• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ; ಪೊಲೀಸರ ಮೇಲೆ ರೇಗಾಡಿದ ರಮಾನಾಥ್ ರೈ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಏಪ್ರಿಲ್ 11; ಮಂಗಳೂರಿನಲ್ಲಿ ಕೊರೊನಾ ಕರ್ಫ್ಯೂ ಸಮಯದಲ್ಲಿ ಪೊಲೀಸರ ಮೇಲೆ ಮಾಜಿ ಸಚಿವ ಬಿ. ರಮಾನಾಥ ರೈ ರೇಗಾಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಶನಿವಾರ ರಾತ್ರಿಯಿಂದ ಕರ್ಫ್ಯೂ ಜಾರಿಯಲ್ಲಿದೆ.

ಮಂಗಳೂರು ನಗರದ ಹೊರವಲಯದ ಪಡೀಲ್‌ನಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಮಾಜಿ ಸಚಿವ ರಮಾನಾಥ್ ರೈ ಪೊಲೀಸರ ವಿರುದ್ಧ ರೇಗಾಡಿದರು.

ದೇಶದಲ್ಲಿ ಇಂದಿನಿಂದ ಲಸಿಕಾ ಉತ್ಸವ; ಅರ್ಹರಿಗೆ ಕೋವಿಡ್ ಲಸಿಕೆ ದೇಶದಲ್ಲಿ ಇಂದಿನಿಂದ ಲಸಿಕಾ ಉತ್ಸವ; ಅರ್ಹರಿಗೆ ಕೋವಿಡ್ ಲಸಿಕೆ

ರಸ್ತೆಯಲ್ಲಿ ಕಿಲೊಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದಾಗಿ ಸಿಟ್ಟಿಗೆದ್ದ ರಮಾನಾಥ್ ರೈ ಕಾರಿನಿಂದ ಇಳಿದು ನೇರ ಬ್ಯಾರಿಕೇಡ್ ಹಾಕಿದ ಪೊಲೀಸರ ಬಳಿ ತೆರಳಿದರು. ಪೊಲೀಸರಿಗೆ ಬೈದ ಅವರು, ಸರ್ಕಾರದ ನಿರ್ಧಾರದ ಬಗ್ಗೆ ರೇಗಾಡಿದ್ದಾರೆ.

ಮಂಗಳೂರಿನಲ್ಲಿ ರಾತ್ರಿ ಕರ್ಫ್ಯೂ: ರಸ್ತೆಗೆ ಬಂದ್ರೆ ವಾಹನ ಜಪ್ತಿ; ಪೊಲೀಸ್ ಆಯುಕ್ತ ಮಂಗಳೂರಿನಲ್ಲಿ ರಾತ್ರಿ ಕರ್ಫ್ಯೂ: ರಸ್ತೆಗೆ ಬಂದ್ರೆ ವಾಹನ ಜಪ್ತಿ; ಪೊಲೀಸ್ ಆಯುಕ್ತ

ಪೊಲೀಸರಿಂದ ಬ್ಯಾರಿಕೇಡ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಆರಂಭಿಸಲು ಸೂಚನೆ ನೀಡಿದ್ದಾರೆ. ರಮಾನಾಥ್ ರೈ ವರ್ತನೆ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮಾರ್ಗಸೂಚಿ ಪ್ರಕಟ,ಯಾವುದಕ್ಕೆ ಅನುಮತಿ? ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ; ಮಾರ್ಗಸೂಚಿ ಪ್ರಕಟ,ಯಾವುದಕ್ಕೆ ಅನುಮತಿ?

ಕರ್ಫ್ಯೂ ಇದ್ದರೂ ಮಾಜಿ ಸಚಿವರು ಸರ್ಕಾರದ ಆದೇಶ ಉಲ್ಲಂಘಿಸಿ ರಾತ್ರಿ ತಿರುಗಾಡಿದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಸಚಿವರು ಕನಿಷ್ಠ ಮಾಸ್ಕ್ ಸಹ ಧರಿಸದೇ ಪೊಲೀಸರಿಗೆ ಧಮ್ಕಿ‌ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

English summary
Former minister and Congress leader upset with police during the corona curfew in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X