• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಏಪ್ರಿಲ್ 13; ಕರಾವಳಿಯಲ್ಲಿ ಇಂದಿನಿಂದ ರಂಜಾನ್ ಉಪವಾಸ ಆಚರಣೆ ಆರಂಭವಾಗಿದೆ. ಈ ವರ್ಷದ ಪವಿತ್ರ ರಂಜಾನ್ ಆಚರಣೆಗೆ ಚಂದ್ರದರ್ಶನವಾದ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿ ಮುಸ್ಲಿಮರು ಇಂದಿನಿಂದ ಉಪವಾಸ ಆಚರಣೆ ಮಾಡಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಆಲ್ ಹಾಜ್ ಅಹ್ಮದ್ ಮುಸ್ಲಿಯಾರ್ ಈ ಕುರಿತು ಘೋಷಣೆ ಮಾಡಿದ್ದಾರೆ. ಕೇರಳದ ಕ್ಯಾಲಿಕಟ್‌ನಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಉಪವಾಸ ಆರಂಭಿಸಲು ಸೂಚನೆ ನೀಡಲಾಗಿದೆ.

 ರಂಜಾನ್ ಮತ್ತು ಪಪ್ಪಾಯ; ಪಪ್ಪಾಯ ಬೆಳೆಗಾರರಿಗೆ ಕೆಲವು ಉಪಯುಕ್ತ ಟಿಪ್ಸ್ ರಂಜಾನ್ ಮತ್ತು ಪಪ್ಪಾಯ; ಪಪ್ಪಾಯ ಬೆಳೆಗಾರರಿಗೆ ಕೆಲವು ಉಪಯುಕ್ತ ಟಿಪ್ಸ್

ಮಂಗಳವಾರದಿಂದ ಮೂವತ್ತು ದಿನಗಳ ಉಪವಾಸ ವೃತಾಚರಣೆಯನ್ನು ಮುಸ್ಲಿಮರು ಆಚರಿಸಲಿದ್ದಾರೆ. ಪಾಪ ವಿಮೋಚನೆಯ ಈ ತಿಂಗಳು ಬಹಳ ಪವಿತ್ರವಾದವುದು ಎಂಬುವುದು ಮುಸ್ಲಿಂ ಬಾಂಧವರ ನಂಬಿಕೆಯಾಗಿದೆ.

ರಂಜಾನ್ ಪ್ರಾರ್ಥನೆ ಕುರಿತು ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ ಸರ್ಕಾರರಂಜಾನ್ ಪ್ರಾರ್ಥನೆ ಕುರಿತು ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ ಸರ್ಕಾರ

ಹಸಿವಿನ ಮಹತ್ವದೊಂದಿಗೆ ದಾನ, ಧರ್ಮ ಮತ್ತು ದೇವರ ಆರಾಧನೆಗೆ ಆದ್ಯತೆ ಮಾತ್ರವಲ್ಲದೆ ಹೆಚ್ಚಾಗಿ ಆಧ್ಯಾತ್ಮದ ನೆನಪಿಗಾಗಿ ಈ 30 ದಿನಗಳ ಕಠಿಣ ಉಪವಾಸವನ್ನು ಮುಸ್ಲಿಮರು ಮಾಡಲಿದ್ದಾರೆ.

ಪವಿತ್ರ ರಂಜಾನ್ ತಿಂಗಳಿನಲ್ಲೂ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಪವಿತ್ರ ರಂಜಾನ್ ತಿಂಗಳಿನಲ್ಲೂ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ

ಒಂದು ತಿಂಗಳ ಬಳಿಕ ಮತ್ತೆ ಚಂದ್ರ ದರ್ಶನವಾದ ಸಂದರ್ಭದಲ್ಲಿ ರಂಜಾನ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಕೇರಳ ಭಾಗದಿಂದ ಮಂಗಳೂರು, ಉಡುಪಿ, ಭಟ್ಕಳ ತನಕವೂ ಈ ವೃತಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ.

English summary
Dakshina Kannada district Khazi Al Haj Ahmed Musliyar said that ramzan fasting in Karavali from April 13, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X