ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮುದ್ರದಲ್ಲಿ ಸಿಲುಕಿಕೊಂಡ ಟಗ್; ರಕ್ಷಣೆಗಾಗಿ ವಿಡಿಯೋದಲ್ಲಿ ಮನವಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 16; ಅರಬ್ಬೀ ಸಮುದ್ರದಲ್ಲಿ ಸಿಲುಕಿಹಾಕಿಕೊಂಡಿರುವ ಟಗ್‌ನಲ್ಲಿರುವ 9 ಮಂದಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಭಾರೀ ಕಡಲಬ್ಬರ ಅಡ್ಡಿಯಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಕೋಸ್ಟ್ ಗಾರ್ಡ್ ನೌಕೆಗೂ ಟಗ್ ಹತ್ತಿರ ಹೋಗಲೂ ಸಾಧ್ಯವಾಗದ ವಾತವರಣ ನಿರ್ಮಾಣವಾಗಿದೆ. ಟಗ್ನಲ್ಲಿದ್ದ ಕಾರ್ಮಿಕರು ಸೆಲ್ಫಿ ವಿಡಿಯೋ ಮಾಡಿ ರಕ್ಷಣೆಗಾಗಿ ಮನವಿ ಮಾಡಿದ್ದಾರೆ.

ಪಡುಬಿದ್ರೆಯಿಂದ 17 ನಾಟೆಕಲ್ ಮೈಲ್ ದೂರದಲ್ಲಿರುವ ಟಗ್ ಸದ್ಯ ಆ್ಯಂಕರ್ ಕಡಿದುಕೊಂಡು ಕಲ್ಲಿಗೆ ಸಿಲುಕಿಹಾಕೊಂಡಿದ್ದು, ದೊಡ್ಡ ತೆರೆಗಳು ಬೋಟ್ ಗಳಿಗೆ ಅಪ್ಪಳಿಸುತ್ತಿದೆ. ಎಂ. ಆರ್. ಪಿ. ಎಲ್‌ಗೆ ಬರುವ ತೈಲ ಹಡಗುಗಳಿಗೆ ಆಳ ಸಮುದ್ರದಲ್ಲಿ ಪೈಪ್ ಅಳವಡಿಸುವ ಕಾರ್ಯ ಈ ಟಗ್‌ ಗಳು ಮಾಡುತ್ತಿದ್ದು, ಭಾರೀ ಚಂಡಮಾರುತ ಮುನ್ಸೂಚನೆ ನೀಡಿದ್ದರೂ ಸಮುದ್ರದಲ್ಲೇ ಇದ್ದವು.

ಶಿವಮೊಗ್ಗ; ತೌಕ್ತೆ ಅಬ್ಬರ, ತುಂಗಾ ಜಲಾಶಯದಿಂದ ನದಿಗೆ ನೀರು ಶಿವಮೊಗ್ಗ; ತೌಕ್ತೆ ಅಬ್ಬರ, ತುಂಗಾ ಜಲಾಶಯದಿಂದ ನದಿಗೆ ನೀರು

ಈ ಟಗ್‌ನ ಗುತ್ತಿಗೆಯ ಅವಧಿ ಮೊದಲೇ ಮುಗಿದಿದ್ದು, ಗುತ್ತಿಗೆದಾರನ ಸೂಚನೆ ಇಲ್ಲದೇ ಇದ್ದಿದ್ದರಿಂದ ಸಮುದ್ರದಲ್ಲೇ ಲಂಗರು ಹಾಕಿತ್ತು. ಅಟ್ಲಾಂಟಿಕ್‌ ಶಿಪ್ಪಿಂಗ್‌ ಮಾಲೀಕತ್ವ‌ ಸಂಸ್ಥೆಯ ಕೋರಮಂಡಲ್ ಹೆಸರಿನ ಟಗ್ ಇದಾಗಿದ್ದು, ಎಂ. ಆರ್‌. ಪಿ. ಎಲ್‌. ನ ತೇಲು ಜೆಟ್ಟಿ ನಿರ್ವಹಣೆ ಮಾಡುತ್ತಿತ್ತು.

ತೌಕ್ತೆ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ಹೆಚ್ಚಾದ ಅಲೆಗಳ ನರ್ತನತೌಕ್ತೆ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ಹೆಚ್ಚಾದ ಅಲೆಗಳ ನರ್ತನ

 Rescue Efforts Delayed From Tug Alliance

ಕಳೆದ ಡಿಸೆಂಬರ್‌ಗೆ ಗುತ್ತಿಗೆಯ ಅವಧಿ ಮುಗಿದಿದ್ದು, ಸಿಬ್ಬಂದಿಗಳಿಗೆ ಕೋವಿಡ್‌ ಇದ್ದ ಕಾರಣ ಬಂದರಿನ ಹೊರವಲಯದಲ್ಲೇ ನಿಲ್ಲಿಸಲಾಗಿತ್ತು. ಟಗ್‌ನ ಮಾಲೀಕ ಸಂಸ್ಥೆಯ ಸೂಚನೆ ಇಲ್ಲದ ಕಾರಣ ಅದೇ ಸ್ಥಿತಿಯಲ್ಲಿತ್ತು. ಚಂಡಮಾರುತದಿಂದಾಗಿ ಭಾರೀ ಗಾತ್ರದ ಅಲೆಗಳೆದ್ದು ಇಂಜಿನ್‌ ರೂಮಿಗೆ ನುಗ್ಗಿದ್ದು, ಸದ್ಯ ಟಗ್ ಭಾಗಶಃ ವಾಲಿದ ಸ್ಥಿತಿಯಲ್ಲಿದೆ.

ತೌಕ್ತೆ ಚಂಡಮಾರುತ ಅಬ್ಬರ: ಭಾರೀ ಮಳೆಗೆ ದ.ಕ ಜಿಲ್ಲೆ ತತ್ತರತೌಕ್ತೆ ಚಂಡಮಾರುತ ಅಬ್ಬರ: ಭಾರೀ ಮಳೆಗೆ ದ.ಕ ಜಿಲ್ಲೆ ತತ್ತರ

ಕೋರ ಮಂಡಲ್ ಟಗ್‌ ನಲ್ಲಿ 9 ಮಂದಿ ಕಾರ್ಮಿಕರಿದ್ದು, ಎಲ್ಲರೂ ಉತ್ತರ ಭಾರತ ಮೂಲದವರು ಎಂದು ತಿಳಿದುಬಂದಿದೆ.

English summary
Rescue efforts delayed in Mangaluru to save crew from tug alliance. 9 crew member slips into raging Arabian Sea from container vessel SSL Ganga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X