• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ಆರ್ ಎಎಫ್ ಘಟಕ ಸ್ಥಾಪನೆ: ಗಲಭೆಕೋರರಿಗೆ ನಡುಕ ಶುರು

|

ಮಂಗಳೂರು, ಅಕ್ಟೋಬರ್. 09: ಕೋಮು ಘರ್ಷಣೆ, ಗಲಭೆಗಳಿಂದ ದೇಶದಲ್ಲಿ ಕುಖ್ಯಾತಿ ಗಳಿಸಿರುವ ಮಂಗಳೂರಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಆರ್‌ ಎಎಫ್ ತುಕಡಿಯನ್ನು ಖಾಯಂ ಆಗಿ ನಿಯೋಜನೆಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ದೇಶದಲ್ಲಿರುವ ಒಟ್ಟು 10 ಆರ್‌ಎಎಫ್ ತುಕಡಿಗಳನ್ನು ಕೇಂದ್ರವಾಗಿರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗ ಮತ್ತೆ 5 ಹೊಸ ಬೆಟಾಲಿಯನ್ ಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕಳೆದ ಜನವರಿಯಲ್ಲೇ 5 ಆರ್‌ಎಎಫ್ ಘಟಕವನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಈಗ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ.

ಉತ್ತರಪ್ರದೇಶದ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರ ಹಾಜಿಪುರ ಹರಿಯಾಣದ ನುಹ್ ಸೇರಿದಂತೆ ಕರ್ನಾಟಕದ ಮಂಗಳೂರಿನಲ್ಲಿ ಹೊಸ ಆರ್‌ಎಎಫ್ ಘಟಕ ಪ್ರಾರಂಭಿಸಲು ಕೇಂದ್ರ ತೀರ್ಮಾನಿಸಿದೆ.

ಗಡಿ ನುಸುಳಲು ಯತ್ನಿಸಿದ ಮತ್ತೆ ಮೂವರು ಉಗ್ರರಿಗೆ ಸೇನೆ ಗುಂಡು

ಈಗಾಗಲೇ ದೇಶದ ಹೈದರಾಬಾದ್, ಅಹಮದಾಬಾದ್, ಅಲಹಾಬಾದ್, ಮುಂಬೈ, ದೆಹಲಿ, ಆಲಿಘರ್, ಕೊಯಮತ್ತೂರ್, ಜಮ್ಶೆಡ್ ಪುರ್, ಭೋಪಾಲ್ ಹಾಗೂ ಮೀರತ್ ನಲ್ಲಿ ಆರ್‌ಎಎಫ್ ಪಡೆ ಕಾರ್ಯಾಚರಣೆ ನಡೆಸುತ್ತಿವೆ.

ಕಠಿಣ ತರಬೇತಿ ಪಡೆದ ಯೋಧರು

ಕಠಿಣ ತರಬೇತಿ ಪಡೆದ ಯೋಧರು

ದೇಶದಲ್ಲಿ ಎಲ್ಲೇ ಗಲಭೆ, ಕೋಮು ಘರ್ಷಣೆಯಾದರೂ ಆರ್ ಎಎಫ್ ಪಡೆಯ ಸಿಬ್ಬಂದಿಗಳು ಈ ಕೇಂದ್ರಗಳಿಂದಲೇ ನಿಗದಿತ ಸ್ಥಳಕ್ಕೆ ತಲುಪ ಬೇಕಾಗಿತ್ತು. ಪ್ರತಿ ಆರ್ ಎಎಫ್ ಘಟಕದಲ್ಲಿ 1 ಸಾವಿರ ಆರ್ ಎಎಫ್ ನ ಅತ್ಯಂತ ಕಠಿಣ ತರಬೇತಿ ಪಡೆದ ಯೋಧರಿರುತ್ತಾರೆ .

ಗಡಿಯಲ್ಲಿ ಸ್ವಚ್ಛತೆ ಮಾಡುತ್ತಿದ್ದ ಸೈನಿಕರ ಮೇಲೆ ಗುಂಡು ಹಾರಿಸಿದ ಪಾಕ್

ಆರ್ ಎಎಫ್ ಘಟಕಗಳು ಆರಂಭ

ಆರ್ ಎಎಫ್ ಘಟಕಗಳು ಆರಂಭ

ಇವರ ಬಳಿ ಗಲಭೆ ನಿಯಂತ್ರಣಕ್ಕೆ ಬಳಸಲಾಗುವ ಪಂಪ್ ಆಕ್ಷನ್ ಗನ್, ಟಿಯರ್ ಗ್ಯಾಸ್ ಶೆಲ್ ಸಿಡಿಸುವ ಗ್ರೆನೆಡ್ ಲಾಂಚರ್ ಸೇರಿದಂತೆ ಗಲಭೆ ನಿಯಂತ್ರಣಕ್ಕೆ ಬೇಕಾಗುವ ಎಲ್ಲಾ ಆಯುಧಗಳಿರುತ್ತವೆ .

ಆದರೆ ಈ ಪಡೆ ದೇಶದ ನಾನಾ ಭಾಗಗಳಿಗೆ ಸೂಕ್ತ ಸಮಯದಲ್ಲಿ ತಲುಪಲಾಗದ ಕಾರಣ ಗಲಭೆ ಪೀಡಿತ ಪ್ರದೇಶದಲ್ಲಿ ಸಾವು ನೋವು ಮತ್ತು ನಷ್ಟದ ಪ್ರಮಾಣ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡ ಕೇಂದ್ರ ಸರಕಾರ ಈಗ ಮತ್ತೆ ಹೆಚ್ಚುವರಿ 5 ನೂತನ ಆರ್ ಎ ಎಫ್ ಘಟಕ ಗಳನ್ನು ಆರಂಭಿಸಲು ನಿರ್ಧರಿಸಿದೆ.

ಪಾಕಿಸ್ತಾನ್ ಸೈನ್ಯಕ್ಕೆ ಇಮ್ರಾನ್ ಖಾನ್ ಮೇಲೆ ಯಾಕಿಷ್ಟು ಲವ್?

 ಸರ್ಕಾರಕ್ಕೆ ಪ್ರಸ್ತಾವನೆ

ಸರ್ಕಾರಕ್ಕೆ ಪ್ರಸ್ತಾವನೆ

ಮಂಗಳೂರಿನಲ್ಲಿ ನಿಯೋಜನೆಗೊಳ್ಳಲಿರುವ ಈ ನೂತನ ಆರ್ ಎಎಫ್ ಘಟಕಕ್ಕೆ ಎಲ್ಲಿ ಸ್ಥಳಾವಕಾಶ ನೀಡಲಾಗುವುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆರ್‌ಎಎಫ್ ಸ್ಥಾಪನೆ ಸಂಬಂಧ ಈ ಹಿಂದೆ ಮಂಗಳೂರು ಹೊರವಲಯದ ಬಜಪೆ ಮತ್ತು ಪಾವೂರಿನಲ್ಲಿ ಜಾಗ ಗುರುತಿಸಿ 2 ವರ್ಷದ ಹಿಂದೆ ಸರ್ಕಾರ ಪ್ರಸ್ತಾವನೆ ಕಳುಹಿಸಲಾಗಿದೆ.

 ಮಂಗಳೂರಿನಿಂದ ಶೀಘ್ರ ರವಾನೆ

ಮಂಗಳೂರಿನಿಂದ ಶೀಘ್ರ ರವಾನೆ

ಮಂಗಳೂರಿನಲ್ಲಿ ಆರ್ ಎ ಎಫ್ ಘಟಕ ಸ್ಥಾಪನೆಯ ವಿಚಾರ ಗಲಭೆ ಕೋರರಲ್ಲಿ ನಡುಕ ಹುಟ್ಟಿಸಿದೆ. ಮಂಗಳೂರು ಸೇರಿದಂತೆ ರಾಜ್ಯದ ಯಾವ ಮೂಲೆಯಲ್ಲೂ ಘರ್ಷಣೆ ಸಂಭವಿಸಿದರೂ ಈ ಪಡೆ ಮಂಗಳೂರಿನಿಂದ ಶೀಘ್ರವಾಗಿ ರವಾನೆಯಾಗಲಿದೆ.

English summary
Central government has decided to set up a rapid action force centered in five places in the country. Among these 5 place Managluru has been selected
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more