ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಮಾ.15ರಿಂದ ಆರ್‌ಟಿಐ ಅಡಿ ಸೀಟು ಹಂಚಿಕೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮಾ.9 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್‌ಟಿಐ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಮಾ. 15ರಿಂದ ಆರಂಭವಾಗಲಿದೆ. ಲಭ್ಯವಿರುವ ಸೀಟುಗಳಿಗಿಂತ ಹೆಚ್ಚು ಅರ್ಜಿಗಳು ಬಂದಿದ್ದು, ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಡೆಸಲು ಸರ್ಕಾರ ತೀರ್ಮಾನಿಸಿದೆ.

ಜಿಲ್ಲೆಯಲ್ಲಿ ಎಲ್‌ಕೆಜಿಯ 25 ಹಾಗೂ ಒಂದನೇ ತರಗತಿಯ 152 ಶಾಲೆಗಳು ಸೇರಿ ಒಟ್ಟು 177 ಶಾಲೆಗಳಲ್ಲಿ ಎಲ್‌ಕೆಜಿಗೆ 329 ಹಾಗೂ ಒಂದನೇ ತರಗತಿಗೆ 1796 ಸೀಟುಗಳು ಲಭ್ಯವಿದೆ. ಪ್ರಸಕ್ತ ಸಾಲಿನಲ್ಲಿ ಇದಕ್ಕೆ ಕ್ರಮವಾಗಿ 548 ಹಾಗೂ 2869 ಅರ್ಜಿಗಳು ಬಂದಿವೆ.

rte

ಈ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಅವರು ವಾಸ ಮಾಡುವ ವಾರ್ಡ್ ಅಥವಾ ಬ್ಲಾಕ್ ವ್ಯಾಪ್ತಿಯ ಶಾಲೆಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಸೀಟುಗಳು ಲಭ್ಯವಾಗದಿದ್ದರೆ ಸಮೀಪದ ವಾರ್ಡ್ ಅಥವಾ ಬ್ಲಾಕ್‌ನ ಶಾಲೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವಿಲ್ಲ. [ಆರ್ ಟಿಐ ಹೋರಾಟದಲ್ಲಿ ಮಕ್ಕಳಿಗೆ ಜಯ]

ತಾಲೂಕುವಾರು ವಿವರ : ಮಂಗಳೂರು ಉತ್ತರ ವಲಯದಲ್ಲಿ ಎಲ್‌ಕೆಜಿ 19 ಅರ್ಜಿಗಳು ಹಾಗೂ ಒಂದನೇ ತರಗತಿಗೆ 826 ಅರ್ಜಿಗಳು ಬಂದಿವೆ. ಇಲ್ಲಿ ಎಲ್‌ಕೆಜಿಗೆ 16 ಹಾಗೂ ಒಂದನೇ ತರಗತಿಗೆ 426 ಸೀಟುಗಳು ಲಭ್ಯವಿದೆ. ಮೂಡುಬಿದಿರೆಯಲ್ಲಿ 1ನೇ ತರಗತಿಗೆ 214 ಅರ್ಜಿಗಳು ಸ್ವೀಕೃತಗೊಂಡಿವೆ.

ಮಂಗಳೂರು ದಕ್ಷಿಣದಲ್ಲಿ ಒಂದನೇ ತರಗತಿಗೆ 561 ಅರ್ಜಿಗಳು, ಬಂಟ್ವಾಳದಲ್ಲಿ 831 ಅರ್ಜಿಗಳು, ಪುತ್ತೂರಿನಲ್ಲಿ 104 ಅರ್ಜಿಗಳು, ಬೆಳ್ತಂಗಡಿಯಲ್ಲಿ 304 ಅರ್ಜಿಗಳು ಸ್ವೀಕೃತಗೊಂಡಿವೆ. ಸುಳ್ಯದಲ್ಲಿ ಎಲ್‌ಕೆಜಿ 204 ಮತ್ತು 1ನೇ ತರಗತಿಯಲ್ಲಿ 29 ಅರ್ಜಿಗಳು ಸ್ವೀಕೃತಗೊಂಡಿವೆ.

English summary
Right to Education (RTE) seat distribution form March 15 in Mangaluru. 177 schools of district have received 329 applications for LKG and 1796 for 1st stranded under RTE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X