ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"84 ವರ್ಷದ ನಾನಿದ್ದೆ, ಪುನೀತ್ ನನ್ನು ಯಾಕೆ ಕಸಿದುಕೊಂಡೆ ವಿಧಿಯೇ"

|
Google Oneindia Kannada News

ಮಂಗಳೂರು, ನ 10: ನಗರದ ಪ್ರಸಿದ್ದ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ವಿಧಿವಶರಾದ ಪುನೀತ್ ರಾಜಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರಾವಳಿ ಭಾಗದ ಪ್ರಮುಖ ನಾಯಕರು ಇದರಲ್ಲಿ ಭಾಗವಹಿಸಿದ್ದರು.

ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು, ಜೆ.ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನ ದ. ಕ ಜಿಲ್ಲಾ ಸಮಿತಿ , ಯುವವಾಹಿನಿ, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಗುರುಬೆಳದಿಂಗಳು ಮತ್ತು ಇತರ ಸಂಘ ಸಂಸ್ಥೆಗಳ ವತಿಯಿಂದ, ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರೂ ಆಗಿರುವ ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆದಿದೆ.

 ಇದೆಂತಹ ವಿಪರ್ಯಾಸ: ಪುನೀತ್ ಮದುವೆ, ತಿಥಿ ಎರಡಕ್ಕೂ ಅದೇ ಕ್ಯಾಟರಿಂಗ್ ತಂಡ ಇದೆಂತಹ ವಿಪರ್ಯಾಸ: ಪುನೀತ್ ಮದುವೆ, ತಿಥಿ ಎರಡಕ್ಕೂ ಅದೇ ಕ್ಯಾಟರಿಂಗ್ ತಂಡ

ತೀರಾ ಅಪರೂಪ ಎನ್ನುವಂತೆ ಕನ್ನಡದ ನಾಯಕ ನಟರೊಬ್ಬರಿಗೆ ಸಲ್ಲಿಸಲಾದ ನುಡಿನಮನ ಕಾರ್ಯಕ್ರಮ ಇದಾಗಿತ್ತು. ಕರಾವಳಿಗರು ಚಲನಚಿತ್ರ ಕಲಾವಿದರ ಸ್ಟೇಟಸ್ ಹಾಕುವುದು, ಬ್ಯಾನರ್ ಹಾಕುವುದು ಕಮ್ಮಿ. ಆದರೆ, ಅಪ್ಪು ನಮ್ಮನ್ನು ಅಗಲಿದ ನೋವಿನಿಂದ ಈ ಭಾಗದ ಜನರೂ ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆಂದು ಕಾರ್ಯಕ್ರಮದ ನಿರೂಪಕರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಸ್ತಾವನೆ ಭಾಷಣ ಮಾಡಿದ ಜೆ.ಪಿ.ನಾರಾಯಣ ಪ್ರತಿಷ್ಠಾನದ ಟ್ರಸ್ಟಿ ಮಹೇಶ್ ಕುಮಾರ್ ಮಾತನಾಡಿ, "ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಪುನೀತ್ ತೊಡಗಿಸಿಕೊಂಡಿದ್ದು ಒಂದು ಕಡೆಯಾದರೆ, ಪೃಥ್ವಿ, ರಾಜಕುಮಾರ ಮುಂತಾದ ಸಿನಿಮಾಗಳು ಜನರಿಗೆ ಪ್ರೇರಣೆಯಾಯಿತು"ಎಂದು ಅಪ್ಪು ಅವರನ್ನು ನೆನೆಸಿಕೊಂಡರು. "83 ವರ್ಷದ ನಾನಿದ್ದೆ, ಪುನೀತ್ ನನ್ನು ಯಾಕೆ ಕಸಿದುಕೊಂಡೆ ವಿಧಿಯೇ" ಎಂದ ಜನಾರ್ಧನ ಪೂಜಾರಿ:

ಶಿವಮೊಗ್ಗದಲ್ಲಿ ಪುನೀತ್ ರಾಜಕುಮಾರ್ ಮುದ್ದಾಡಿದ್ದ ಆನೆಗೆ ಪುನೀತ್ ಹೆಸರು ನಾಮಕರಣಶಿವಮೊಗ್ಗದಲ್ಲಿ ಪುನೀತ್ ರಾಜಕುಮಾರ್ ಮುದ್ದಾಡಿದ್ದ ಆನೆಗೆ ಪುನೀತ್ ಹೆಸರು ನಾಮಕರಣ

 ಕಾರ್ಯಕ್ರಮದಲ್ಲಿ ಭಾವೋದ್ವೇಗದಿಂದ ಮಾತನಾಡಿದ ಜನಾರ್ಧನ ಪೂಜಾರಿ

ಕಾರ್ಯಕ್ರಮದಲ್ಲಿ ಭಾವೋದ್ವೇಗದಿಂದ ಮಾತನಾಡಿದ ಜನಾರ್ಧನ ಪೂಜಾರಿ

ಕಾರ್ಯಕ್ರಮದಲ್ಲಿ ಭಾವೋದ್ವೇಗದಿಂದ ಮಾತನಾಡಿದ ಜನಾರ್ಧನ ಪೂಜಾರಿ, "ಪುನೀತ್ ರಾಜಕುಮಾರ್ ಅವರು ಹೋಗಿಬಿಟ್ಟರು, ಭಾರತದ ಮಹಾನ್ ಪ್ರತಿಭೆಯನ್ನು ನಾವು ಕಳೆದುಕೊಂಡು ಬಿಟ್ಟೆವು. ಎಲ್ಲರೂ ಹೇಳಿದ್ದಾರೆ ಪುನೀತ್ ಅವರು ಬಾರದ ಲೋಕಕ್ಕೆ ಹೋಗಿಬಿಟ್ಟರು ಎಂದು, ಹೌದು ಇದು ಅಕ್ಷರಶಃ ನಿಜ, ಅವರು ನಮ್ಮನ್ನು ಬಿಟ್ಟು ಹೋಗಿಯೇ ಬಿಟ್ಟರು"ಎಂದು ಪೂಜಾರಿಯವರು ಕಣ್ಣೀರು ಹಾಕಿದ್ದಾರೆ.

 84 ವರ್ಷದ ನಾನಿದ್ದೆ, ಪುನೀತ್ ನನ್ನು ಯಾಕೆ ಕಸಿದುಕೊಂಡೆ ವಿಧಿಯೇ

84 ವರ್ಷದ ನಾನಿದ್ದೆ, ಪುನೀತ್ ನನ್ನು ಯಾಕೆ ಕಸಿದುಕೊಂಡೆ ವಿಧಿಯೇ

"ಪುನೀತ್ ಇಲ್ಲ ಎನ್ನುವುದು ಎಷ್ಟು ಸತ್ಯವಾದ ಮಾತು, ಅವರನ್ನು ಕರೆದುಕೊಂಡು ಬರಲು ನಡೆಸಿದ ಸರ್ವಪ್ರಯತ್ನಗಳು ವಿಫಲವಾದವು. ದೇವರು ಎಷ್ಟು ಕ್ರೂರಿಯಾಗಿಬಿಟ್ಟ, ಎಂತಹ ಮಗುವನ್ನು ಕರೆದುಕೊಂಡು ಹೋಗಿಬಿಟ್ಟೆ ವಿಧಿಯೇ? ನಿನಗೆ ಬೇರೆ ಯಾರೂ ಸಿಗಲಿಲ್ಲವೇ ಭಗವಂತ, 84 ವರ್ಷ ತುಂಬಿದ ನಾನಿದ್ದೇನೆ, ನನ್ನನು ನೀನು ಕೊಂಡು ಹೋಗಬಹುದಿತ್ತಲ್ಲಾ ದೇವರೇ"ಎಂದು ಕಾರ್ಯಕ್ರಮದಲ್ಲಿ ಜನಾರ್ಧನ ಪೂಜಾರಿ ನೋವಿನ ಮಾತನ್ನು ಆಡಿದ್ದಾರೆ.

 ಭಗವಂತ ನೀನು ತಪ್ಪು ಮಾಡಿಬಿಟ್ಟೆ. ನೀನು ಆ ರೀತಿ ಮಾಡಬಾರದಾಗಿತ್ತು

ಭಗವಂತ ನೀನು ತಪ್ಪು ಮಾಡಿಬಿಟ್ಟೆ. ನೀನು ಆ ರೀತಿ ಮಾಡಬಾರದಾಗಿತ್ತು

"ಆ ಮಗುವನ್ನು ನೀನು ಕರೆದುಕೊಂಡು ಹೋದೆ, ಇಲ್ಲಾ ಭಗವಂತ ನೀನು ತಪ್ಪು ಮಾಡಿಬಿಟ್ಟೆ. ನೀನು ಆ ರೀತಿ ಮಾಡಬಾರದಾಗಿತ್ತು ಪರಮಾತ್ಮ, ನನ್ನ ಕಾಲ ಮುಗೀತಾ ಬಂತು ಎಂದು ಹಲವಾರು ಬಾರಿ ಹೇಳಿದ್ದೇನೆ. ಲಕ್ಷ್ಮಣ ಕೊಡಸೆಯವರು ನನ್ನ ಜೀವನಚರಿತ್ರೆಯ ಎರಡನೇ ಭಾಗವನ್ನು ಬರೀತಾ ಇದ್ದಾರೆ. ಆ ಭಾಗ ಬಂದು ಹೋದರೂ ಜನರಿಗೆ ಪ್ರಯೋಜನವಾಗುವುದಿಲ್ಲ. ಆದರೂ, ಇದೇ ಹಾಲ್ ನಲ್ಲಿ ಪುಸ್ತಕ ಬಿಡುಗಡೆ ಮಾಡುತ್ತೇವೆ" ಎಂದು ಜನಾರ್ಧನ ಪೂಜಾರಿಯವರು ಹೇಳಿದ್ದಾರೆ.

 ಪುನೀತ್ ರಾಜಕುಮಾರ್ ನೆನೆಸಿಕೊಂಡ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

ಪುನೀತ್ ರಾಜಕುಮಾರ್ ನೆನೆಸಿಕೊಂಡ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಮಾತನಾಡುತ್ತಾ, "ನಾರಾಯಣ ಗುರುಗಳದ್ದು ಎಲ್ಲರೂ ಒಂದೇ ಎನ್ನುವ ಸಂದೇಶ. ಪುನೀತ್ ಅವರ ಅಕಾಲಿಕ ಸಾವಿನ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಮಾಡುತ್ತದೆ ಎಂದರೆ, ಅವರ ಜನಪ್ರಿಯತೆ ಏನು ಎನ್ನುವುದು ಗೊತ್ತಾಗುತ್ತದೆ. ಅವರ ಸಮಾಧಿಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ, ಪುತ್ತೂರಿನಲ್ಲಿ ನಡೆಯುವ ಕಂಬಳಕ್ಕೆ ನೀವು ಬರಬೇಕು ಎಂದು ನಾನು ಪುನೀತ್ ಅವರಲ್ಲಿ ಕೇಳಿಕೊಂಡಿದ್ದೆ. ಚಿತ್ರೀಕರಣದಲ್ಲಿ ಇದ್ದೇನೆ, ಮುಂದಿನ ವರ್ಷ ಬರುತ್ತೇನೆ ಎಂದರು, ಈಗ ಬಾರದ ಲೋಕಕ್ಕೆ ಹೋಗಿದ್ದಾರೆ" ಎಂದು ಸೊರಕೆ ಬೇಸರ ವ್ಯಕ್ತ ಪಡಿಸಿದ್ದಾರೆ.

English summary
Puneeth Rajkumar Nudi Namana Programme In Kudroli Temple, Mangaluru. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X