• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದೂ ಧರ್ಮದ ರಕ್ಷಣೆಗಾಗಿ ನಾನು ಹಿಂದೂ ಭಯೋತ್ಪಾದಕ ಎನಿಸಿಕೊಳ್ಳಲು ಹೆಮ್ಮೆ ಪಡುತ್ತೇನೆ..!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ.10: ನಾನೊಬ್ಬ ಹಿಂದೂ ಭಯೋತ್ಪಾದಕ ಎಂದು ಅಝಾನ್ ವಿರುದ್ಧ ಹೋರಾಟ ಮಾಡುವವರು ಸಾಮಾಜಿಕ ಹೋರಾಟ ಪ್ರಶಾಂತ್ ಸಂಬರ್ಗಿ ಉಡುಪಿಯಲ್ಲಿ ಹೇಳಿದ್ದಾರೆ.

ಆ ಮೂಲಕ ಅಜಾನ್ ವಿರುದ್ಧ ಹೋರಾಟ ಮಾಡುವವರು ಹಿಂದೂ ಭಯೋತ್ಪಾಧಕರು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಗೆ ತಿರುಗೇಟು ನೀಡಿದ್ದಾರೆ.

ಹಿಂದೂಗಳ ರಕ್ಷಣೆಗಾಗಿ, ಹಿಂದೂ ಧರ್ಮ ಜಾಗೃತಿಗಾಗಿ ಮಾಡುವ ಕೆಲಸವನ್ನು ಭಯೋತ್ಪಾದನೆ ಅಂತಾ ಹೇಳೋದಾದರೆ ನಾನು ಹಿಂದೂ ಟೆರರಿಸ್ಟ್ ಅಂತಾ ಹೆಮ್ಮೆಯಿಂದ ಹೇಳುತ್ತೇನೆ ಎಂದು ಸಾಮಾಜಿಕ ಹೋರಾಟ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.

ಬಿಕೆ ಹರಿಪ್ರಸಾದ್ ಅವರ ಮನಸ್ಥಿತಿಯನ್ನು ಈ ಹೇಳಿಕೆ ತೋರಿಸುತ್ತಿದೆ. "ನಾನು ಒಬ್ಬ ಹಿಂದೂ ಟೆರರಿಸ್ಟ್ ಹಿಂದೂಗಳ ರಕ್ಷಣೆಗೆ, ಹಿಂದೂಗಳ ಒಗ್ಗಟ್ಟಿಗಾಗಿ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ನಾನೊಬ್ಬ ಹಿಂದೂ ಭಯೋತ್ಪಾದಕ ಆಗುತ್ತೇನೆ. ಒಳ್ಳೆಯ ಕೆಲಸಕ್ಕೆ ಉಗ್ರವಾದಿ ಆದರೇನು..? ಸ್ವಾತಂತ್ರ್ಯ ಹೋರಾಟಗಾರ ಆದರೇನು," ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ಆದೇಶ ಪಾಲಿಸಿ ಎಂದರೆ ನಾವು ಉಗ್ರವಾದಿಗಳು ಆಗುತ್ತೇವೆ. ಶಬ್ಧ ಮಾಲಿನ್ಯದ ಬಗ್ಗೆ ಹೋರಾಟ ಮಾಡಿದರೆ ನಾವು ಭಯೋತ್ಪಾದಕರಾಗುತ್ತೇವೆ. ಹಾಗಾದರೆ ಸುಪ್ರೀಂಕೋರ್ಟ್ ನ ನ್ಯಾಯಾಧೀಶರು ಕೂಡಾ ಭಯೋತ್ಪಾದಕರಾಗುತ್ತಾರಾ..? ಬೆಳಿಗ್ಗೆ 6 ಗಂಟೆಯ ಒಳಗೆ ಯಾವುದೇ ಜೋರಾದ ಶಬ್ಧ ಇಡಬಾರದು ಎಂದು ಸುಪ್ರೀಕೋರ್ಟ್ ಆದೇಶ ಮಾಡಿ ಕೊಟ್ಟು 22 ವರ್ಷಗಳು ಆಗಿದೆ. ಆದರೆ ರಾಜ್ಯದಲ್ಲಿ ಇನ್ನೂ ಆದೇಶವನ್ನು ಜಾರಿಗೆ ತರಲಾಗಿಲ್ಲ.

 Ready to become a Hindu terrorist in defense of Hinduism: Prashant Sambaragi

ಬಿ.ಕೆ ಹರಿಪ್ರಸಾದ್ ಅವರ ಪ್ರಕಾರ ಆದೇಶ ಕೊಟ್ಟ ನ್ಯಾಯಾಧೀಶರನ್ನ ಭಯೋತ್ಪಾದಕರು ಎಂದು ಕರೆಯುತ್ತೀರಾ..? ಈ ಭಾರತದಲ್ಲಿ ಎಲ್ಲರಿಗೂ ಒಂದೇ ಕಾನೂನು ಜಾರಿಯಾಗಬೇಕು. ದೇಶದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸೈಲೆಂಟ್ ಜೋನ್ ಇರಬೇಕು. ದೇಶದ 12 ಹೈಕೋರ್ಟ್ ಗಳು ಇದನ್ನೇ ಹೇಳಿದೆ. ಬಿ.ಕೆ ಹರಿಪ್ರಸಾದ್ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಒಂದು ಜಾತಿಯನ್ನ ಭದ್ರವಾಗಿ ಇಟ್ಟುಕೊಳ್ಳಲು ಹೊರಟಿದ್ದಾರೆ ವೋಟ್ ಬ್ಯಾಂಕ್ ರಾಜಕಾರಣಕ್ಕೆ ನನ್ನ ಧಿಕ್ಕಾರ ಎಂದರು.

ಶಿಯಾ ಬೇರೆ ಸುನ್ನಿ ಬೇರೆ ಎಂದು ಹೇಳುವ ಗಂಡಸ್ತನ ನಿಮಗಿಲ್ವಾ..?

ಉಗ್ರ ಕಸಬ್ ನನ್ನು ಹಿಂದೂ ಉಗ್ರವಾದಿ ಎಂದು ಬಿಂಬಿಸಲು ಕಾಂಗ್ರೆಸ್ ಮುಂದಾಗಿತ್ತು. ಕಸಬ್ ಜೀವಂತ ವಾಗಿ ಸಿಗದಿದ್ದರೆ ಆತನನ್ನು ಹಿಂದೂ ಅಂತಾ ಹೇಳುತ್ತಿದ್ದರು. ಕರ್ನಾಟಕದಲ್ಲಿ ಹಲವು ಬಾರಿ ಹಿಂದೂಗಳನ್ನು ಒಡೆಯಲು ಕಾಂಗ್ರೆಸ್ ಮುಂದಾಗಿದೆ. ಮುಸಲ್ಮಾನ ಧರ್ಮವನ್ನು ಒಡೆಯಲು ಕಾಂಗ್ರೆಸ್ ಯಾಕೆ ಮುಂದಾಗುವುದಿಲ್ಲ..? ಶಿಯಾ ಬೇರೆ ಸುನ್ನಿ ಬೇರೆ ಎಂದು ಹೇಳುವ ಗಂಡಸ್ತನ ನಿಮಗಿಲ್ವಾ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದರು.

English summary
Social activist Prashant Sambaragi says I am Ready to become a Hindu terrorist in defense of Hinduism. Opposition leader BK Hariprasad Hindu terrorists statement react by prashanth sambaragi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X