ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ರಿವೇಂಜ್ ಲವ್ ಸ್ಟೋರಿ ತಾರ್ಕಿಕ ಅಂತ್ಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 12; ಮಂಗಳೂರಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ತವರು ಮನೆಯ 22 ವರ್ಷಗಳ ಬಳಿಕದ ರಿವೇಂಜ್ ಲವ್ ಸ್ಟೋರಿ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ನಿಶ್ಚಿತಾರ್ಥವಾಗಿದ್ದ ಎಂಎಸ್ಸಿ ಪಧವೀಧರೆ ಯುವತಿ, ಎರಡೇ ದಿನದಲ್ಲಿ ಹಣ ಮತ್ತು ಒಡವೆಯೊಂದಿಗೆ ನಾಪತ್ತೆಯಾಗಿದ್ದು, ಇದೀಗ ಅಣ್ಣನ ನಾಗಬೇಕಾದವನನ್ನು ಮದುವೆಯಾಗಿ ಮತ್ತೆ ತಾಯಿ ಮನೆಗೆ ಬಂದಿದ್ದಾಳೆ.

ಮಂಗಳೂರಿನ ಸೆಂಟ್ರಲ್ ವೇರ್ ಹೌಸ್ ಬಳಿಕ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯೂರಿಟಿಯಾಗಿರುವ ಗದಗ ಮೂಲದ ಮಹಿಳೆ ಯಶೋಧಾ ಎಂಬುವವರ ಮಗಳು ರೇಷ್ಮಾ, ತನ್ನ ತಾಯಿಯ ಸ್ವಂತ ಅಕ್ಕನ ಮಗನನ್ನೇ ಮದುವೆಯಾಗಿ ಈಗ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ.

22 ವರ್ಷಗಳ ಬಳಿಕ ದ್ವೇಷ ಸಾಧನೆ: ಮಂಗಳೂರಿನಲ್ಲೊಂದು ವಿಚಿತ್ರ ರಿವರ್ಸ್ ಲವ್ ಜಿಹಾದ್!22 ವರ್ಷಗಳ ಬಳಿಕ ದ್ವೇಷ ಸಾಧನೆ: ಮಂಗಳೂರಿನಲ್ಲೊಂದು ವಿಚಿತ್ರ ರಿವರ್ಸ್ ಲವ್ ಜಿಹಾದ್!

ಯಶೋಧಾ ಮೂಲತಃ ಮುಸ್ಲಿಂ ಕುಟುಂಬದವರಾಗಿದ್ದು, ಹಿಂದೂವನ್ನು ಮದುವೆಯಾದ ಬಳಿಕ ಹಿಂದೂವಾಗಿ ಬದಲಾಗಿದ್ದರು. ಹಜರತ್ ಎಂಬ ಹೆಸರಿನಿಂದ ಯಶೋಧಾ ಎಂಬ ಹೆಸರಿಗೆ ಮರು ನಾಮಕರಣ ಮಾಡಿಕೊಂಡಿದ್ದರು. ಯಶೋಧಾ ಹೀಗೆ ಅಂತರ್ ಧರ್ಮ ವಿವಾಹವಾಗಿ 22 ವರ್ಷಗಳೇ ಕಳೆದುಹೋಗಿದೆ.

ಮಗಳ ಪ್ರೇಮ ವಿವಾಹಕ್ಕೆ ಮನನೊಂದು ದಂಪತಿ ಆತ್ಮಹತ್ಯೆಗೆ ಶರಣು ಮಗಳ ಪ್ರೇಮ ವಿವಾಹಕ್ಕೆ ಮನನೊಂದು ದಂಪತಿ ಆತ್ಮಹತ್ಯೆಗೆ ಶರಣು

Revenge love story

ಆದರೆ ಇದೀಗ 22 ವರ್ಷಗಳ ಬಳಿಕ ಮನೆ ಮಗಳ ಮೇಲೆ ಸೇಡು ತೀರಿಸಿಕೊಂಡ ತವರು ಮನೆ ಕುಟುಂಬ, ಯಶೋಧಾ ಮಗಳಾದ ರೇಷ್ಮಾಳನ್ನು ಮನಪರಿವರ್ತನೆ ಮಾಡಿ, ತಮ್ಮದೇ ಕುಟುಂಬದವನಿಗೆ ಮದುವೆ ಮಾಡಿಸಿ, ಮತ್ತೆ ಮೂಲ ಧರ್ಮಕ್ಕೆ ಮತಾಂತರ ಗೊಳಿಸಿದ್ದಾರೆ.

ನಡು ರಸ್ತೆಯಲ್ಲಿ ಚೂರಿ ಇರಿದ ಪ್ರೇಮಿ; ಯುವತಿ ಸಾವುನಡು ರಸ್ತೆಯಲ್ಲಿ ಚೂರಿ ಇರಿದ ಪ್ರೇಮಿ; ಯುವತಿ ಸಾವು

ಯಶೋಧಾ ಸ್ವಂತ ಅಕ್ಕನ ಮಗ ಅಕ್ಬರ್ ಎಂಬಾತನ ಜೊತೆ ರೇಷ್ಮಾ ಪರಾರಿಯಾಗಿ ಮದುವೆಯಾಗಿದ್ದಾಳೆ. ರೇಷ್ಮಾಗೆ ವರಸೆಯಲ್ಲಿ ಅಕ್ಬರ್ ಅಣ್ಣನಾಗಬೇಕಿದ್ದು, ಮಗಳು ಆಕೆಯ ಅಣ್ಣನನ್ನೇ ಮದುವೆಯಾಗಿರೋದು ತಾಯಿಯನ್ನು ಗರಬಡಿಸಿದಂತಾಗಿದೆ.

ಈ ಹಿನ್ನಲೆಯಲ್ಲಿ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಯಶೋಧಾ ,ನಿಶ್ಚಿತಾರ್ಥವಾಗಿದ್ದ ಯುವಕ ಹಾಕಿದ್ದ ಚಿನ್ನಾಭರಣ ಮತ್ತು ತಾನು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಕದ್ದು ಪರಾರಿಯಾಗಿದ್ದಾಳೆ ಅಂತಾ ಮಗಳ ವಿರುದ್ಧವೇ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಬರ್ಕೆ ಠಾಣೆಗೆ ಮದುವೆಯಾಗಿ ರೇಷ್ಮಾ-ಅಕ್ಬರ್ ಬಂದಿದ್ದಾರೆ. ಗದಗದಲ್ಲಿ ಇಬರಿಬ್ಬರ ವಿವಾಹವಾಗಿದ್ದು, ಈ ಮದುವೆಗೆ ಯಶೋಧಾ ಅಣ್ಣನ ನೇತೃತ್ವ ಇತ್ತು ಅಂತಾ ಹೇಳಲಾಗಿದೆ. ಬರ್ಕೆ ಠಾಣೆಗೆ ಆಗಮಿಸಿದ ಜೋಡಿಯನ್ನು ಪೊಲೀಸರು ಕಳ್ಳತನದ ಆರೋಪದಡಿ ಬಂಧನ ಮಾಡಿದ್ದಾರೆ.

love s tory

ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ಮಾಡಿದ ಪೊಲೀಸರು ಕಳ್ಳತನ ಪ್ರಕರಣದ ಅಡಿಯಲ್ಲಿ ಬಂಧನ ಮಾಡಿದ್ದಾರೆ.‌ ಕಳ್ಳತನ ಆರೋಪದಡಿಯಲ್ಲಿ ರೇಷ್ಮಾ ಮತ್ತು ಅದಕ್ಕೆ ಸಹಕಾರ ನೀಡಿದ ಆರೋಪದಡಿಯಲ್ಲಿ ಅಕ್ಬರ್ ಬಂಧನವಾಗಿದೆ.

ಯಶೋಧಾ ಮತ್ತು ಆಕೆಯ ಪತಿ ವೀರೇಶ್ ಮಕ್ಕಳನ್ನು ಕಷ್ಟಪಟ್ಟು ದುಡಿದು ವಿಧ್ಯಾಭ್ಯಾಸ ಕೊಡಿಸಿದ್ದರು. ಮಗಳು ಎಂಎಸ್ಸಿ ಪದವೀಧರೆಯಾದರೆ, ಮಗ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಯಾಗಿದ್ದಾನೆ. ಯಶೋಧಾ ಅಪಾರ್ಟ್ಮೆಂಟ್‌ನ ಮನೆಗಳಲ್ಲಿ ಮುಸುರೆ ತಿಕ್ಕಿದ್ರೆ, ಗಂಡ ವೀರೇಶ್ ಗಾರೆ ಕೆಲಸಕ್ಕೆ ಹೋಗಿ ಮಕ್ಕಳನ್ನು ಸಾಕಿದ್ದರು. ಮಗಳು ರೇಷ್ಮಾಗೆ ಹಡಗಲಿ ಮೂಲದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ಮಂಗಳೂರಿನಲ್ಲೇ ಅದ್ಧೂರಿ ನಿಶ್ಚಿತಾರ್ಥವನ್ನೂ ಈ ದಂಪತಿ ಮಾಡಿದ್ದರು.

ಆದರೆ ಮಗಳು ಮಾಡಿದ ಮಹಾ ಮೋಸಕ್ಕೆ ಹೆತ್ತವರು ಕಣ್ಣೀರ ಶಾಪ ಹಾಕಿದ್ದಾರೆ. ಮಗಳು ಅಣ್ಣನಾಗಬೇಕಾದವನನ್ನೇ ಮದುವೆಯಾಗಿರೋದು ಹೆತ್ತವರನ್ನು ಧಿಗ್ಭಾಂತ್ರರನ್ನಾಗಿ ಮಾಡಿದೆ. "ತವರು ಮನೆಯವರು ತಾನು ಮದುವೆಯಾದ ಸಂಧರ್ಭದಲ್ಲಿ ಯಾವ ವಿರೋಧವನ್ನೂ ವ್ಯಕ್ತಪಡಿಸಿಲ್ಲ. ಆದರೆ ಮಕ್ಕಳಾಗಿ, ಮಗಳು ದೊಡ್ಡವಳಾಗಿ ಮದುವೆ ವಯಸ್ಸಿಗೆ ಬಂದ ಸಂಧರ್ಭದಲ್ಲಿ ಈ ರೀತಿ ಮಾಡಿ ಸೇಡು ತೀರಿಸಿಕೊಳ್ಳುವ ಬದಲು ವಿಷ ಕೊಟ್ಟು ಸಾಯಿಸಿದರೇನೇ ಚೆನ್ನಾಗಿತ್ತು" ಅಂತಾ ಯಶೋಧಾ ದುಃಖ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಮಗಳ ಭವಿಷ್ಯ ಚೆನ್ನಾಗಿರಬೇಕೆಂದು ಹೆತ್ತವರು ಮಾಡಿದ ತ್ಯಾಗ, ಕಷ್ಟಗಳೆಲ್ಲಾ ಮಗಳ ಕ್ಷಣದ ನಿರ್ಧಾರದಿಂದ ಮಣ್ಣುಪಾಲಾಗಿದೆ. ಅದೇನೇ ಆದರೂ ಜಗತ್ತಿನ್ನಲ್ಲಿ ಕೆಟ್ಟ ಮಕ್ಕಳಾದರೂ ಇರುತ್ತಾರೆ, ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಅನ್ನೋದು ಮತ್ತೆ ರುಜುವಾತಾಗಿದೆ.

English summary
22 year old revenge love story come to an end after Reshma come to Barke police station, Mangaluru with husband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X