• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿ. ಟಿ. ರವಿ ಕುಲ, ಗೋತ್ರ ಇಲ್ಲದ ಮನುಷ್ಯ; ರಮಾನಾಥ್ ರೈ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಏಪ್ರಿಲ್ 19; " ಸಿ. ಟಿ. ರವಿ ಒಬ್ಬ ಕುಲ, ಗೋತ್ರ ಇಲ್ಲದ ಮನುಷ್ಯ. ತನ್ನ ಕುಲ ಗೋತ್ರ ಯಾವುದು ಅಂತಾ ಅವನಿಗೆ ಗೊತ್ತಿಲ್ಲ. ಸಿ. ಟಿ. ರವಿ ಮಾತಿಗೆ ಅಷ್ಟು ಮಹತ್ವ ಇಲ್ಲ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಮಾನಾಥ್ ರೈ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಿ. ಟಿ. ರವಿ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

ಸಾರಿಗೆ ನೌಕರರ ಮುಷ್ಕರದಲ್ಲಿ ರಾಜಕೀಯ ಆಟ: ಸಿ.ಟಿ ರವಿಸಾರಿಗೆ ನೌಕರರ ಮುಷ್ಕರದಲ್ಲಿ ರಾಜಕೀಯ ಆಟ: ಸಿ.ಟಿ ರವಿ

ಸಿ. ಟಿ. ರವಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಿರುದ್ಧ ಟೀಕೆಯನ್ನು ನಡೆಸಿದ್ದರು. " ಸಿ. ಟಿ. ರವಿ ಯಾವುದೋ ಪ್ರಚೋದನೆ ಮಾಡಿ, ರಾಜಕಾರಣ ಮಾಡಿಕೊಂಡು ಯಾವುದೋ ಸ್ಥಾನ ಮಾನಕ್ಕೆ ಬಂದಿರಬಹುದು. ಜನಸೇವೆ ಮಾಡಿ ಅವರು ಸ್ಥಾನ ಮಾನಕ್ಕೆ ಬಂದವರಲ್ಲ" ಎಂದು ಆರೋಪಿಸಿದರು.

'ಉತ್ತರಾಧಿಕಾರಿ ಪರಂಪರೆ': ರವಿ ಹೇಳಿಕೆ ಹಿಂದಿನ ಟಾರ್ಗೆಟ್ ಬಿಎಸ್ವೈ?'ಉತ್ತರಾಧಿಕಾರಿ ಪರಂಪರೆ': ರವಿ ಹೇಳಿಕೆ ಹಿಂದಿನ ಟಾರ್ಗೆಟ್ ಬಿಎಸ್ವೈ?

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ರಮಾನಾಥ್ ರೈ, "ಒಬ್ಬರು ಕಾಂಗ್ರೆಸ್ ಮುಳುಗುವ ಹಡಗು ಅಂತಾ ಹೇಳುತ್ತಾರೆ. ಆದರೆ ಹಾಗೆ ಹೇಳಿರುವವರ ಅಜ್ಜ-ಪಿಜ್ಜನು ಕೂಡಾ ಕಾಂಗ್ರೆಸ್ ನಲ್ಲಿ ಇದ್ದಿರಬಹುದು. ಇವರ ಅಜ್ಜ-ಪಿಜ್ಜ ಕೂಡಾ ಕಾಂಗ್ರೆಸ್ ಹಡಗಿನಲ್ಲಿಯೇ ಕೂತು ಬಂದಿರಬಹುದು" ಎಂದರು.

ಟಿಪ್ಪು ಜಯಂತಿ: ಸಿ.ಟಿ. ರವಿ, ಅನಂತಕುಮಾರ್ ಹೆಗಡೆಗೆ ಸಂಕಷ್ಟಟಿಪ್ಪು ಜಯಂತಿ: ಸಿ.ಟಿ. ರವಿ, ಅನಂತಕುಮಾರ್ ಹೆಗಡೆಗೆ ಸಂಕಷ್ಟ

"ನಮ್ಮ ಪಕ್ಷದ ಬಗ್ಗೆ ಚಿಂತೆ ಮಾಡೋದು ಬೇಡ. ನಮ್ಮ ಹಡಗಿನಲ್ಲಿ ನೀರು ತುಂಬಿದೆ. ನಮ್ಮ ಮನೆ ಹೇಗಿರಬೇಕೆಂದು ಎನ್ನೋದು ನಮಗೆ ಬಿಟ್ಟಿರೋದು. ಉಳಿದವರು ಚಿಂತೆ ಮಾಡುವ ಅವಶ್ಯಕತೆ ಇಲ್ಲ" ಅಂತಾ ರಮಾನಾಥ್ ರೈ ವಾಗ್ದಾಳಿ ನಡೆಸಿದರು.

"ಸರ್ಕಾರ ಕೊರೊನಾ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಕೇವಲ ಬಾಯಿ ಮಾತಿನ ಉಪಚಾರದಿಂದ ಕೊರೊನಾ‌ ನಿಯಂತ್ರಣ ಆಗಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ಎಡವಿದ್ದಾರೆ" ಎಂದು ಆರೋಪಿಸಿದರು.

English summary
Former minister and Congress leader Ramanath Rai verbal attack on Bharatiya Janata Party national general secretary C. T. Ravi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X