ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಣಿ ಅತ್ಯಾಚಾರಿ ಸೈನೈಡ್ ಮೋಹನ್ ಗೆ ಸಾಯುವವರೆಗೆ ಜೈಲು

|
Google Oneindia Kannada News

ಮಂಗಳೂರು, ಅಕ್ಟೋಬರ್ 12: ದೇಶವನ್ನೇ ಬೆಚ್ಚಿ ಬೀಳಿಸಿದ ಸಿರಿಯಲ್ ಕಿಲ್ಲರ್ ಹಾಗು ಸರಣಿ ಅತ್ಯಾಚಾರ ಪ್ರಕರಣಗಳ ಆರೋಪಿ ಸೈನೈಡ್ ಮೋಹನ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್‌ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ವಿಭಾಗೀಯ ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ.

ಸರಣಿ ಅತ್ಯಾಚಾರಿ, ಕೊಲೆಗಾರ ಸೈನೈಡ್ ಮೋಹನ್ 4ನೇ ಕೇಸಿನಲ್ಲೂ ದೋಷಿಸರಣಿ ಅತ್ಯಾಚಾರಿ, ಕೊಲೆಗಾರ ಸೈನೈಡ್ ಮೋಹನ್ 4ನೇ ಕೇಸಿನಲ್ಲೂ ದೋಷಿ

ಅನಿತಾ ಬರಮಾರ್ ಎನ್ನುವರ ಕೊಲೆ ಪ್ರಕರಣದಲ್ಲಿ ಆರೋಪಿ ಮೋಹನ್‌ ಗೆ ಮರಣದಂಡನೆ ಬದಲಾಗಿ ಸಾಯುವವರೆಗೆ ಸಾಧಾರಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ನ್ಯಾಯಮೂರ್ತಿ ರವಿ ಮಳೀಮಠ್ ಹಾಗೂ ಜಾನ್‌ ಮೈಕೆಲ್ ಖುನ್ಹಾ ಅವರಿದ್ದ ವಿಭಾಗೀಯ ಪೀಠ ಗುರುವಾರ‌ ತೀರ್ಪು ನೀಡಿದೆ.

Puttur Anitha murder case, Cyanide Mohan gets life imprisonment till his natural death

ಅನಿತಾ ಎನ್ನುವರನ್ನು ದಿನಾಂಕ 17-9-2009ರಂದು ಪುತ್ತೂರಿನ ಬಸ್ ನಿಲ್ದಾಣಕ್ಕೆ ಒಡವೆ ಹಾಕಿಕೊಂಡು ಬಾ ಎಂದು ನಂಬಿಸಿ. ಇಬ್ಬರೂ ಮಡಿಕೇರಿಗೆ ಹೋಗಿ ಅಲ್ಲಿನ ವಸತಿ ನಿಲಯದಲ್ಲಿ ತಂಗಿದ್ದರು.

ಯುವತಿಯೊಡನೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಬಳಿಕ ಗರ್ಭ ಧರಿಸುವ ಸಾಧ್ಯತೆ ಇದೆ ಹಾಗಾಗಿ ನಾನು ಕೊಡುವ ಗುಳಿಗೆ ತಿಂದರೆ ಗರ್ಭ ನಿಲ್ಲುವುದಿಲ್ಲ ಎಂದು ಸೈನೈಡ್ ನೀಡಿದ್ದ. ಆಕೆ ಅದನ್ನು ತಿಂದು ಮೃತಪಟ್ಟ ಬಳಿಕ. ಆಕೆಯ ಬಳಿ ಇದ್ದ ಚಿನ್ನ, ಮೊಬೈಲ್‍ನೊಂದಿಗೆ ಮೋಹನ್ ಪರಾರಿಯಾಗಿದ್ದ.

ಈ ಪ್ರಕರಣದಲ್ಲಿ ಮೋಹನ್ ಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್‌ ಮರಣ ದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮೋಹನ್ ಹೈಕೋರ್ಟ್ ಮೊರೆ ಹೋಗಿದ್ದ.

English summary
Puttur Anitha murder case: Cyanide Mohan gets life imprisonment till his natural death ordered by Karnataka High Court on October 12th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X