ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನೈತಿಕ ತಾಣವಾದ ಪುತ್ತೂರು ಗಾಂಧಿ ಮಂಟಪ (ವಿಶೇಷ ವರದಿ)

ಪುತ್ತೂರು ನಗರದ ಹೊರವಲಯದಲ್ಲಿರುವ ಪ್ರವಾಸಿ ತಾಣವಾದ ಬಿರುಮಲೆ ಬೆಟ್ಟದಲ್ಲಿರುವ "ಗಾಂಧಿ ಮಂಟಪ ಅನೈತಿಕ ಚಟುವಟಿಕೆಗಳ ತಾಣ

|
Google Oneindia Kannada News

ಮಂಗಳೂರು, ಆಗಸ್ಟ್ 15 : ಬ್ರಿಟಿಷ್ ದಾಸ್ಯ ತ್ವದ ಸಂಕೋಲೆಯಲ್ಲಿ ಬಂಧಿಯಾಗಿದ್ದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳೇ ಕಳೆದಿದ್ದು ಭಾರತೀಯರು ಪ್ರಜಾಪ್ರಭುತ್ವದ ಅಡಿಯಲ್ಲಿ ತಮ್ಮನ್ನು ತಾವು ಅಳುತ್ತಿದ್ದಾರೆ ಆದರೆ ಈ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಮಂದಿಯ ಹೆಸರು ಬಳಕೆ ಮಾಡಿಕೊಂಡು ನಿರ್ಮಿಸಲಾದ ಸ್ಮಾರಕಗಳು ಮಾತ್ರ ಅನೈತಿಕ ಚಟುವಟಿಕೆಯ ತಾಣಗಳಾಗಿ ಈ ಸ್ವಾತಂತ್ರ್ಯ ಯೋಧರಿಗೆ ಅವಮಾನ ಮಾಡುವ ಸ್ಥಿತಿ ತಲುಪಿದೆ.

ಜೆಸಿಬಿ ಯಂತ್ರ ಚಲಾಯಿಸಿ ಅಚ್ಚರಿಗೆ ಕಾರಣರಾದ ಸಚಿವ ಖಾದರ್ಜೆಸಿಬಿ ಯಂತ್ರ ಚಲಾಯಿಸಿ ಅಚ್ಚರಿಗೆ ಕಾರಣರಾದ ಸಚಿವ ಖಾದರ್

ಪುತ್ತೂರು ನಗರದ ಹೊರವಲಯದಲ್ಲಿರುವ ಪ್ರವಾಸಿ ತಾಣವಾದ ಬಿರುಮಲೆ ಬೆಟ್ಟದಲ್ಲಿರುವ "ಗಾಂಧಿ ಮಂಟಪ! ಇದಕ್ಕೊಂದು ಉತ್ತಮ ಉದಾಹರಣೆ.

Puttur Gandhi Mantap turns as spot for illigeal activities

ಪುತ್ತೂರಿನ ಪ್ರವಾಸೋದ್ಯಮ ತಾಣವಾದ ಬಿರುಮಲೆ ಬೆಟ್ಟದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಮೊದಲ ಮೊದಲಿಗರಾದ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ಸ್ಮರಣೆಯ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವ ಗಾಂಧಿ ಮಂಟಪ ಈಗ ಅನಾಥ ಅವಸ್ಥೆಗೆ ತಲುಪಿದೆ.

ಯುವತಿ ಅಶ್ಲೀಲ ಚಿತ್ರ ಫೇಸ್‌ಬುಕ್‌ಗೆ ಹಾಕಿದವನಿಗೆ 1 ವರ್ಷ ಜೈಲುಯುವತಿ ಅಶ್ಲೀಲ ಚಿತ್ರ ಫೇಸ್‌ಬುಕ್‌ಗೆ ಹಾಕಿದವನಿಗೆ 1 ವರ್ಷ ಜೈಲು

ಗಾಂಧಿ ತಾತನ ಆದರ್ಶ ತತ್ವಗಳ ಆಳವಾಗಿ ಉಳಿಯ ಬೇಕಾಗಿದ್ದ ಈ ಗಾಂಧಿ ಮಂಟಪ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ನಿರ್ಮಾಣವಾದ ಹಂಚಿಕೆಗೆ ತಲುಪಿದೆ. ಮಹಾತ್ಮನ ಹೆಸರಿನಲ್ಲಿ ನಿರ್ಮಿಸಲಾಗಿರುವ ಗೌರವದ ಸ್ಮಾರಕದಲ್ಲಿ ಗಾಂಧಿ ತಾತಾ ಸಹಿಸದ ಚಟುವಟಿಕೆಗಳೇ ಈಗ ರಾರಾಜಿಸುತ್ತಿದ್ದು ವಿಕೃತ ಗೋಡೆ ಬರಹಗಳಿಂದ ತುಂಬಿಕೊಂಡಿರುವ ಗಾಂಧಿ ಮಂಟಪ ನಾಗರಿಕರು ನೋಡಲು ಅಸಹ್ಯ ಪಡುವಂತಾಗಿದೆ.

Puttur Gandhi Mantap turns as spot for illigeal activities

ಬಿರುಮಲೆ ಬೆಟ್ಟದಲ್ಲಿರುವ ಈ ಗಾಂಧಿ ಮಂಟಪದಲ್ಲಿ ಕೆಲ ವರ್ಷಗಳ ಹಿಂದೆ ಅಪರೂಪಕ್ಕೊಂದು ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಇದೆಲ್ಲ ಈಗ ನೆನಪು ಮಾತ್ರ. ಪ್ರಸ್ತುತ ಸಂಪೂರ್ಣವಾಗಿ ಪಾಳು ಬಿದ್ದಿರುವ ಈ ಮಂಟಪದಲ್ಲಿ ಕಾಣಸಿಗುವುದು ಮದ್ಯದ ಚಟುವಟಿಕೆಗಳು, ಗಾಂಜಾ ಸೇವನೆ, ನಡೆಸಿದ ಕುರುಹುಗಳು, ವಿಕೃತ ಮನಸ್ಸಿನ ಅಶ್ಲೀಲ ಗೋಡೆ ಬರಹಗಳು ಮಾತ್ರ. ಇದರಿಂದಾಗಿ ಯಾವುದೇ ಸಜ್ಜನ ಕುಟುಂಬ ಈ ಗಾಂಧಿ ಮಂಟಪವನ್ನು ವೀಕ್ಷಣೆ ಮಾಡಲು ಸಾಧ್ಯವಿರದ ಸ್ಥಿತಿ ನಿರ್ಮಾಣವಾಗಿದೆ.

Puttur Gandhi Mantap turns as spot for illigeal activities

ಹಸಿರು ಪರಿಸರದ ಪ್ರಶಾಂತ ಸ್ಥಳದಲ್ಲಿರುವ ಈ ಗಾಂಧಿ ಮಂಟಪ ಈಗ ಸಂಪೂರ್ಣವಾಗಿ ಅಪವಿತ್ರ ಗೊಂಡಿದೆ. ವಿಶಾಲವಾದ ವೇದಿಕೆ ಬಲ ಮತ್ತು ಎಡದಲ್ಲಿ ಪ್ರತ್ಯೇಕ ಎರಡು ಕೊಠಡಿಗಳು ಪ್ರತ್ಯೇಕ ಎರಡು ಶೌಚಾಲಯದ ಕೊಠಡಿಗಳು ಇರುವ ಈ ಕಟ್ಟಡದ ಕಿಟಕಿ ಬಾಗಿಲುಗಳು ಇದೀಗ ಯಾರದೋ ಮನೆಯಲ್ಲಿ ಮರೆಯಾಗಿ ಹೋಗಿವೆ.

ಕಿಟಕಿಗಳನ್ನು ಮತ್ತು ಬಾಗಿಲು ದರಗಳನ್ನು ಗೋಡೆ ಅಗೆದು ಕೊಂಡೊಯ್ಯಲಾಗಿದೆ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಿತ್ತು ತೆಗೆದು ಕೊಂಡೊಯ್ಯಲಾಗಿದೆ ಪ್ರಸ್ತುತ ಇಲ್ಲಿ ಯಾರೂ ಕೇಳುವವರಿಲ್ಲ ಹೇಳುವವರು ಕೂಡ ಇಲ್ಲವೇ ಇಲ್ಲ.

English summary
The famous Gandhi Mantap at Birumale gudde, Puttur is now become a spot for Illigeal activities. Drug, bad writings on walls, Boosing and other activities has made the Gandhi mantap a no entry spot for the touristers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X