• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ತರಬೇತು ಗೊಳ್ಳುತಿದ್ದಾರೆ ಶೂಟಿಂಗ್ ಕಲಿಗಳು

By ಕಿರಣ್ ಸಿರ್ಸಿಕರ್
|

ಮಂಗಳೂರು, ಫೆಬ್ರವರಿ 27: ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಬಯಕೆಗೆ ಮಂಗಳೂರಿನಲ್ಲಿ ವೇದಿಕೆ ಕಲ್ಪಿಸಲಾಗಿದೆ. ಕರಾವಳಿ ಭಾಗದ ಮೊಟ್ಟಮೊದಲ ಶೂಟಿಂಗ್ ಸ್ಪೋರ್ಟ್ಸ್ ರೈಫಲ್ ಕ್ಲಬ್ ಮಂಗಳೂರಿನಲ್ಲಿ ಸದ್ದಿಲ್ಲದೇ ಕಾರ್ಯಚರಿಸುತ್ತಿದೆ. ಇಲ್ಲಿ 10 ಮೀಟರ್ ಏರ್ ರೈಫಲ್ , ಹಾಗು ಏರ್ ಪಿಸ್ಟಲ್ ಟ್ರೈನಿಂಗ್ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿರುವ 3 ರೈಫಲ್ ತರಬೇತಿ ಕೇಂದ್ರಗಳನ್ನು ಹೊರತುಪಡಿಸಿದರೆ ಮಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಮಂಗಳೂರು ರೈಫಲ್ ಕ್ಲಬ್ ರಾಜ್ಯದ ನಾಲ್ಕನೇ ತರಬೇತಿ ಕೇಂದ್ರವಾಗಿದೆ.

ಒಲಂಪಿಕ್ಸ್ ನಲ್ಲಿ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ನಲ್ಲಿ ಮಿಂಚಿದ ದೇಶದ ಚಿನ್ನದ ಹುಡುಗ ಅಭಿನವ್ ಬಿಂದ್ರಾ ಹಾಗೆಯೇ ದೇಶದ ಅಭಿಮಾನದ ಚಿಲುಮೆ ಅಂಜಲಿ ಭಾಗ್ವತ್, ಜಸ್ಪಾಲ್ ರಾಣಾ, ರಾಜವರ್ಧನ್ ಸಿಂಗ್ ರಾಠೋಡ್ ರಂತೆ ರೈಫಲ್ ಶೂಟರ್ ಗಳಾಗಬೇಕೆಂಬ ಬಯಕೆ ಹಲವರಲ್ಲಿರುತ್ತದೆ. ಆದರೆ ಕನಸುಗಳಿಗೆ ರೆಕ್ಕೆ ಕಟ್ಟುವ ಅವಕಾಶವಿರುವುದಿಲ್ಲ. ಅವಕಾಶಗಳಿದ್ದರೂ ಮುಂಬಯಿ, ದೆಹಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾತ್ರ. ಆದರೆ ಈ ನಡುವೆ ಕರಾವಳಿಗರಿಗೆ ರೈಫಲ್ ಶೂಟಿಂಗ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅವಕಾಶ ತೆರೆದುಕೊಂಡಿದೆ. ಮಂಗಳೂರು ರೈಫಲ್ ಕ್ಲಬ್ 2016 ರಲ್ಲಿ ಆರಂಭವಾಗಿದ್ದು . ಶೂಟಿಂಗ್ ಸ್ಪೋರ್ಟ್ಸ್ ನಲ್ಲಿ ಆಸಕ್ತರಿಗೆ ತರಬೇತಿ ಆರಂಭಿಸಿದೆ. ಈ ಸಂಸ್ಥೆಯಲ್ಲಿ ಈಗಾಗಲೇ 10 ಮೀಟರ್ ಏರ್ ರೈಫಲ್ ಹಾಗೂ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ತರಬೇತಿ ನೀಡುತ್ತಿದೆ.

ಸಂಪೂರ್ಣ ಆಧುನಿಕ ಶೈಲಿಯಲ್ಲಿ ತರಬೇತಿ ಉಪಕರಣಗಳನ್ನು ಒಳಗೊಂಡಿರುವ ಈ ತರಬೇತಿ ಕೇಂದ್ರಗಳಲ್ಲಿ ಶೂಟಿಂಗ್ ಸ್ಪರ್ಧೆಗಾಗಿ ಶಾಲಾ ವಿಧ್ಯಾರ್ಥಿಗಳು ಸೇರಿದಂತೆ ವಿವಾಹಿತ ಮಹಿಳೆಯರು ತರಭೇತಿ ಆರಂಭಿಸಿ ಶೂಟಿಂಗ್ ಸ್ಪೋರ್ಟ್ಸ್ ನಲ್ಲಿ ಆಸಕ್ತಿ ತೋರುತಿದ್ದಾರೆ.

ಈ ಗಾಗಲೇ ಮಂಗಳೂರಿನ ಹಲವಾರು ಶಾಲಾ ವಿದ್ಯಾರ್ಥಿಗಳು ಏರ್ ರೈಫಲ್ ಶೂಡಿಂಗ್ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಸ್ಟೀಜ್ ಇಂಟರ್ ನ್ಯಾಷನಲ್ ಶಾಲೆಯಲ್ಲೂ ತರಬೇತಿ ಆರಂಭಿಸುವ ಉದ್ದೇಶ ಈ ರೈಫಲ್ ಕ್ಲಬ್ ಹೊಂದಿದೆ. ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರಮಟ್ಟದ ಮುಕ್ತ ಶೂಟಿಂಗ್ ಚಾಂಪಿಯನ್‌ಷಿಪ್ ನಲ್ಲಿ ಜೂನಿಯರ್ ಗರ್ಲ್ಸ್ ವಿಭಾಗದಲ್ಲಿ ಮಂಗಳೂರಿನ ಟೀಮ್ ಬೆಳ್ಳಿ ಪದಕ ಪಡೆದುಕೊಂಡಿದೆ.

ದೇಶೀಯ ನಿರ್ಮಿತ 10 ಮೀಟರ್ ಏರ್ ರೈಫಲ್. 177 ಹಾಗೂ 10 ಮೀಟರ್ ಏರ್ ಪಿಸ್ತೂಲ್ ತರಬೇತಿ ಆರಂಭಗೊಂಡಿದ್ದು ಮುಂಬರುವ ಕೆಲವೇ ದಿನಗಳಲ್ಲಿ ರಷ್ಯನ್ ನಿರ್ಮಿತ ರೈಫಲ್ ಗಳಲ್ಲಿ ತರಬೇತಿ ಆರಂಭಗೊಳ್ಳಲಿದೆ. ಇದಲ್ಲದೇ ಡಬಲ್ ಬ್ಯಾರೆಲ್ ರೈಫಲ್ ಫೈರ್, 10 ಮೀಟರ್ ರಾಪಿಡ್ ಫೈರ್ ತರಬೇತಿ ಆರಂಭಿಸುವ ಚಿಂತನೆ ನಡೆದಿದೆ. ಮುಂಬರುವ ದಿನಗಳಲ್ಲಿ ಕಡಲ ತಡಿಯ ನಗರಗಳಿಂದಲೂ ಶೂಟಿಂಗ್ ಪ್ರತಿಭೆಗಳು ದೇಶದ ಗಮನ ಸೆಳೆಯಲಿದ್ದಾರೆ.

English summary
Mangaluru Rifle training club started in 2016.This is the only academy for shooting in the Dakshina Kannada district and through the state of Karnataka this is one of the district to have a game of shooting sports after Bangalore. It is to develop sports of shooting with young talents at costal region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more