ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.6, 7ರಂದು ರಾಷ್ಟ್ರೀಯ ಬಂಟ ಮಹಾಸಮ್ಮೇಳನ

|
Google Oneindia Kannada News

ಬೆಂಗಳೂರು, ಫೆಬ್ರವರಿ 02 : ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ (ರಿ) ಫೆ.6 ಮತ್ತು 7ರಂದು 'ರಾಷ್ಟ್ರೀಯ ಬಂಟ ಮಹಾಸಮ್ಮೇಳನ -2016'ಅನ್ನು ಆಯೋಜಿಸಿದೆ. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಂಟ ಸಮುದಾಯದ ಬಂಧು-ಭಾಂದವರನ್ನು ಒಂದೇ ಚಪ್ಪರದಡಿ ತಂದು ವಿಚಾರವಿನಿಮಯಕ್ಕೆ ಅವಕಾಶ ಮಾಡಿಕೊಡುವುದು ಸಮ್ಮೇಳನದ ಉದ್ದೇಶವಾಗಿದೆ.

ಮಂಗಳೂರಿನ ಪುರಭವನದಲ್ಲಿ 'ರಾಷ್ಟ್ರೀಯ ಬಂಟ ಮಹಾಸಮ್ಮೇಳನ -2016' ನಡೆಯಲಿದ್ದು, ಫೆ.6ರ ಶನಿವಾರ ಮಧ್ಯಾಹ್ನ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ.ಡಿ. ಕೆ. ಚೌಟ ಅವರನ್ನು ಸಾಂಪ್ರದಾಯಿಕ ಸ್ವಾಗತದ ಮೂಲಕ ಮಂಗಳೂರು ವಿವಿ ಕಾಲೇಜು ಆವರಣದಿಂದ ಪುರಭವನಕ್ಕೆ ಕರೆದುಕೊಂಡು ಬರಲಾಗುತ್ತದೆ. [ಮಂಗಳೂರು : ಬಂಟ್ಸ್ ಹಾಸ್ಟೆಲ್ ವೃತ್ತ ಲೋಕಾರ್ಪಣೆ]

 bunts

ಶನಿವಾರ ಸಂಜೆ ಘಂಟೆ 4 ಗಂಟೆಗೆ ಪುರಭವನದ ಆವರಣದಲ್ಲಿ ನಿರ್ಮಿಸಲಾದ ಸಭಾಂಗಣದಲ್ಲಿ ನಾಡೋಜ ಕೈಯಾರ ಕಿಂಜ್ಞಣ್ಣ ರೈ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಡೆ ಅವರು ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ, ಬಾರ್ಕೂರು ಬಂಟ ಮಹಾಸಂಸ್ಥಾನದ ಶ್ರೀ ಡಾ.ವಿಶ್ವ ಸಂತೋಷ ಭಾರತಿ ಶ್ರೀಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [ಜಾತಿ ಆಧಾರಿತ ಜನಗಣತಿ: ಬಂಟರು ಏನ್ನಂತಾರೆ?]

ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ (ರಿ) ನಡೆಸುತ್ತಿರುವ ಜನಯೋಪಯೋಗಿ ಕಾರ್ಯಕ್ರಮಗಳ ಕುರಿತ 'ಸದಾಶಯ' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಟ್ರಸ್ಟ್ ಹೊರತರುತ್ತಿದ್ದು, ಅದರ ಚೊಚ್ಚಲ ಸಂಚಿಕೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎನ್. ವಿನಯ ಹೆಗ್ಡೆ ಬಿಡುಗಡೆಗೊಳಿಸಲಿದ್ದಾರೆ. ಸಂಜೆ 7 ಗಂಟೆಯಿಂದ ತುಳುನಾಡ ವೈಭವವನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಫೆಬ್ರವರಿ 7ರಂದು ಬೆಳಗ್ಗೆ 9.30ರಿಂದ ಮಹಿಳಾ ಸಮಾವೇಶ, ಬೆಳಗ್ಗೆ 11 ಗಂಟೆಗೆ 'ಸಾಮಾಜಿಕ ಸ್ಥಿತ್ಯಂತರದಲ್ಲಿ ಬಂಟರು' ಎಂಬ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12 ರಿಂದ 1 ಗಂಟೆಯ ತನಕ ಮುಂಬೈ ಬಂಟರಿಂದ "ತೆಲಿಕೆದ ಕುಸಲ್" ಕಾರ್ಯಕ್ರಮ ನಡೆಯಲಿದೆ.

ಫೆ.7ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಹೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಡಾ.ಬಿ.ಎಂ. ಹೆಗ್ಡೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಟ್ರಸ್ಟ್‌ನ ಗೌರವ ಅಧ್ಯಕ್ಷರಾದ ಬಿ. ರಮಾನಾಥ ರೈ, ಗೌರವ ಸಲಹೆಗಾರರಾದ ನಳೀನ್ ಕುಮಾರ್ ಕಟೀಲ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 6.30ರಿಂದ 8.30ರವರೆಗೆ 'ಯಂಗ್ ಬಂಟ್ಸ್ ಕಪ್‍ಲ್ - 2016' ಯುವ ಬಂಟ ಜೋಡಿ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸುವ ಎಲ್ಲರಿಗೂ ಫೆಬ್ರವರಿ 6 ಮತ್ತು 7ರಂದು ಬಂಟ ಸಂಪ್ರದಾಯಿಕ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್‌ನ ಛೇರ್‍ಮೆನ್ ಎ. ಸದಾನಂದ ಶೆಟ್ಟಿ, ಗೌರವ ಅಧ್ಯಕ್ಷರಾದ ಬಿ. ರಮಾನಾಥ ರೈ, ಗೌರವ ಸಲಹೆಗಾರರಾದ ನಳೀನ್ ಕುಮಾರ್ ಕಟೀಲ್ ಹಾಗೂ ಕಾರ್ಯಾಧ್ಯಕ್ಷರಾದ ಕೆ. ಅಮರನಾಥ ಶೆಟ್ಟಿ ಅವರು ಎರಡೂ ದಿನದ ಕಾರ್ಯಕ್ರಮಗಳ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

English summary
Rashtreeya bunts maha samelana organised on February 6 and 7, 2016 at Townhall, Mangaluru. Sammlena will be inaugurated on February 6, at 4 pm said, Sadananda Shetty Chairman of National Bunts Welfare Trust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X