ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ರಂಗಕರ್ಮಿ ಅಕ್ಷರರಿಗೆ ಪ್ರತಿಷ್ಠಿತ ' ರಂಗಮನೆ ಪ್ರಶಸ್ತಿ'

|
Google Oneindia Kannada News

ಮಂಗಳೂರು, ಜನವರಿ 27 : ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ವತಿಯಿಂದ ನೀಡಲಾಗುವ '2017 ರಂಗಮನೆ ಪ್ರಶಸ್ತಿ' ಗೆ ಪ್ರಸಿದ್ಧ ರಂಗಶಿಕ್ಷಕ, ನಾಟಕಕಾರ ಹಾಗೂ ಪ್ರಕಾಶಕರಾದ ಕೆ.ವಿ. ಅಕ್ಷರರವರನ್ನು ಆಯ್ಕೆ ಮಾಡಲಾಗಿದೆ.

ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಕೆ.ವಿ.ಸುಬ್ಬಣ್ಣರವರ ಪುತ್ರರಾದ ಅಕ್ಷರರವರು ದೆಹಲಿಯ ರಾಷ್ಟ್ರೀಯ ನಾಟಕಶಾಲೆ ಪದವಿ ಹಾಗೂ ಅಮೇರಿಕಾದ ಲೀಡ್ಸ್ ವಿಶ್ವವಿದ್ಯಾಲಯದ ರಂಗಶಾಲೆಯಿಂದ ಸ್ನಾತಕೋತ್ತರ ಎಂ.ಎ.ಪದವಿಯನ್ನು ಪಡೆದಿದ್ದಾರೆ.

Ranga mane award for theater personality Akshara

ನೀನಾಸಂ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಕರಾಗಿ, ನಿರ್ದೇಶಕರಾಗಿ, ನೂರಾರು ರಂಗಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸಿರುವ ಅವರು, ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನ 'ಅಕ್ಷರ ಪ್ರಕಾಶನದ' ಮೂಲಕ ಅನೇಕ ಅಮೂಲ್ಯ ಪುಸ್ತಕಗಳನ್ನು ಹೊರತಂದವರು. ಸ್ವತಃ ನಾಟಕಕಾರರಾಗಿ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಸ್ಕ್ರತಿ ಹಾಗೂ ಅನುವಾದಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದವರು.

ನೀನಾಸಂ ಬಳಗ, ನೀನಾಸಂ ತಿರುಗಾಟ ಮುಂತಾದ ತಂಡಕ್ಕೆ ಸ್ಮಶಾನ ಕುರುಕ್ಷೇತ್ರ, ಅಹಲ್ಯಾ, ನೀಲಿಕುದುರೆ, ಕಿರಗೂರಿನ ಗಯ್ಯಾಳಿಗಳು, ತುಘಲಕ್, ಸಂಗ್ಯಾಬಾಳ್ಯಾ, ಸ್ವಪ್ನನಾಟಕ ಮುಂತಾಗಿ 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ಕನ್ನಡ ರಂಗಭೂಮಿಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.

ಇವರ 3 ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ನಾಟಕ ಅಕಾಡಮಿ ಫೆಲೋಶಿಪ್ ಗೌರವ, ವಿ.ಎಂ.ಇನಾಂದರ್ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನಗಳು ಇವರಿಗೆ ದೊರಕಿವೆ.

ಇದೀಗ ಫೆಬ್ರವರಿ 3, 4, 5 ರಂದು ಸುಳ್ಯದ ರಂಗಮನೆಯಲ್ಲಿ ನಡೆಯುವ ರಂಗಸಂಭ್ರಮ ಹಾಗೂ 2017ರ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದ ಸಮಾರೋಪದಲ್ಲಿ ಕೆ.ವಿ.ಅಕ್ಷರರವರಿಗೆ 'ರಂಗಮನೆ ಪ್ರಶಸ್ತಿ' ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಹತ್ತು ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

English summary
Renouned theater personality of Sulya, KV Akshara has been given 'Ranga Mane' award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X