ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಲಿರುವ ಪುತ್ತೂರಿನ ಪೋರ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 19 : ಕಲೆ ಎಂಬುದು ಗಡಿ, ಭಾಷೆಗಳ ಎಲ್ಲೆ ಮೀರುತ್ತದೆ. ಎಲ್ಲೋ ಹುಟ್ಟಿ ಬೆಳೆದ ಕಲೆಯೊಂದು ಇನ್ನೆಲ್ಲೋ ಪ್ರಸಿದ್ಧಿಗೆ ಬರುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನ ಪುತ್ತೂರು ಎಂಬ ಪುಟ್ಟ ಪಟ್ಟಣದ ಬಾಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿರುವುದು.

ಪಾಶ್ಚಿಮಾತ್ಯ ದೇಶಗಳಲ್ಲಿನ ಅತ್ಯಂತ ಪ್ರಸಿದ್ದ ನೃತ್ಯ ಪ್ರಾಕಾರ ವಾದ ಹಿಪ್ ಹಾಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪೋರನೋರ್ವ ಸಾಧನೆಯ ಶಿಖರವೇರಿದ್ದಾನೆ. ಹಿಪ್ ಹಾಪ್ ಡ್ಯಾನ್ಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ತೋರಿರುವ ಈ ಪೋರ ಇದೀಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಪ್ರತಿಭೆ ಅನಾವರಣಗೊಳಿಸಲು ಸಜ್ಜಾಗಿದ್ದಾನೆ.

ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು ಕುಣಿದ ಪೊಲೀಸಪ್ಪ, ತನಿಖೆಗೆ ಇಲಾಖೆ ಆದೇಶಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು ಕುಣಿದ ಪೊಲೀಸಪ್ಪ, ತನಿಖೆಗೆ ಇಲಾಖೆ ಆದೇಶ

ಎಲ್ಲಿ ಕಲೆಯನ್ನು ಆರಾಧಿಸಲಾಗುತ್ತದೋ ಅಲ್ಲಿ ಕಲೆ ನೆಲೆ ನಿಲ್ಲುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸ್ಟ್ರೀಟ್ ಡ್ಯಾನ್ಸ್ ಆಗಿ ಪ್ರಸಿದ್ಧಿ ಪಡೆದ ಹಿಪ್ ಹಾಪ್ ಡ್ಯಾನ್ಸ್ ಭಾರತದಲ್ಲೂ ಇತ್ತೀಚಿನ ದಿಗಳಲ್ಲಿ ಬೆಳೆಯುತ್ತಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಊರಿನ ಹಿಪ್ ಹಾಪ್ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಕಾತರದಲ್ಲಿದೆ.

ವೈರಲ್ ವಿಡಿಯೋ: ಹೋಳಿ ಹಬ್ಬದಂದು ಡಾನ್ಸ್ ಮಾಡಿದ್ದ ವಾಜಪೇಯಿವೈರಲ್ ವಿಡಿಯೋ: ಹೋಳಿ ಹಬ್ಬದಂದು ಡಾನ್ಸ್ ಮಾಡಿದ್ದ ವಾಜಪೇಯಿ

Puttur boy to participate in Hip-hop dance competition in Netherlands

ಪುತ್ತೂರಿನ ವಿವೇಕಾನಂದ ಶಾಲೆಯ ನಾಲ್ಕನೇ ತರಗತಿಯ ಹಿಶಾನ್ ತನ್ನ ನೃತ್ಯ ಪ್ರತಿಭೆಯ ಮೂಲಕ ಮನೆ ಮಾತಾಗಿದ್ದಾನೆ. ಬಾಲ್ಯ ದಿಂದಲೂ ಡ್ಯಾನ್ಸ್ ಹಾಗೂ ನಟನೆಯಲ್ಲಿ ಅಭಿರುಚಿಯನ್ನು ಹೊಂದಿದ್ದ ಹಿಶಾನ್ ಹಿಪ್ ಹಾಪ್ ಡ್ಯಾನ್ಸ್ ನತ್ತ ಆಕರ್ಷಿತನಾಗಿದ್ದ.

ರಸ್ತೆಯಲ್ಲಿ ಕಿಕಿ ಡ್ಯಾನ್ಸ್‌ ಮಾಡೋರಿಗೆ ಖಾಕಿ ಹೇಳಿದ್ದೇನು?ರಸ್ತೆಯಲ್ಲಿ ಕಿಕಿ ಡ್ಯಾನ್ಸ್‌ ಮಾಡೋರಿಗೆ ಖಾಕಿ ಹೇಳಿದ್ದೇನು?

ಈ ಹಿನ್ನೆಲ್ಲೆಯಲ್ಲಿ ಹಿಪ್ ಹಾಪ್ ನೃತ್ಯ ಪ್ರಕಾರದ ಬಗ್ಗೆ ತರಬೇತಿ ಪಡೆದುಕೊಂಡಿದ್ದಾನೆ. ತನ್ನ ಹಿಪ್ ಹಾಪ್ ನೃತ್ಯ ಪ್ರತಿಭೆಯನ್ನು ದಕ್ಷಿಣ ಕನ್ನಡ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಪ್ರದರ್ಶಿಸಿದ್ದಾನೆ. ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಸಿದ್ಧತೆ ನಡೆಸಿದ್ದಾನೆ.

ಅಕ್ಟೋಬರ್ ನಲ್ಲಿ ನೆದರ್ ಲ್ಯಾಂಡ್ ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಹಿಪ್ ಹಾಪ್ ಡ್ಯಾನ್ಸ್ ಸ್ಪರ್ಧೆಯ ಸೋಲೋ ವಿಭಾಗದಲ್ಲಿ ಈತ ಸ್ಪರ್ಧಿಸಲಿದ್ದು, ಈತನ ಜೊತೆಗೆ ಈತನಿಗೆ ತರಬೇತಿ ನೀಡಿದ ಡ್ಯಾನ್ಸ್ ಟೀಂ ಕೂಡಾ ನೆದರ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದೆ.

Puttur boy to participate in Hip-hop dance competition in Netherlands

ಡ್ಯಾನ್ಸ್ ನಲ್ಲಿ ಅಭಿರುಚಿ ಇರುವ ಈತ ಯಾವುದೇ ಸಂಗೀತಕ್ಕೂ ಹೆಜ್ಜೆ ಹಾಕುವ ಸಾಮಥ್ಯವನ್ನು ಹೊಂದಿದ್ದಾನೆ. ಇದೇ ಕಾರಣಕ್ಕಾಗಿ ಮೈಸೂರಿನಲ್ಲಿ ನಡೆದ ಹಿಪ್ ಹಾಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗಿಯಾಗಲು ಮೊದಲ ಅವಕಾಶವನ್ನು ನೀಡಿದ್ದರು.

ಈ ಸ್ಪರ್ಧೆಯಲ್ಲಿ ಉತ್ತಮ ಸಾಧನೆಯನ್ನು ತೋರುವ ಮೂಲಕ ಹಿಪ್ ಹಾಪ್ ಡ್ಯಾನ್ಸ್ ನಲ್ಲಿ 12 ವರ್ಷ ಕೆಳಗಿನ ವಿಭಾಗದಲ್ಲಿ ರಾಜ್ಯ ಮಟ್ಟದ ಪ್ರತಿಭೆ ಎನ್ನುವ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾನೆ ಹಿಶಾನ್ .

ಡ್ಯಾನ್ಸ್ ಹಾಗೂ ನಟನೆಯನ್ನು ಕರಗತ ಮಾಡಿಕೊಂಡಿರುವ ಹಿಶಾನ್ ಗೆ ತಾನೊಬ್ಬ ಬೆಸ್ಟ್ ಡ್ಯಾನ್ಸರ್ ಜೊತೆಗೆ ಉತ್ತಮ ನಟನಾಗಬೇಕೆಂಬ ಅಭಿಲಾಷೆ ಹೊಂದಿದ್ದಾನೆ. ಎಳೆವಯಸ್ಸಿನಲ್ಲೇ ಈ ರೀತಿಯ ಶ್ರೇಷ್ಟ ಸಾಧನೆ ಮಾಡಿದ ಈ ಪೋರನ ಡ್ಯಾನ್ಸ್ ಗೆ ಈಗ ರಾಜ್ಯದಾದ್ಯಂತ ಅಭಿಮಾನಿಗಳೂ ಸೃಷ್ಟಿಯಾಗಿದ್ದಾರೆ.

English summary
Hishan from Puttur to participate in International Hip-hop dance competition that will be held in Netherlands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X