ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಷಾರ್, ಮಫ್ತಿಯಲ್ಲಿ ಕಾರ್ಯಾಚರಣೆಗೆ ಬರಲಿದ್ದಾಳೆ 'ಅಬ್ಬಕ್ಕ'!

|
Google Oneindia Kannada News

ಮಂಗಳೂರು ಮೇ 03: ದಾರಿಯಲ್ಲಿ ಮಹಿಳೆಯರನ್ನು ಚುಡಾಯಿಸುವ, ಕೀಟಲೆ ಮಾಡುವ, ಅಶ್ಲೀಲ ಕಮೆಂಟ್, ಅಸಭ್ಯ ವರ್ತನೆ ತೋರುವವರಿಗೆ ಮಂಗಳೂರಿನಲ್ಲಿ ಇನ್ನು ತಕ್ಕ ಶಾಸ್ತಿ ಆಗಲಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮಂಗಳೂರು ನಗರದಲ್ಲಿ ಇನ್ನು ರಾಣಿ ಅಬ್ಬಕ್ಕ ಮಹಿಳಾ ಗಸ್ತು ಪೊಲೀಸ್ ಪಡೆ ಕಾರ್ಯನಿರ್ವಹಿಸಲಿದೆ.

ರಾಣಿ ಅಬ್ಬಕ್ಕ ಪಡೆಯಲ್ಲಿರುವ ಮಹಿಳಾ ಪೊಲೀಸರು ಮಫ್ತಿಯಲ್ಲಿ ಶಾಲಾ-ಕಾಲೇಜು,ಜನದಟ್ಟಣೆ ಪ್ರದೇಶಗಳಲ್ಲಿ ಇರಲಿದ್ದಾರೆ. ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಗಸ್ತು ತಿರುಗಲಿದ್ದಾರೆ. ಮಹಿಳೆಯರನ್ನು ಚುಡಾಯಿಸುವ, ಕೀಟಲೆ ಮಾಡುವ, ಅಶ್ಲೀಲ ಕಮೆಂಟ್, ಅಸಭ್ಯ ವರ್ತನೆ ಮಾಡುವವರನ್ನು ಹಿಡಿದು ಕ್ರಮ ಕೈಗೊಳ್ಳಲಿದ್ದಾರೆ.

ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ : ಮಂಗಳೂರಿನಲ್ಲಿ ಹೈ ಅಲರ್ಟ್ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ : ಮಂಗಳೂರಿನಲ್ಲಿ ಹೈ ಅಲರ್ಟ್

ಗಸ್ತು ಪೊಲೀಸ್ ವಾಹನದಲ್ಲಿ ಪಿ ಎಸ್ ಐ ಸಹಿತ ಮೂವರು ಸಿಬ್ಬಂದಿ ಇರಲಿದ್ದು ,ಇದರಲ್ಲಿ ಓರ್ವ ಪುರುಷ ಸಿಬ್ಬಂದಿಯೂ ಇರಲಿದ್ದಾರೆ.

Rani Abbaka police force launched in Mangaluru

ಬೆಳಗಾವಿ ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆ, ಚಿತ್ರದುರ್ಗದ ಓಬವ್ವ ಪಡೆ ಮಾದರಿಯಲ್ಲಿ
ಮಂಗಳೂರಿನಲ್ಲಿ ಅಬ್ಬಕ್ಕ ಪಡೆ ಕಾರ್ಯಾಚರಣೆಗಿಳಿದಿದೆ. ಇತ್ತೀಚೆಗೆ ಉಡುಪಿಯಲ್ಲಿ ಅಬ್ಬಕ್ಕ ಪಡೆಗೆ ಚಾಲನೆ ನೀಡಲಾಗಿತ್ತು. ಎರಡು ವರ್ಷಗಳ ಹಿಂದೆ ಮಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಚಂದ್ರಶೇಖರ್ ಅಬ್ಬಕ್ಕ ಪಡೆ ಸ್ಥಾಪನೆ ಬಗ್ಗೆ ಚಿಂತನೆ ನಡೆಸಿದ್ದರು.

Rani Abbaka police force launched in Mangaluru

ಮಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ, ಲಕ್ಷಾಂತರ ರೂ.ನಗದು ವಶಮಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ, ಲಕ್ಷಾಂತರ ರೂ.ನಗದು ವಶ

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮುಂದಾಗಿರುವ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ರಾಣಿ ಅಬ್ಬಕ್ಕ ಪಡೆಗೆ ಚಾಲನೆ ನೀಡಿದರು.

English summary
To protect women and childerns Mangaluru police commissioner Sandeep Patil flagged off Rani Abbakka women police force in Mangaluru .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X