ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2024 ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ

|
Google Oneindia Kannada News

ಮಂಗಳೂರು, ಮೇ20: "ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಿರಂತರವಾಗಿ ಸಾಗುತ್ತಿದೆ. 2024ರ ಜನವರಿಯಲ್ಲಿ ಉತ್ತಾರಾಯಣ ಆರಂಭದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಕರ್ನಾಟಕದಿಂದ ರವಾನಿಸಿದ ಶಿಲೆಗಳಿಂದ ಅಡಿಪಾಯ ರಚನೆಯಾಗುತ್ತಿದೆ" ಎಂದು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಮಂಗಳೂರಿನ ಉರ್ವಾ ಲೋಕಾಯುಕ್ತ ಕಚೇರಿ ಬಳಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಗಮದ ನೂತನ ಪ್ರಧಾನ ಕಚೇರಿ 'ಮತ್ಸ್ಯ ಸಂಪದ' ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಜೂ.1ಕ್ಕೆ ಗರ್ಭಗುಡಿಯ ಶಿಲಾನ್ಯಾಸ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿದ್ದೇನೆ. ಅದಕ್ಕೆ ಬೇಕಾದ ಪೂರ್ವಭಾವಿ ಕಾರ್ಯಗಳೆಲ್ಲ ನಿಗದಿತ ಕಾಲದಲ್ಲಿಯೇ ನಡೆಯುತ್ತಿದೆ" ಎಂದರು.

pejawar shree

ಸಂತಸ ತಂದಿದೆ; ವಾರಣಾಸಿಯ ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆ ವಿಚಾರವಾಗಿ ಮಾತನಾಡಿದ ಪೇಜಾವರ ಶ್ರೀಗಳು, "ಶಿವಲಿಂಗ ಪತ್ತೆಯಾಗಿರುವ ವಿಚಾರ ಸಂತಸ ತಂದಿದೆ. ಇಲ್ಲಿಯವರೆಗೆ ಇದ್ದ ನಂಬಿಕೆ, ಪುರಾಣದಲ್ಲಿ ಇದ್ದ ಮಾಹಿತಿ ಸತ್ಯವಾಗಿದೆ. ಇದಷ್ಟೇ ಅಲ್ಲದೆ, ಇಂತಹ ಎಲ್ಲಿಯೇ ಇದ್ದರೂ ಬೆಳಕಿಗೆ ಬರಬೇಕಿದೆ. ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಬೇಕಿದೆ" ಎಂದರು.

"ಇಲ್ಲಿ ತನಕ ಇದ್ದ ನಂಬುಗೆ, ಪುರಾಣದಲ್ಲಿ ಇದ್ದ ಮಾಹಿತಿ ಸತ್ಯವಾಗಿದೆ. ಇದು ಮಾತ್ರ ಅಲ್ಲದೆ, ಇಂತಹದು ಎಲ್ಲಿಯೇ ಇದ್ದರೂ ಬೆಳಕಿಗೆ ಬರಬೇಕಿದೆ. ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಬೇಕಿದೆ. ನ್ಯಾಯಾಲಯದ ಮೂಲಕ ವಿಚಾರಣೆ ನಡೆಯುತ್ತಿರುವ ಈ ವಿಚಾರದಲ್ಲಿ ಯಾರೂ ಸಂಘರ್ಷಕ್ಕಿಳಿಯಬಾರದು" ಎಂದು ಕರೆ ನೀಡಿದರು.

English summary
Construction of Ram mandir at Ayodhya will complete in 2023. Temple will open on Uttarayana in January 2024 said Pejawar seer Vishwaprasanna Theertha Swami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X