ನಡೆದರೂ ಅಲ್ಲಿ ಹಾಜರಾಗುತ್ತಿದ್ದ. ಹೀಗಾಗಿ ಎಪ್ರಿಲ್ 28 ರ ಗುರುವಾರ ಬೋಳೂರಿನ ಮಾರಿಯಮ್ಮ ದೇವಸ್ಥಾನದ ಮಾರಿ ಪೂಜೆಯ ಹಿನ್ನೆಲೆ ಎಮ್ಮೆಕೆರೆಯ ಕ್ರಿಕೆಟ್ ಗ್ರೌಂಡ್ ನಲ್ಲಿ ಕೋಳಿ ಅಂಕ ಆಯೋಜಿಸಲಾಗಿತ್ತು. ‌ಮೊದಲೇ ಕೋಳಿ ಅಂಕದ ಹುಚ್ಚು ತಲೆಗೆ ಏರಿಸಿಕೊಂಡಿದ್ದ ರಾಹುಲ್ ತನ್ನ ಗೆಳೆಯನ ಜೊತೆ ಎಮ್ಮೆಕೆರೆಗೆ ಹೋಗಿದ್ದ.

ಮಧ್ಯಾಹ್ನ 3.30ರ ಸುಮಾರಿಗೆ ಬರೋಬ್ವರಿ ಮೂರು ವರ್ಷದ ಬಳಿಕ ರಾಹುಲ್ ಎಮ್ಮೆಕೆರೆಗೆ ಬಂದಿದ್ದ. ಇದನ್ನ ಅಲ್ಲಿದ್ದ ಎಮ್ಮೆಕೆರೆಯ ಹುಡುಗರು ನೋಡಿ ಮಹೇಂದ್ರ ಶೆಟ್ಟಿಗೆ ಸುದ್ದಿ ಮುಟ್ಟಿಸಿದ್ದಾರೆ. ಹೇಳಿಕೇಳಿ ಅದು ಎಮ್ಮೆಕೆರೆ, ಮೂರು ವರ್ಷದ ಹಿಂದೆ ಇದೇ ಎಮ್ಮೆಕೆರೆ ಟೀಂನ ಹುಡುಗರಿಗೆ ಚೂರಿ ಹಾಕಿದ್ದ ರಾಹುಲ್. ಸದ್ಯ ಒಬ್ಬಂಟಿಯಾಗಿ ಅದೇ ಎಮ್ಮೆಕೆರೆಯಲ್ಲಿ ಇದ್ದಾನೆ ಅನ್ನೋ ವಿಚಾರ ತಿಳಿದು ಎಲ್ಲಾ ರೆಡಿ ಮಾಡಿಕೊಂಡ ಮಹೇಂದ್ರನ ತಂಡ ದಾಳಿ ಮಾಡಲು ಸಂಚು ರೂಪಿಸಿತು.

5.45ರ ಹೊತ್ತಿಗೆ ರಾಹುಲ್ ಕೋಳಿ ಅಂಕ ಮುಗಿಸಿ ತನ್ನ ‌ಗೆಳೆಯನ ಜೊತೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಹೊತ್ತಿಗೆ ಮಹೇಂದ್ರ ನ ಟೀಂ ದಾಳಿ ನಡೆಸಿದೆ. ಸ್ಕೂಟರ್‌ನಿಂದ ಎಳೆದೊಯ್ದು ಎಮ್ಮೆಕೆರೆ ಗ್ರೌಂಡ್‌ನ ದೈವಸ್ಥಾನದ ಎದುರಲ್ಲೇ ಯದ್ವಾತದ್ವಾ ತಲ್ವಾರು ಬೀಸಿದ್ದಾರೆ. ತಲೆ, ಎದೆ, ಭುಜ, ಕತ್ತು ಹೀಗೆ ಸಿಕ್ಕಸಿಕ್ಕಲಿ ನಾಲ್ವರು ಸೇರಿಕೊಂಡು ಕೊಚ್ಚಿ ಕೊಂದಿದ್ದಾರೆ.

ಎಮ್ಮೆಕೆರೆ ‌ಮತ್ತು ಹೊಯಿಗೆ ಬಜಾರ್ ಟೀಂನ ಸಂಘರ್ಷ ರಾಹುಲ್ ಕೊಲೆ ಮೂಲಕ ಮತ್ತೆಜೀವ ಪಡೆದಿದೆ. ಕೃತ್ಯದಲ್ಲಿ ಒಟ್ಟು ಹದಿಮೂರು ಮಂದಿ ಆರೋಪಿಗಳು ಭಾಗವಹಿಸಿದ್ದು ಉಳಿದ ಆರೋಪಿಗಳಿಗಾಗಿ ಪೊಲೀಸರು ತಲಾಶ್ ಆರಂಭಿಸಿದ್ದಾರೆ.

English summary
Mangaluru police arrested rowdy sheetera Kakke Rahul murder case accused. Rahul murdered on April 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X