ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ಟ್ರಾಫಿಕ್

|
Google Oneindia Kannada News

ಮಂಗಳೂರು, ಡಿಸೆಂಬರ್ 03: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್ ಗಟ್ಟಲೇ ಮೂರು ಗಂಟೆಗೂ ಹೆಚ್ಚು ಕಾಲ ರಸ್ತೆ ಬ್ಲಾಕ್ ಆಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮಣಿ ಬಳಿ ನಡೆದಿದೆ.

ತಡರಾತ್ರಿ ಲಾರಿ ರಸ್ತೆ ಮಧ್ಯ ಕೆಟ್ಟು ನಿಂತಿದ್ದರೂ ಲಾರಿಯನ್ನು ತೆರವುಗೊಳಿಸಲು ಪೋಲೀಸರು ತೋರಿದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಚಾರ ದಟ್ಟಣೆ : ಜಾಲಹಳ್ಳಿ ಜಂಕ್ಷನ್‌ನಲ್ಲಿ ಅಂಡರ್ ಪಾಸ್‌ ನಿರ್ಮಾಣಸಂಚಾರ ದಟ್ಟಣೆ : ಜಾಲಹಳ್ಳಿ ಜಂಕ್ಷನ್‌ನಲ್ಲಿ ಅಂಡರ್ ಪಾಸ್‌ ನಿರ್ಮಾಣ

ಲಾರಿ ಮುಂಜಾನೆಯೇ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದರೂ ಅದನ್ನು ರಸ್ತೆ ಮಧ್ಯದಿಂದ ತೆರವುಗೊಳಿಸುವ ಕಾರ್ಯವನ್ನು ತಕ್ಷಣಕ್ಕೆ ಮಾಡದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

Road block at near Mani

ಹೆದ್ದಾರಿ ಬ್ಲಾಕ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ತಡವಾಗಿ ಆಗಮಿಸಿದ ಪೋಲೀಸರು ಇದೀಗ ರಸ್ತೆಯನ್ನು ಕ್ಲಿಯರ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಿಮಾನ ಪತನದ ದುರಂತದಲ್ಲಿ ಅವರ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್!ವಿಮಾನ ಪತನದ ದುರಂತದಲ್ಲಿ ಅವರ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್!

ಜನಪ್ರತಿನಿಧಿಗಳು, ಸಚಿವರು ಈ ರೀತಿ ರಸ್ತೆಯ ಬ್ಲಾಕ್ ನಲ್ಲಿ ಸಿಕ್ಕಿಕೊಂಡಾಗ ಕ್ರೇನ್ ತರಿಸಿ ಕೆಟ್ಟು ನಿಂತ ವಾಹನಗಳನ್ನು ಪೊಲೀಸರು ತೆರವುಗೊಳಿಸುತ್ತಾರೆ. ಆದರೆ ಜನಸಾಮಾನ್ಯರು ಅನುಭವಿಸುವ ತೊಂದರೆ ಪರಿಹರಿಸಲು ಪೊಲೀಸರು ಮುಂದಾಗುವುದಿಲ್ಲ ಎಂದು ಸ್ಥಳೀಯರು ಸಿಟ್ಟಾಗಿದ್ದಾರೆ.

Road block at near Mani

ನಾಲ್ಕೈದು ಕಿಲೋಮೀಟರ್ ನಷ್ಟು ವ್ಯಾಪ್ತಿಯಲ್ಲಿ ವಾಹನಗಳ ಸಾಲು ನಿಂತಿದ್ದರೂ ಕೇವಲ ಇಬ್ಬರು ಪೊಲೀಸರನ್ನು ವಾಹನ ದಟ್ಟನೆ ನಿರ್ವಹಣೆಗೆ ನಿಯೋಜಿಸಿರುವುದು ಪೋಲೀಸರ ಕರ್ತವ್ಯ ಪಾಲನೆಯನ್ನು ಎತ್ತಿ ತೋರಿಸಿದಂತಾಗಿದೆ.

English summary
Traffic jam in Managalur-Bangaluru National Highway near Maani of Puttur due to a lorry got stuck in middle of the Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X