ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಹೊರ ರಾಜ್ಯದ ಮೀನು ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲು ಸೂಚನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 27: ಮಂಗಳೂರಿನ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ‌ಮೀನು ವಾಹನಗಳಿಗೆ ತಕ್ಷಣವೇ ನಿರ್ಬಂಧ ಹೇರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

Recommended Video

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕ ಶ್ರೀಕಂಠೇಗೌಡ ಮತ್ತು ಅವರ ಪುತ್ರ,ದೂರು ದಾಖಲು

ನಾಲ್ಕು ದಿನಗಳಿಂದ ಜಿಲ್ಲಾಡಳಿತ ಮೀನುಗಾರಿಕೆ ಮೇಲಿದ್ದ ನಿರ್ಬಂಧವನ್ನು ಸಡಿಲಿಕೆ ಮಾಡಿದೆ. ಆ ಬಳಿಕ ಇತರ ರಾಜ್ಯಗಳಿಂದ ಮೀನು ತುಂಬಿದ ಟ್ರಕ್ ಗಳು ​​ರಾತ್ರಿ ಮೀನುಗಾರಿಕಾ ಬಂದರಿಗೆ ಆಗಮಿಸುತ್ತಿವೆ. ಜೊತೆಗೆ ಮೀನುಗಾರಿಕೆಗಾಗಿ ಬಂದರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು, ಕಾರ್ಮಿಕರು ಸೇರುತ್ತಿದ್ದಾರೆ. ಮೀನುಗಳ ಹರಾಜು ಪ್ರತಿಕ್ರಿಯೆಯೂ ನಡೆಯುತ್ತಿದೆ.

Restriction On Entry Of Fish Vehicle From Other States To Mangaluru

ಆದರೆ ಸಾಮಾಜಿಕ ಅಂತರವನ್ನು ಯಾರೂ ಕಾಯ್ದುಕೊಳ್ಳುತ್ತಿರಲಿಲ್ಲ. ಬಂದರು ಪ್ರದೇಶದಲ್ಲಿ ಸಾವಿರಾರು ಜನರು ಒಟ್ಟಿಗೆ ಸೇರುತ್ತಿದ್ದರು. ಮಾಸ್ಕ್ , ಕೈಗವಸು ಮತ್ತು ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸದೆ ಕಾರ್ಮಿಕರು ಮೀನು ವಿಲೇವಾರಿ ಕೆಲಸದಲ್ಲಿ ನಿರತರಾಗಿದ್ದರು. ಇವುಗಳನ್ನು ಗಮನಿಸಿ ಈ ನಿರ್ಬಂಧವನ್ನು ಹೇರಿರುವುದಾಗಿ ತಿಳಿದುಬಂದಿದೆ.

English summary
Minister of fisheries Kota srinivasa pujari directed dakshina kannada dc to restrict on entry of fishing vehicles from other states to mangaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X