ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರೋಹಿತ್ಯದಲ್ಲಿ ಯಶಸ್ಸು ಸಾಧಿಸಿದ ಬಂಟ್ವಾಳದ ಪಿಯು ವಿದ್ಯಾರ್ಥಿನಿ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 28; ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಾಟಿಯಾಗಿ ಸಾಧನೆ ಮಾಡುತ್ತಿದ್ದಾರೆ. ಆದರೆ ವೇದ, ಶಾಸ್ತ್ರ, ಸಂಸ್ಕೃತ, ಪೌರೋಹಿತ್ಯ ಪುರುಷರಿಗೆ ಮಾತ್ರ ಸೂಕ್ತ ಎಂದು ನಾವು ನಂಬಿದ್ದೇವೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಸುಲಲಿತವಾಗಿ ವೇದ, ಮಂತ್ರೋಚ್ಛಾರಗಳನ್ನು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್ ಸಚ್ಚಿದಾನಂದ ಮೂರ್ತಿ ವಿರುದ್ಧ ದೂರುಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್ ಸಚ್ಚಿದಾನಂದ ಮೂರ್ತಿ ವಿರುದ್ಧ ದೂರು

ಬಂಟ್ವಾಳದ ಕಶೆಕೋಡಿ ನಿವಾಸಿ,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್ ಪುತ್ರಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನಘಾ ವೇದಾಧ್ಯಯನ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

 ಬ್ರಾಹ್ಮಣ ಮಹಿಳೆಯ ಅಂತಿಮ ಸಂಸ್ಕಾರ ನಡೆಸಿದ ಸಂಸದ ನಾಸೀರ್ ಹುಸೇನ್ ಬ್ರಾಹ್ಮಣ ಮಹಿಳೆಯ ಅಂತಿಮ ಸಂಸ್ಕಾರ ನಡೆಸಿದ ಸಂಸದ ನಾಸೀರ್ ಹುಸೇನ್

ಮನೆಯಲ್ಲಿ ಪ್ರತಿದಿನ ನಡೆಯುವ ಸಂಗೀತ ಪಾಠ, ಗೀತಾಧ್ಯಯನದಿಂದ ಆಕರ್ಷಿತರಾದ ಅನಘಾ ವೇದಾಧ್ಯಯನದಲ್ಲಿ ಕೂಡಾ ಮಹಿಳೆಯರು ಸಾಧನೆ ಮಾಡಬಹುದು ಎಂದು ನಿರೂಪಿಸಿದ್ದಾರೆ.

PUC Student From Bantwal Learned Paurohitya

ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಿಧ್ಯಾಭ್ಯಾಸ ಮಾಡುತ್ತಿರುವ ಅನಘಾ ಪೌರೋಹಿತ್ಯವನ್ನು ಮಾಡುತ್ತಿದ್ದಾರೆ. ಮನೆಯಲ್ಲಿ‌ನಿತ್ಯ ನಡೆಯುವ ಪೂಜೆ, ಹೋಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 ಹೀಗೊಂದು ಅಪರೂಪದ ಮದುವೆಗೆ ಸರಕಾರದ್ದೇ ಪೌರೋಹಿತ್ಯ ಹೀಗೊಂದು ಅಪರೂಪದ ಮದುವೆಗೆ ಸರಕಾರದ್ದೇ ಪೌರೋಹಿತ್ಯ

PUC Student From Bantwal Learned Paurohitya

ಚಿಕ್ಕಂದಿನಿಂದಲೇ ಪೌರೋಹಿತ್ಯ, ವೇದಾಧ್ಯಯನ, ವೈದಿಕ ಕಾರ್ಯಕ್ರಮಗಳಲ್ಲಿ ವಿಶೇಷ ಅಸಕ್ತಿ ಹೊಂದಿರುವ ಅನಘಾಗೆ ಮನೆಯ ವೈದಿಕ ಪರಿಸರವೇ ಮುಖ್ಯ ಪ್ರೇರಣೆಯಾಗಿದೆ. ಸಂಸ್ಕೃತ ದಲ್ಲಿ ವ್ಯಾಸಾಂಗ ಮಾಡಬೇಕೆಂಬ ಆಸೆಯನ್ನು ಅನಘಾ ಹೊಂದಿದ್ದಾರೆ.

English summary
Anaga from Bantwal, Dakshina Kannada district learned paurohitya and participate in homa. Anaga studying in PUC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X