ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಮತ್ತೆ ಆರಂಭ

|
Google Oneindia Kannada News

ಮಂಗಳೂರು, ಡಿಸೆಂಬರ್ 03: ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಸೇವೆ ಪುನಃ ಆರಂಭವಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಕರಾವಳಿ ಭಾಗದ ಪ್ರಯಾಣಿಕರಿಗೆ ತೊಂದರೆ ಉಂಟಾಗಿತ್ತು.

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ಕುರಿತು ಮಾಹಿತಿ ನೀಡಿದ್ದಾರೆ. "ವಾರದಲ್ಲಿ ನಾಲ್ಕು ದಿನಗಳ ಕಾಲ ರೈಲು ಸಂಚಾರ ನಡೆಸಲಿದ್ದು, ಜನರು ಇದರ ಉಪಯೋಗ ಪಡೆದುಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.

ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ರೈಲು ವೇಳಾಪಟ್ಟಿ ಬದಲು ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ರೈಲು ವೇಳಾಪಟ್ಟಿ ಬದಲು

ಸಂಸದರು ಕೇಂದ್ರ ರೈಲ್ವೆ ಸಚಿವರು, ರೈಲ್ವೆ ಇಲಾಖೆಯ ಜೊತೆ ಮಾತುಕತೆ ನಡೆಸಿದ್ದು, ರೈಲು ಸಂಚಾರವನ್ನು ಪುನಃ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ರೈಲು ಸಂಚಾರ ಆರಂಭದ ದಿನಾಂಕ ಅಂತಿಮಗೊಳ್ಳಬೇಕಿದೆ.

ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ

 Railways To Resume Bengaluru Mangaluru Train Via Shravanabelagola

ರಾಜಧಾನಿ ಬೆಂಗಳೂರಿನಿಂದ ಹೊರಡುವ ರೈಲು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮೂಲಕ ಮಂಗಳೂರನ್ನು ತಲುಪಲಿದೆ. ಈ ರೈಲಿನಿಂದಾಗಿ ಕರಾವಳಿ ಮತ್ತು ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.

ಯಶವಂತಪುರ-ಪ್ರಯಾಗ್ ರಾಜ್ ಹಬ್ಬದ ವಿಶೇಷ ರೈಲು, ವೇಳಾಪಟ್ಟಿ ಯಶವಂತಪುರ-ಪ್ರಯಾಗ್ ರಾಜ್ ಹಬ್ಬದ ವಿಶೇಷ ರೈಲು, ವೇಳಾಪಟ್ಟಿ

ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಭಾರತೀಯ ರೈಲ್ವೆ ಎಲ್ಲಾ ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಮೇ ತಿಂಗಳ ಬಳಿಕ ಹೆಚ್ಚು ಬೇಡಿಕೆ ಇರುವ ಮಾರ್ಗದಲ್ಲಿ ಮಾತ್ರ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

Recommended Video

Burevi ಚಂಡಮಾರುತ ಕೇರಳ ಪ್ರವೇಶಿಸಿದ್ದಕ್ಕೆ , ನಮ್ಮ ರಾಜ್ಯದಲ್ಲಿ ಮಳೆ | Oneindia Kannada

ದೀಪಾವಳಿ ಮತ್ತು ದಸರಾ ಅಂಗವಾಗಿ ಹಲವು ಹಬ್ಬದ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ. ಈ ರೈಲುಗಳ ಸೇವೆಯನ್ನು ಡಿಸೆಂಬರ್ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಸಾಮಾನ್ಯ ರೈಲುಗಳ ಸಂಚಾರ ಯಾವಾಗ ಆರಂಭವಾಗಲಿದೆ ಎಂಬುದು ಅಂತಿಮವಾಗಿಲ್ಲ.

English summary
Indian railways will resume Bengaluru-Mangaluru train via Shravanabelagola soon. Train service stopped after announcement of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X