ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆದ್ರಕಾಡು ಪ್ರದೇಶಕ್ಕೆ ಬಂದ ವಿಚಿತ್ರ ಬಣ್ಣದ ಹಾವು ಕಂಡು ಬೆದರಿದ ಜನ

|
Google Oneindia Kannada News

Recommended Video

ದಕ್ಷಿಣ ಕನ್ನಡದ ಬೆದ್ರಕಾಡು ಪ್ರದೇಶದಲ್ಲಿ ವಿಚಿತ್ರ ಬಣ್ಣದ ಹಾವು ಪತ್ತೆ | Oneindia Kannada

ಮಂಗಳೂರು, ಅಕ್ಟೋಬರ್.29 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಚಿತ್ರ ಬಣ್ಣದ ಹಾವೊಂದು ಪತ್ತೆಯಾಗಿದೆ. ಇದೀಗ ಈ ಹಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿದೆ. ಈ ಹಾವು ನೋಡಲು ಭಾರೀ ವಿಷಪೂರಿತ ಹಾವು ಕೊಲಂಬಿಯಾ ಕಿಂಗ್ ಸ್ನೇಕ್ ನಂತೆ ಕಾಣುತ್ತಿದ್ದು, ಅದರ ಬಣ್ಣ, ಆಕಾರ, ವಿಚಿತ್ರವಾಗಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.

ಆಶೀರ್ವಾದ ಪಡೆಯಲು ಹಾವಿನ ಹೆಡೆಯ ಮೇಲೆ ಕಂದಮ್ಮ: ಮುಂದೇನಾಯ್ತು?ಆಶೀರ್ವಾದ ಪಡೆಯಲು ಹಾವಿನ ಹೆಡೆಯ ಮೇಲೆ ಕಂದಮ್ಮ: ಮುಂದೇನಾಯ್ತು?

ಈ ಅಪರೂಪದ ಹಾವು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಬೆದ್ರಕಾಡು ಪ್ರದೇಶದ ನಿವಾಸಿ ಓಡಿಯಪ್ಪ ಗೌಡ ಅವರ ಮನೆಯಲ್ಲಿ ಕಂಡುಬಂದಿದೆ. ಬಿಳಿ ಹಾಗೂ ಕಪ್ಪು ಮೈಬಣ್ಣವನ್ನು ಹೊಂದಿರುವ ಈ ಹಾವು 6 ಅಡಿ ಉದ್ದವಿದೆ.

 ವೈರಲ್ ವಿಡಿಯೋ: ಮೀಟಿಂಗ್ ನಡೆವಾಗ ಬಿತ್ತು ಐದಡಿ ಉದ್ದದ ಹಾವು! ವೈರಲ್ ವಿಡಿಯೋ: ಮೀಟಿಂಗ್ ನಡೆವಾಗ ಬಿತ್ತು ಐದಡಿ ಉದ್ದದ ಹಾವು!

ಈ ಪ್ರದೇಶದಲ್ಲಿ ಹಾವುಗಳ ಸಂಚಾರ ಸಾಮಾನ್ಯ . ಇಲ್ಲಿ ನಾಗರ ಹಾವು , ಬೃಹತ್ ಕಾಳಿಂಗ ಸರ್ಪ, ಬೃಹತ್ ಗಾತ್ರದ ಹೆಬ್ಬಾವುಗಳನ್ನು ಕಂಡಿರುವ ಸ್ಥಳೀಯ ಜನರು ಸಂಚರಿಸುವಾಗಲೇ ಬುಸುಗುಡುವ ಈ ಹಾವು ಕಂಡು ಚಕಿತಗೊಂಡಿದ್ದಾರೆ.

Rare species of snake captured in Dakshina Kannada

ಇದು ಇಲ್ಲಿದ್ದರೆ ತೊಂದರೆ ಎಂದು ಮನಗಂಡ ಓಡಿಯಪ್ಪ ಗೌಡ ಅವರು ತಕ್ಷಣ ಸ್ಥಳೀಯ ಉರಗತಜ್ಞ ಲಿಂಗಪ್ಪ ಮಾಚಾರು ಅವರಿಗೆ ಕರೆ ಮಾಡಿದ್ದಾರೆ.

 ಮೈಜುಮ್ಮೆನಿಸ್ಸುವ ಎರಡು ತಲೆಯ ಹಾವು: ವೈರಲ್ ವಿಡಿಯೋ ಮೈಜುಮ್ಮೆನಿಸ್ಸುವ ಎರಡು ತಲೆಯ ಹಾವು: ವೈರಲ್ ವಿಡಿಯೋ

ಸ್ಥಳಕ್ಕೆ ಆಗಮಿಸಿದ ಲಿಂಗಪ್ಪ ಮಾಚಾರ ಈ ಅಪರೂಪದ ಹಾವಿನ ಆಕಾರ, ಬಣ್ಣ ಕಂಡು ಒಂದೊಮ್ಮೆ ಚಕಿತಗೊಂಡರು. ತಮ್ಮ ಜೀವಮಾನದಲ್ಲಿ ಇಂತಹ ಬಣ್ಣದ ಹಾವನ್ನು ಕಂಡಿಲ್ಲ ಎಂದ ಲಿಂಗಪ್ಪ ಮಾಚಾರ ಅತ್ಯಂತ ಚಾಕಚಕ್ಯತೆಯಿಂದ ಹಾವನ್ನು ಹಿಡಿಯುವಲ್ಲಿ ಸಫಲರಾದರು.

Rare species of snake captured in Dakshina Kannada

ಹಾವನ್ನು ಸುರಕ್ಷಿತವಾಗಿ ಹಿಡಿದ ಲಿಂಗಪ್ಪ ಮಾಚಾರು ನಂತರ ಅದನ್ನು ಮಂಗಳೂರಿನ ಪಿಲಿಕುಲ ನಿಸರ್ಗಧಾಮಕ್ಕೆ ನೀಡಿದ್ದಾರೆ. ಸೆರೆಯಾಗಿರುವ ಹಾವಿನ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.

English summary
Very rare species of snake captured in Bedrakadu village of Belthangady in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X