ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೋರಂ ಫೀಜಾ ಮಾಲ್ ನಿಂದ 'ರೋಕ್ ಆನ್ ಮಂಗಳೂರು' ಸ್ಪರ್ಧೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ . 09 : ಸಂಗೀತಗಾರರ ಪ್ರತಿಭೆಯನ್ನು ಅನಾವರಣಗೊಳಿಸಲು ಮಂಗಳೂರಿನ ಫೋರಂ ಫೀಜಾ ಮಾಲ್ ಮುಂದಾಗಿದೆ. ಪ್ರತಿಭಾವಂತ ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಫೋರಂ ಫೀಜಾ ಮಾಲ್ ಇದೇ ಡಿಸೆಂಬರ್ 17ರಂದು ರೋಕ್ ಆನ್ ಮಂಗಳೂರು' ಮೂಲಕ ಉತ್ತಮ ವೇದಿಕೆ ಕಲ್ಪಿಸಿ ಕೊಡುತ್ತಿದೆ.

ಹೌದು ನಗರದ ಪ್ರತಿಭಾನ್ವಿತ ಸಂಗೀತಗಾರರಿಗಂತೂ ಸಂತಸ ವಿಷಯ ಇದೇ ಬರುವ ಡಿ. 17 .ರಂದು 'ರೋಕ್ ಆನ್ ಮಂಗಳೂರು' ಸಂಗೀತ ಸ್ಪರ್ಧೆಯು ನಗರದ ಪಾಂಡೇಶ್ವರ ಫೋರಂನ ಫೀಜಾ ಮಾಲ್ ನಲ್ಲಿ ಆಯೋಜಿಸಲಾಗಿದ್ದು, ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.

ಇನ್ನು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಉದಯೋನ್ಮುಖ ಸಂಗೀತಗಾರರು ಜನಪ್ರಿಯ ಸೂಫಿ ಕಲಾವಿದರ ಮುಂದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಆಭಾ ಹಂಜೂರ(ಗಿಟಾರಿಸ್ಟ್ ) ಭಾರತದ ಅತ್ಯಂತ ಪ್ರಸಿದ್ಧ ಫ್ಯೂಷನ್ ಬ್ಯಾಂಡ್, ಸುಸ್ಮಿತ್ ಸೇನ್ ಮತ್ತು ಸುಪ್ರತಿಕ್ ಘೋಷ್ ಮಾತ್ರವಲ್ಲದೆ ಸಂಸ್ಥಾಪಕ ಹಾಗೂ ಸಂಯೋಜಕರಾಗಿರುವ ಹಿಂದಿ ಜಾನಪದ ಬ್ಯಾಂಡ್ ಔರ್ಕೊ ಲೈವ್ ಅವರು ಈ ಸಂಗೀತ ಸ್ಪರ್ಧೆಯ ನಿರ್ಣಾಯಕರಾಗಿದ್ದಾರೆ.

ಈ ಕುರಿತು ಫೋರಂ ಫೀಜಾ ಮಾಲ್ ನ ಮಾರ್ಕೆಟಿಂಗ್ ಮುಖ್ಯಸ್ಥ ಸುನೀಲ್ ಮಾತನಾಡಿ , '' ಕೇವಲ ಶೈಕ್ಷಣಿಕಕ್ಕೆ ಮಾತ್ರ ಸೀಮೆತವಾಗಿರದೆ ಮಂಗಳೂರಿನಲ್ಲಿ ಬಹಳಷ್ಟು ಪ್ರತಿಭಾವಂತ ಯುವಜನರಿದ್ದಾರೆ.

ಮಾತ್ರವಲ್ಲದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕರಾಗಿದ್ದಾರೆ, ಈ ಸ್ಪರ್ಧೆ ಎಲ್ಲಾ ಪ್ರತಿಭಾನ್ವಿತರಿಗೆ ಒಂದು ಉತ್ತಮ ವೇದಿಕೆಯಾಗಿದೆ'' ಎಂದರು.

ಆಭಾ ಹಂಜೂರ ಅವರು ಶನಿವಾರ(ಡಿ.10) ನಡೆಯುವ ಎರಡನೇ ಸುತ್ತಿನ ತೀರ್ಪುಗಾರರಾಗಿರುತ್ತಾರೆ ಎಂದು ಸುನೀಲ್ ತಿಳಿಸಿದರು. ಇಲ್ಲಿಯವರೆಗೆ ಸುಮಾರು 30 ಬ್ಯಾಂಡ್ ತಂಡಗಳು ಸ್ಪರ್ಧೆಗೆ ಹೆಸರು ನೊಂದಾಯಿಸಿವೆ.

ನಗರದ ಜನಪ್ರಿಯ ಬ್ಯಾಂಡ್ ತಂಡವಾಗಿರುವ ಫೆಂಟಾಸ್ಟಿಕ್ ಫೋರ್ ಹಾಗೂ ಡೆಪ್ತ್ ಅನಾಲಿಸಿಸ್ ಅವರೂ ಕೂಡಾ ಸ್ಪರ್ಧಿಯಲ್ಲಿ ಪಾಲ್ಗೊಳ್ಳಲಿದೆ. ಇನ್ನೂ ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಶನಿವಾರ ಸಂಜೆ 4.30ರವರೆಗೆ ಸಮಯಾಕಾಶವಿದೆ. ಆಸಕ್ತರು 0824-2498498 ಕರೆ ಮಾಡಿ ನೋಂದಾಯಿಸಬಹುದಾಗಿದೆ.

English summary
The air in the city is crackling with "Rock On Mangaluru" - a music competition organized by Forum Fiza Mall in the city has given some of the city's rock musicians to showcase their talent. competition start on December 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X