ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರಿನ ಯುವಕರ ಸ್ವಾವಲಂಬಿ ಬದುಕು; ಕೈ ಹಿಡಿದ ಹಳದಿ ಮೊಟ್ಟೆ ಉದ್ಯಮ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 18: ಕೊರೊನಾ ಲಾಕ್‌ಡೌನ್ ಹಲವು ಮಂದಿಯ ಉದ್ಯೋಗಕ್ಕೆ ಕತ್ತರಿ ಹಾಕಿದೆ. ಕೊರೊನಾ ಮೊದಲ ಅಲೆಯಲ್ಲಿ ಹಲವು ಮಂದಿ ಉದ್ಯೋಗ ಕಳೆದುಕೊಂಡರೆ ಎರಡನೇ ಅಲೆಯಲ್ಲಿ ಇನ್ನೂ ಹಲವರ ಉದ್ಯೋಗ ತೂಗುಗತ್ತಿಯಲ್ಲಿದೆ. ಕೊರೊನಾದ ಸಂಕಷ್ಟದ ಈ ಸಮಯದಲ್ಲಿ ಉದ್ಯೋಗ ಉಳಿಸಿಕೊಳ್ಳುವುದೇ ಉದ್ಯೋಗಿಗಳಿಗೆ ಚಾಲೆಂಜ್ ಆಗಿದೆ.

ಉದ್ಯೋಗವಿಲ್ಲದಿದ್ದರೆ ಜೀವನ ನಿರ್ವಹಣೆ ಹೇಗೆ ಎನ್ನುವ ಪ್ರಶ್ನೆಯೂ ಎಲ್ಲಾ ಉದ್ಯೋಗಿಗಳಲ್ಲಿದೆ. ಆದರೆ ಈ ಎಲ್ಲಾ ಜಂಜಾಟಗಳಿಂದ ಮುಕ್ತವಾಗಬೇಕಾದರೆ ಸ್ವಂತ ಉದ್ಯೋಗದಿಂದಲೇ ಸಾಧ್ಯ ಎನ್ನುವುದನ್ನು ಮನಗಂಡ ದಕ್ಷಿಣ ಕನ್ನಡದ ಯುವಕರಿಬ್ಬರು ಹಳದಿ ಮೊಟ್ಟೆಗಳನ್ನಿಟ್ಟು ಕೋಳಿಗಳನ್ನು ಸಾಕಿ ಮೊಟ್ಟೆ ಮಾರಾಟದಲ್ಲಿ ಯಶಸ್ವಿಯಾಗಿದ್ದಾರೆ.

ಕೋಳಿ ಮೊಟ್ಟೆಗಳ ಸಾಕಾಣಿಕೆ ಆರಂಭ

ಕೋಳಿ ಮೊಟ್ಟೆಗಳ ಸಾಕಾಣಿಕೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಚಂದ್ರಕಾಂತ್ ಮತ್ತು ವಿಲ್ಸನ್ ವಿಜಯ್ ಎನ್ನುವ ಸ್ನೇಹಿತರು ವಿಭಿನ್ನ ರೀತಿಯ ಚಿಂತನೆಯ ಮೂಲಕ ಕೋಳಿ ಮೊಟ್ಟೆಗಳ ಸಾಕಾಣಿಕೆಯನ್ನು ಆರಂಭಿಸಿದ್ದಾರೆ. ಆದರೆ ಈ ಮೊಟ್ಟೆ ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗಳಿಗಿಂತ ಕೊಂಚ ವಿಭಿನ್ನವಾಗಿದೆ.

ವಿಶೇಷ ವರದಿ: ವಿದ್ಯಾರ್ಥಿಗಳಿಗೆ ಆನ್‌ಲೈನ್ ನರಕ ದರ್ಶನ!ವಿಶೇಷ ವರದಿ: ವಿದ್ಯಾರ್ಥಿಗಳಿಗೆ ಆನ್‌ಲೈನ್ ನರಕ ದರ್ಶನ!

ಬ್ರೌನ್ ಬಣ್ಣದ ಕೋಳಿ ಮೊಟ್ಟೆಗೆ ಉತ್ತಮ ಬೇಡಿಕೆ

ಬ್ರೌನ್ ಬಣ್ಣದ ಕೋಳಿ ಮೊಟ್ಟೆಗೆ ಉತ್ತಮ ಬೇಡಿಕೆ

ನಾಟಿ ಕೋಳಿಯ ಕಂದು ಬಣ್ಣದ ಮೊಟ್ಟೆಗಳನ್ನು ಹೋಲುವ ಈ ಮೊಟ್ಟೆ ಅತ್ಯಂತ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಉದ್ಯಮ ಆರಂಭಿಸುವ ಮೊದಲು ಕೊಂಚ ಭಿನ್ನವಾದುದನ್ನೇ ಮಾಡಬೇಕು ಎಂದು ಫೀಲ್ಡ್‌ಗಿಳಿದಿದ್ದ ಈ ಯುವಕರು ಬ್ರೌನ್ ಬಣ್ಣದ ಕೋಳಿ ಮೊಟ್ಟೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದನ್ನು ಮನಗಂಡಿದ್ದಾರೆ.

ಪ್ರತಿ ಮೊಟ್ಟೆಗೆ 10 ರೂಪಾಯಿಗಳ ಬೆಲೆ

ಪ್ರತಿ ಮೊಟ್ಟೆಗೆ 10 ರೂಪಾಯಿಗಳ ಬೆಲೆ

ಕೇರಳದಿಂದ ಈ ಕೋಳಿ ಮರಿಗಳನ್ನು ಪಡೆದು ಪುತ್ತೂರಿನ ಅರಿಯಡ್ಕ ಸಮೀಪದ ಮಡ್ಯಂಗಳ ಎಂಬಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ ಬ್ರೌನ್ ಕೋಳಿ ಮೊಟ್ಟೆಗಳ ಉತ್ಪಾದನೆಯನ್ನು ಆರಂಭಿಸಿದ್ದಾರೆ. ಮೊದಲಿಗೆ ಇನ್ನೂರು ಕೋಳಿಗಳೊಂದಿಗೆ ಆರಂಭಿಸಿದ ಈ ಯುವಕರು ಇದೀಗ ಕೋಳಿಗಳ ಸಂಖ್ಯೆಯನ್ನು 1200 ರವರೆಗೆ ಏರಿಸಿದ್ದಾರೆ. ಈ ಕೋಳಿಗಳ ವಿಶೇಷವೆಂದರೆ ಈ ಕೋಳಿಗಳು ವರ್ಷವಿಡೀ ಮೊಟ್ಟೆ ಇಡುತ್ತಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಗೆ 10 ರೂಪಾಯಿಗಳ ಬೆಲೆಯಿದೆ.

4 ತಿಂಗಳ ಸಾಕಾಣಿಕೆಯ ಬಳಿಕ ಮೊಟ್ಟೆ

4 ತಿಂಗಳ ಸಾಕಾಣಿಕೆಯ ಬಳಿಕ ಮೊಟ್ಟೆ

ಪ್ರತಿ ಕೋಳಿಮರಿಗಳನ್ನು 350 ರೂಪಾಯಿಗಳಂತೆ ಖರೀದಿಸಲಾಗಿದ್ದು, 4 ತಿಂಗಳ ಸಾಕಾಣಿಕೆಯ ಬಳಿಕ ಈ ಕೋಳಿಗಳು ಮೊಟ್ಟೆ ಇಡಲು ಆರಂಭಿಸುತ್ತದೆ. ಕೇವಲ ಕೋಳಿ ಮೊಟ್ಟೆಗಳನ್ನಲ್ಲದೆ, ಇರುವ ಜಾಗದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನೂ ಬೆಳೆಯುತ್ತಿದ್ದಾರೆ. ಥೈವಾನ್ ಪಪ್ಪಾಯ, ಪೈನಾಪಲ್, ವಿಶಿಷ್ಟ ರೀತಿಯಲ್ಲಿ ಚಪ್ಪರ ನಿರ್ಮಿಸಿ ಬೆಳೆಸುತ್ತಿರುವ ತೊಂಡೆ ಕಾಯಿ ಹೀಗೆ ಹಲವು ರೀತಿಯ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಉದ್ಯೋಗದ ನಿರೀಕ್ಷೆಯಲ್ಲಿ ತಮ್ಮ ಸಮಯವನ್ನು ಹಾಳು ಮಾಡುವ ಬದಲು ಪುತ್ತೂರಿನ ಈ ಯುವಕರು ಸ್ವಾವಲಂಬಿ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ.

English summary
2 Youth successful In yellow egg business in Puttur taluk in Dakshina Kannada district. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X