ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಲ್ಸೇತುವೆ ಅರ್ಧಂಬರ್ಧ ಕಾಮಗಾರಿ; ತಲಪಾಡಿ ಟೋಲ್ ನಿರಾಕರಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 01: ನಿಗದಿತ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ್ದನ್ನು ವಿರೋಧಿಸಿ ಮಂಗಳೂರು-ಕೇರಳ ಗಡಿ ಭಾಗದ ತಲಪಾಡಿ ಟೋಲ್ ಗೇಟ್ ನಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರ ಮುಂದಾಳತ್ವದಲ್ಲಿ ಟೋಲ್ ನಿರಾಕರಣೆ ಪ್ರತಿಭಟನೆ ನಡೆಯಿತು.

ಬೆಂಗಳೂರಿನ 12 ಮೇಲ್ಸೇತುವೆಗಳಿಗೆ ಕಾಯಕಲ್ಪ: ಎಲ್ಲೆಲ್ಲಿ?ಬೆಂಗಳೂರಿನ 12 ಮೇಲ್ಸೇತುವೆಗಳಿಗೆ ಕಾಯಕಲ್ಪ: ಎಲ್ಲೆಲ್ಲಿ?

ಶಾಸಕ‌ರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ನೇತೃತ್ವದಲ್ಲಿ ಟೋಲ್ ಸಂಗ್ರಹ ತಡೆ ನಡೆಯಿತು. ಇಲ್ಲಿ ನವಯುಗ ಕಂಪೆನಿಯು ಟೋಲ್ ಸಂಗ್ರಹ ಮಾಡುತ್ತಿದ್ದು, ಪಂಪ್ ವೆಲ್ ಮೇಲ್ಸೇತುವೆ ನಿರ್ಮಾಣದ ಹೊಣೆ ಹೊತ್ತಿದೆ. ಆದರೆ ಅವಧಿಗೆ ಸರಿಯಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ನಿನ್ನೆಯೇ ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಜನರಿಂದ ಟೋಲ್ ಸಂಗ್ರಹ ಮಾಡದಂತೆ ಎಚ್ಚರಿಕೆ ನೀಡಿದ್ದರು.

Refusal To Pay Toll In Talapadi Protesting Incompletion of Flyover Construction

ಇಂದು ಸಂಜೆ 6 ಗಂಟೆವರೆಗೆ ಟೋಲ್ ಸಂಗ್ರಹ ಮಾಡದಂತೆ ಬಿಜೆಪಿ ಶಾಸಕರು ಸೂಚನೆ ನೀಡಿದ್ದಾರೆ. ಇಲ್ಲದಿದ್ದರೆ ಬಲವಂತವಾಗಿ ಟೋಲ್ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಜ.31ರ ಒಳಗೆ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಹೋದರೆ ಟೋಲ್ ಅನ್ನು ಸಂಪೂರ್ಣ ಬಂದ್ ‌ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.
English summary
A protest was held at the Mangaluru-Kerala border near Thalapady against the incompletion of the National Highway 66 Pump Well Bridge by refusing to pay toll
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X